Tuesday, September 9, 2025

ಸತ್ಯ | ನ್ಯಾಯ |ಧರ್ಮ

ಸಕಲೇಶಪುರ ಕಾಡಾನೆ ದಾಳಿ ಮನೆ ಸಂಪೂರ್ಣ ಜಕಂ ಬೀದಿ ಪಾಲಾದ ಕುಟುಂಬ

ಹಾಸನ :ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮರ್ಕಳ್ಳಿ ಗ್ರಾಮದಲ್ಲಿ ಮುಂಜಾನೆ ಕಾಡಾನೆಗಳು ವಾಸದ ಮನೆ ಮೇಲೆ ದಾಳಿ ನಡೆಸಿ ಅಪಾರ ಹಾನಿ ಮಾಡಿವೆ.

ಗ್ರಾಮದ ಗೌರಮ್ಮ ಅವರಿಗೆ ಸೇರಿದ ಮನೆಯನ್ನು ಗಜಪಡೆಯು ಜಖಂ ಮಾಡಿ, ಶೆಡ್ ಕೆಡವಿ, ಪಾತ್ರೆಗಳನ್ನು ತುಳಿದು ಹಾಕಿದೆ. ಹೆಂಚುಗಳನ್ನು ಒಡೆದು ಹಾಕಿ ಶೆಡ್ ಉರುಳಿಸಿರುವ ಕಾಡಾನೆಗಳು ಮನೆಯಲ್ಲಿದ್ದ ಪಾತ್ರೆಗಳನ್ನೂ ನಾಶಮಾಡಿವೆ. ಕಾಡಾನೆಗಳು ದಾಳಿ ನಡೆಸುತ್ತಿದ್ದಂತೆ ಗಾಬರಿಗೊಂಡ ಗೌರಮ್ಮ, ಅವು ಹೋಗುವವರೆಗೂ ಮನೆಯ ಮೂಲೆಯಲ್ಲಿ ಭಯದಿಂದ ಕುಳಿತಿದ್ದರು. ದಾಳಿಯಿಂದ ಮನೆಯಲ್ಲಿ ಅಪಾರ ಹಾನಿಯಾಗಿದ್ದು, ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಬಡಪಾಯಿ ಗೌರಮ್ಮ ಮನವಿ ಮಾಡಿದ್ದಾರೆ.

ಪ್ರಸ್ತುತ ಕಾಡಾನೆಗಳು ಮನೆಯ ಪಕ್ಕದ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page