Friday, July 11, 2025

ಸತ್ಯ | ನ್ಯಾಯ |ಧರ್ಮ

ಯಾವುದೇ ಸಮಯಕ್ಕೂ ಮೋದಿ ಸರ್ಕಾರದ ಪತನ – ಲಾಲೂ ಪ್ರಸಾದ್ ಯಾದವ್ ಭವಿಷ್ಯ

ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ಒಂದು ತಿಂಗಳ ನಂತರ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು “ಅತ್ಯಂತ ದುರ್ಬಲವಾಗಿದೆ” ಎಂದು ಹೇಳಿದ್ದಾರೆ.

ಶುಕ್ರವಾರ ರಾಷ್ಟ್ರೀಯ ಜನತಾ ದಳದ ಸಂಸ್ಥಾಪನಾ ದಿನದಂದು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನ್ನಾಡಿದ ಲಾಲೂ ಪ್ರಸಾದ್ ಯಾದವ್ “ಎಲ್ಲಾ ಪ್ರತಿಪಕ್ಷದ ಕಾರ್ಯಕರ್ತರಿಗೆ ನಾನು ಸಿದ್ಧರಾಗಿರಲು ಮನವಿ ಮಾಡುತ್ತೇನೆ, ಏಕೆಂದರೆ ಯಾವುದೇ ಸಮಯದಲ್ಲಿ ಚುನಾವಣೆಗಳು ನಡೆಯಬಹುದು. ದೆಹಲಿಯಲ್ಲಿ ಮೋದಿ ಸರ್ಕಾರವು ತುಂಬಾ ದುರ್ಬಲವಾಗಿದೆ ಮತ್ತು ಆಗಸ್ಟ್ ವೇಳೆಗೆ ಅದು ಬೀಳಬಹುದು” ಎಂದು ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.

“ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ಬಿಜೆಪಿ 240 ಸ್ಥಾನಗಳಿಗೆ ಸೀಮಿತವಾಯಿತು ಮತ್ತು ಸಮ್ಮಿಶ್ರ ಸರ್ಕಾರ ರಚಿಸಲು ಮೈತ್ರಿ ಪಾಲುದಾರರನ್ನು ಅವಲಂಬಿಸಬೇಕಾಯಿತು. ಈಗ ಮೈತ್ರಿ ಪಕ್ಷದಲ್ಲಿ ಗುರುತಿಸಿಕೊಂಡ ಅನೇಕರು ಜಾತ್ಯಾತೀತ ಮನೋಭಾವ ಹೊಂದಿರುವವರು. ಅವರಿಗೆ ಬಿಜೆಪಿಯ ಕೋಮುವಾದಿ ಸಿದ್ದಾಂತ ಒಗ್ಗುವುದಿಲ್ಲ. ಹೊಂದಾಣಿಕೆ ಸರಿ ಬರುವುದಿಲ್ಲ” ಎಂದು ಹೇಳಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷದ ಸಾಧನೆಯ ಬಗ್ಗೆ ಮತ್ತಷ್ಟು ತೃಪ್ತಿ ವ್ಯಕ್ತಪಡಿಸಿದರು.

ಶುಕ್ರವಾರ ರಾಷ್ಟ್ರೀಯ ಜನತಾ ದಳದ ಸಂಸ್ಥಾಪನಾ ದಿನದಂದು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಲಾಲು ಯಾದವ್ ಈ ಹೇಳಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page