Home ರಾಜ್ಯ ಉಡುಪಿ ರಘುಪತಿ ಭಟ್ ಉಚ್ಚಾಟನೆ: ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಸಂಸದ ಪ್ರತಾಪ ಸಿಂಹ

ರಘುಪತಿ ಭಟ್ ಉಚ್ಚಾಟನೆ: ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಸಂಸದ ಪ್ರತಾಪ ಸಿಂಹ

0

ಮೈಸೂರು: ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಉಚ್ಚಾಟನೆ ಮಾಡಿರುವುದಕ್ಕೆ ಬಿಜೆಪಿ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬರುತ್ತಿದ್ದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್‌ ಒಳ್ಳೆಯ ಹೋರಾಟ ರೂಪಿಸಿದ್ದರು. ಅವರಿಗೆ ಎಂಎಲ್ಎ ಟಿಕೆಟ್ಟೂ ಸಿಗಲಿಲ್ಲ, ಎಂಎಲ್‌ಸಿ ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಚಾಟನೆ ಮಾಡಿರುವುದು ಸರಿಯೇ? ಬುರ್ಖಾ ಸ್ಟೂಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ’ ಎಂದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ವಿಧಾನ ಪರಿಷತ್‌ ನೈರುತ್ಯ ಪದವೀಧರರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಘುಪತಿ ಭಟ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಹೀಗಾಗಿ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಬಿಜೆಪಿ ಮುಖಂಡರು ಅವರ ಮೇಲೆ ಮುನಿಸಿಕೊಂಡಿದ್ದರು.

ಈ ಸಂಬಂಧ ನೋಟಿಸ್‌ ನೀಡಿದ್ದ ರಾಜ್ಯ ಬಿಜೆಪಿ ಶಿಸ್ತು ಸಮಿತಿ, ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದಂತಾಗಿದೆ ಎಂದು ಆರೋಪಿಸಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

ಆಲಿಯಾ ಗೇಲಿ:

ರಘುಪತಿ ಭಟ್‌ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಕುರಿತು ಆಲಿಯಾ ಅಸ್ಸಾದಿ ತಮ್ಮ ಎಕ್ಸ್‌ ಖಾತೆಯಲ್ಲಿ ಗೇಲಿ ಮಾಡಿದ್ದರು. ಯಾವ ತಪ್ಪು ಮಾಡದ ನನ್ನನ್ನು ಕಾಲೇಜು ಮಂಡಳಿ ಹೊರಹಾಕುವಂತೆ ಮಾಡಿದ್ದರು. ದೇವರು ಅವರಿಗೆ ಸರಿಯಾಗಿಯೇ ಮಾಡಿದ್ದಾನೆ ಎಂದು ಬರೆದುಕೊಂಡಿದ್ದರು.

ಎ ವಾರ್ಷಿಕ ಪರೀಕ್ಷೆಗೆ 60 ದಿನಗಳು ಬಾಕಿ ಇರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿದ್ದೇನೆ ಎಂದು ತೋರಿಸಿದ್ದರಲ್ಲವೇ. ಆದರೆ, ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ಇದ್ದುಕೊಂಡೆ ನೋಡುವಂತಾಯಿತು ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು.

ಪ್ರತಾಪ್‌ ಸಿಂಗ್‌ ಅವರಿಗೆ ಬಿಜೆಪಿಯು ಕಟ್ಟರ್‌ ಹಿಂದುತ್ವವಾದಿಗಳು ಎನಿಸಿಕೊಂಡಿದ್ದ ತನಗೆ ಮತ್ತು ತನ್ನಂಥ ಈಶ್ವರಪ್ಪ ಅವರಿಗೆ, ಸಿ.ಟಿ. ರವಿ ಅವರಿಗೆ ಮತ್ತು ನಳೀನ್‌ ಕುಮಾರ್‌ ಅವರಿಗೆ ಲೊಕಸಭೆ ಚುನಾವಣೆಗೆ ಟಿಕೇಟ್‌ ನೀಡದಿರುವುದು ಮತ್ತು ಆಲಿಯಾ ಗೇಲಿ ಮಾಡಿರುವುದು ಸಂಸದ ಪ್ರತಾಪ್‌ ಸಿಂಹ್‌ ಅವರಿಗೆ ಬೇಸರ ತರಿಸಿದೆ. ಅವರು ಈಗ ಬಿಜೆಪಿ ವಿರುದ್ಧವೇ ಅಸಮಾಧಾನ ಹೊರಹಾಕಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

You cannot copy content of this page

Exit mobile version