ಮಗಳ ಮೇಲೆ ರೇಪ್ ಪಾಪಿ ತಂದೆ ಅರೆಸ್ಟ್

ತಂದೆ ಎನಿಸಿ ಕೊಂಡವನು ಮಕ್ಕಳಿಗೆ ಆಸರೆ ಯಾಗಬೇಕು ಅನ್ನೋದು ಎಲ್ಲರೂ ಸಾಮಾನ್ಯರು ವ್ಯಕ್ತಪಡಿಸುವ ಅಭಿಪ್ರಾಯ.
ತಂದೆಗೆ ವಿಶಿಷ್ಟ ಸ್ಥಾನಮಾನವಿದೆ ಆದರೆ ಈ ರೀತಿಯ ದೌರ್ಜನ್ಯ ದಬ್ಬಾಳಿಕೆಗಳನ್ನು ನೋಡಿದರೆ ಯಾವ ಕರುಳ ಬಳ್ಳಿಗೂ ಯಾವುದೇ ಮಾನವೀಯತೆ ಇಲ್ಲದಿರುವುದನ್ನು ನಾವು ಈ ಪ್ರಕರಣದಲ್ಲಿ ಕಾಣಬಹುದು ಆದರೆ ತಂದೆಯಂಥ ಜವಾಬ್ದಾರಿಯ ಸ್ಥಾನದಲ್ಲಿರುವವರು ಹೆಣ್ಣು ಮಕ್ಕಳನ್ನು ರಕ್ಷಿಸುವ ಮತ್ತು ಕಾಪಾಡುವ ದೊಡ್ಡ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಆದರೆ ಇಲ್ಲೊಬ್ಬ ಪಾಪಿ ತಂದೆ ತಾನೇ ಜನ್ಮ ನೀಡಿದ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿಯಾಗಲು ಕಾರಣನಾಗಿದ್ದಾನೆ.

ಹೌದು; ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲೆ ತಗ್ಗಿಸುವ ಈ ಹೀನ ಕೃತ್ಯ ನಡೆದಿದೆ. ತಂದೆಯ ಪೈಶಾಚಿಕ ಕೃತ್ಯದಿಂದ 14 ವರ್ಷದ ಮಗಳು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ.

ಸುದ್ದಿ ತಿಳಿದು ಪ್ರಕರಣ ದಾಖಲಿಸಿಕೊಂಡ ಬಡಾವಣೆ ಪೊಲೀಸರು ಕಾಮುಕ ತಂದೆ ಸತೀಶ್ ಎಂಬಾತನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಬಳಿಕ ಪ್ರಕರಣವನ್ನು ಮಹಿಳಾ ಠಾಣೆಗೆ ವರ್ಗಾಯಿಸಲಾಗಿದ್ದು, ಅಪ್ರಾಪ್ತ ಗರ್ಭಿಣಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪಾಪಿ ತಂದೆಯ ಹೀನಕೃತ್ಯಕ್ಕೆ ಮನೆ ಮಂದಿ ಕಣ್ಣೀರಿಡುತ್ತಿದ್ದರೆ, ಊರಿನವರು ಹಿಡಿಶಾಪ ಹಾಕುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು