Wednesday, July 17, 2024

ಸತ್ಯ | ನ್ಯಾಯ |ಧರ್ಮ

ದೇಶದ ರೈತರಿಂದ ಮತ್ತೆ ದೆಹಲಿ ಚಲೋ

ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಉಂಟಾಗುವ ಸಾಧ್ಯತೆಗಳಿವೆ. ಈ ವರ್ಷದ ಫೆಬ್ರವರಿಯಲ್ಲಿ ರೈತರ ‘ದೆಹಲಿ ಚಲೋ’ ಸಂದರ್ಭದಲ್ಲಿ ಹರಿಯಾಣದ ಅಂಬಾಲ ಬಳಿಯ ಶಂಭು ಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳು ಮತ್ತು ಇತರ ಅಡೆತಡೆಗಳನ್ನು ತೆಗೆದುಹಾಕಿ ಮತ್ತೊಮ್ಮೆ ದೆಹಲಿಗೆ ರ್ಯಾಲಿ ನಡೆಸಲು ರೈತ ಸಂಘಗಳು ಸಿದ್ಧವಾಗಿವೆ.

ಭಾರತೀಯ ಕಿಸಾನ್ ಯೂನಿಯನ್ ಏಕ್ತಾ ಸಿಧುಪುರ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಮಂಗಳವಾರ ಶಂಭು ಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತೆರೆದ ನಂತರ ರೈತರು ಮತ್ತೆ ದೆಹಲಿ ಚಲೋ ನಡೆಸಲಿದ್ದಾರೆ ಎಂದು ಹೇಳಿದರು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತಿತರ ಬೇಡಿಕೆಗಳು ಇತ್ಯರ್ಥವಾಗುವವರೆಗೆ ರೈತರು ಕೃಷಿ ಹೋರಾಟನ್ನು ನಿಲ್ಲಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಪಂಜಾಬ್-ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಹರ್ಯಾಣ ಸರ್ಕಾರಕ್ಕೆ ಸಂಭು ಗಡಿಯಲ್ಲಿನ ರಸ್ತೆಯಲ್ಲಿ ಸ್ಥಾಪಿಸಲಾದ ಬ್ಯಾರಿಕೇಡ್‌ಗಳಿಂದ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗುತ್ತಿರುವುದರಿಂದ ಒಂದು ವಾರದೊಳಗೆ ತೆಗೆದುಹಾಕುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ದಲ್ಲೆವಾಲ್ ಈ ಘೋಷಣೆ ಮಾಡಿದ್ದಾರೆ. ಕಳೆದ ತಿಂಗಳ 13ರಿಂದ ಪಂಜಾಬ್-ಹರಿಯಾಣದ ಶಂಭು ಗಡಿಯಲ್ಲಿ ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಆಶ್ರಯದಲ್ಲಿ ರೈತರು ಆಯೋಜಿಸಿದ್ದ ‘ದೆಹಲಿ ಚಲೋ’ವನ್ನು ಪೊಲೀಸರು ತಡೆದಿದ್ದರು. 13ರಿಂದ ರೈತರು ಪ್ರತಿಭಟನೆ ಅಲ್ಲಿಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು