ನಿನ್ನೆ ಮಣಿಪುರದ ವಿಡಿಯೋ ವೈರಲ್ ಆದಾಗಿನಿಂದ ಅಪರಾಧಿಗಳ ಕುರಿತು ಸಹಾನುಭೂತಿ ಹುಟ್ಟಿಸುವ ಕೆಲಸದಲ್ಲೂ ಕೆಲವು ಕಿಡಿಗೇಡಿಗಳು ತೊಡಗಿಕೊಂಡಿದ್ದು, ಅದರ ಭಾಗವಾಗಿ ಮಹಿಳೆಯರನ್ನು ಹಾಗೆ ಮೆರವಣಿಗೆ ಮಾಡಿದವರಿಗೆ ಪ್ರಚೋದನೆ ನೀಡಿದ್ದು ಒಂದು ಫೇಕ್ ವಿಡಿಯೋ ಎನ್ನುವ ಸುದ್ದಿ ಓಡಾಡುತ್ತಿತ್ತು. ಅದು ಇಂದು ಪ್ರಜಾವಾಣಿ ಪತ್ರಿಕೆಯಲ್ಲೂ ಸದರಿ ವಿಡಿಯೋದ ಫ್ಯಾಕ್ಟ್ ಚೆಕ್ ವರದಿಯೊಂದಿಗೆ ಈ ಘಟನೆಗೆ ಇಂಬು ನೀಡಿದ್ದು ಇದೇ ಉತ್ತರ ಪ್ರದೇಶ ಮೂಲ ವಿಡಿಯೋ ಎಂದು ಸುದ್ದಿ ಮಾಡಲಾಗಿತ್ತು.
ಸುದ್ದಿಯ ಪ್ರಕಾರ ಆ ವಿಡಿಯೋವನ್ನು ಕುಕಿಗಳು ಮೈತೇಯಿ ಮಹಿಳೆಯನ್ನು ಕೊಂದು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಹಾಕಿದ್ದಾರೆ ಸುದ್ದಿ ಹಬ್ಬಿದ ಕಾರಣ ಮೈತೇಯಿ ಸಮುದಾಯದವರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿತ್ತು.
ಆದರೆ ಅಧಿಕಾರಿಗಳ ಪ್ರಕಾರ ಈ ವಿಡಿಯೋ ವೈರಲ್ ಆಗುವ ಮೊದಲ ದಿನವೇ ಮೈತೇಯಿ ಗುಂಪು ಜನಾಂಗೀಯ ಹಲ್ಲೆಯಲ್ಲಿ ತೊಡಗಿತ್ತು. ಅದರ ಮುಂದುವರೆದ ಭಾಗವೇ ಈ ಬೆತ್ತಲೆ ಮೆರವಣಿಗೆ ಪ್ರಕರಣ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಆದರೆ ಸ್ಥಾಪಿತ ಹಿತಾಸಕ್ತಿಗಳು ತಮ್ಮ ಪ್ರೊಪಾಗಾಂಡದ ಭಾಗವಾಗಿ ಅಪರಾಧಿಗಳ ವಿರುದ್ಧ ಸಹಾನುಭೂತಿ ಮೂಡಿಸಲು ಹಾಗೂ ಜನರಲ್ಲಿ ಈ ಕುರಿತು ಆಕ್ರೋಶವನ್ನು ಒಂದಷ್ಟು ಕಡಿಮೆಗೊಳಿಸುವ ಸುಲುವಾಗಿ ಹೀಗೆ ಮಾಡಲಾಗಿದೆ ಎನ್ನಲಾಗುತ್ತಿದೆ.