ಮಲೆನಾಡಿನಲ್ಲಿ ಕಾಡುಪ್ರಾಣಿಗಳ ; ಕಾಟ ಕಾಡೆಮ್ಮೆ ದಾಳಿಗೆ ರೈತ ಬಲಿ

ಸಕಲೇಶಪುರ : ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಕಾಡೆಮ್ಮೆ ದಾಳಿಯಿಂದ ರೈತನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಗ್ರಾಮದ ತಿಮ್ಮಪ್ಪ (70) ಮೃತಪಟ್ಟ ರೈತ. ಕೂಲಿ ಕೆಲಸಕ್ಕೆ ತೆರಳಿ ಮನೆಗೆ ವಾಪಸ್ ಆಗುವ ವೇಳೆ ಕಾಡೆಮ್ಮೆಗಳು ದಾಳಿ ಮಾಡಿದ್ದು, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ತಿಮ್ಮಪ್ಪನನ್ನು ಕಾಡೆಮ್ಮೆ ಗುದ್ದಿ, ಕೊಂಬಿನಿಂದ ತೊಡೆಯನ್ನು ಸೀಳಿ ಕೊಂದಿದೆ.ಘಟನೆಯ ಬಗ್ಗೆ ತಿಳಿದ ಕೂಡಲೇ ಶಾಸಕ ಸಿಮೆಂಟ್‌ಮಂಜು, ಉಪವಿಭಾಗಾಧಿಕಾರಿ ಶೃತಿ, ಡಿಎಫ್‌ಓ ಸೌರಭ್‌ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿ 20 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ್ದಾರೆ. ಕಾಡೆಮ್ಮೆ ಉಪಟಳಕ್ಕೆ ರೈತರು ತತ್ತರಮಲೆನಾಡು ಭಾಗದಲ್ಲಿ ಕಾಡಾನೆಗಳ ಜೊತೆಗೆ ಕಾಡೆಮ್ಮೆಗಳ ಕಾಟವೂ ದಿನೇ ದಿನೇ ಮಿತಿಮೀರಿದೆ. ಹಲವರು ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕೆಲವರು ತೋಟ-ಜಮೀನಿಗೆ ಹೋಗುವುದನ್ನೇ ಬಿಟ್ಟಿದ್ದಾರೆ.

ಬಹಳ ಸಮಯವಾದರು ತಿಮ್ಮಪ್ಪ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಹುಡುಕಿದಾಗ ಪೊದೆಯೊಳಗೆ ಮೃತದೇಹ ಪತ್ತೆಯಾಗಿದೆ. ಕಾಡುಪ್ರಾಣಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರಿಗೆ ಜೀವ ಭಯ ನಿರ್ಮಾಣವಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿಫಲತೆಗೆ ಟೀಕೆ
ಶಾಸಕ ಸಿಮೆಂಟ್‌ಮಂಜು ಮಾತನಾಡಿ, “ಕಾಡೆಮ್ಮೆ ಹಾವಳಿಯನ್ನು ತಡೆಗಟ್ಟಲು ಶೀಘ್ರದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ,” ಎಂದರು. ಡಿಎಫ್‌ಓ ಸೌರಭ್‌ಕುಮಾರ್ ಕೂಡ ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು