Monday, June 17, 2024

ಸತ್ಯ | ನ್ಯಾಯ |ಧರ್ಮ

ಬೇಲಿ ಹೂಗಳು

ಅವ್ನು ಮತ್ತೆ call ಮಾಡಿದ್ದ. “I am sorry ರಿ ನಮ್ ಅಮ್ಮ ಅಪ್ಪನಿಗೆ ನಾನ್ ಒಬ್ನೆ ಮಗ. ಅಪ್ಪ ಬೇರೆ ಚಿಕ್ ವಯಸ್ಸಲ್ಲೇ ಹೋಗ್ಬಿಟ್ರು, so ಅಮ್ಮಂಗೆ ಬೇಜಾರ್ ಮಾಡೋಕೆ ಇಷ್ಟ ಇಲ್ಲ” ಅಂತ ಹೇಳಿದೋನು,  “But ನಂಗೆ ನೀವು ತುಂಬಾ ಇಷ್ಟ ಆಗಿದೀರಾ, so until either of us get marry, can we both date?” ಅಂತಾ ಬಾಂಬ್ ಹಾಕೊದಾ? ಇದು ಇಂಜಿನೀರ್‌ ಕಾವ್ಯಶ್ರೀ ಬರೆಯುತ್ತಿರುವ ಟೆಕ್ಕಿ ಡೈರೀಸ್ ನ ಐದನೇ ಕಂತು

“Culture does not make people, and people make culture. If it is true that the full humanity of women is not our culture, then we can and must make it our culture.”

Chimamanda Ngozi Adichie

ಬೆಳಗಿನಿಂದ ಒಂದು ಮೀಟಿಂಗ್ ನ ನಂತರ ಮತ್ತೊಂದು ಮೀಟಿಂಗ್ ಮುಗಿಸಿ ಆಗಷ್ಟೇ head phone ತೆಗೆದು ಪಕ್ಕಕ್ಕೆ ಇಟ್ಟಿದ್ದೆ.

Do not disturb ನಲ್ಲಿ ಇದ್ದ ಕಾರಣ ಸುಮಾರು ಪಿಂಗ್ ಗಳ notification ಬಂದಿರಲಿಲ್ಲ. ಅದರಲ್ಲಿ ಸುನೈನಾ ಳ ಪಿಂಗ್ ಕೂಡ ಒಂದು. ಇನ್ನೇನು ಅವಳ ಪಿಂಗ್ ಗೆ ರಿಪ್ಲೈ ಕೊಡಬೇಕು ಅಷ್ಟರಲ್ಲಿ ಅವಳೇ ನನ್ನ ನಂಬರ್ ಗೆ ಕರೆ ಮಾಡಿದ್ದಳು. ಸುನೈನಾ ನನ್ನ ಹಳೆಯ ಟೀಮ್ ಮೇಟ್.

ಸುನೈನಾ: ಬಿಕ್ಕಳಿಸುತ್ತಾ “ಹಿತಾ ಸ್ವಲ್ಪ ಬ್ರೇಕ್ ಔಟ್ ಏರಿಯಾ ಗೆ ಬರೋಕೆ ಆಗುತ್ತಾ?”

ನಾನು : ಇರು ಬಂದೆ

ಬ್ರೇಕ್ ಔಟ್ ಏರಿಯಾ ಗೆ ಹೋದ ತಕ್ಷಣ ಗಟ್ಟಿಯಾಗಿ ತಬ್ಬಿಕೊಂಡು ಅಳೋಕೆ ಶುರು ಮಾಡಿದ್ದಳು.

ಸುನೈನಾ returning mother.

ಪುಟ್ಟ ಶ್ರಾವ್ಯ ಗೆ ಈಗಷ್ಟೇ ಇಪ್ಪತ್ತು ತಿಂಗಳು. ಇಷ್ಟು ದಿನಗಳ ಕಾಲ ಹೇಗೋ work from home ಇತ್ತು. ಈಗ ಹೈಬ್ರಿಡ್ ಮಾಡಿರುವ ಕಾರಣ ಸುನೈನಾ ಆಫೀಸ್ ಗೆ ಬರಲೇ ಬೇಕಾಗಿತ್ತು. ಆಫೀಸಿನ ಬಿಲ್ಡಿಂಗಿನಲ್ಲೆ ಕ್ರೆಸ್ ಇದೆ. ಅಂದರೆ ಡೆ ಕೇರ್. ಅಲ್ಲಿ ಮಕ್ಕಳನ್ನ ನೋಡಿಕೊಳ್ಳಲು ಬಿಟ್ಟು ತಾಯಂದಿರು ಆರಾಮ್ ಸೆ ಕೆಲಸ ಮಾಡ ಬಹುದು. ಮಧ್ಯೆ ಮಧ್ಯೆ ಹೋಗಿ ಮಗುವಿನ ಜೊತೆ ಕೆಲ ಸಮಯ ಸಹ ಕಳೆಯ ಬಹುದು. ಪುಟ್ಟ ಮಕ್ಕಳು ಇದ್ದಾಗ working hours ಕೂಡ ಕಡಿಮೆ ಇರುತ್ತೆ. ಇಷ್ಟೆಲ್ಲಾ flexibility ಇದ್ದರೂ ಸಹ ಕೆಲವೊಮ್ಮೆ ಇವೆಲ್ಲ ಪೇಪರ್ ವರ್ಕ್ ಗಳಿಗೆ ಸೀಮಿತವಾಗಿರುತ್ತೆ.

ಎಷ್ಟೋ ಸಲ ಸೀನಿಯರ್ ಮ್ಯಾನೇಜ್‌ಮೆಂಟ್‌ಗಳಿಂದ ಬರುವ ಸ್ಟ್ರೆಸ್ ಅಷ್ಟಿಷ್ಟಲ್ಲ. Senior Management ಸರಿ ಇದ್ದರೆ ಎಲ್ಲರ life smooth ಆಗೆ ಇರುತ್ತೆ.

ಸುನೈನಾಳ ವಿಚಾರದಲ್ಲಿ ಆಗಿದ್ದು ಇದೆ. 

ಒಂದು Request for the proposal ಗೆ ಫೀಚರ್ ನ POC requirement ಬಂದಿದೆ. ಮೂರು ದಿನದಲ್ಲಿ delivery ಕೇಳ್ತಾ ಇದಾರೆ.

Assesment ನ report analyse ಮಾಡಿ ಅದಕ್ಕೆ ತಕ್ಕಂತೆ ಫೀಚರ್ ತಯಾರು ಮಾಡಲು ಕನಿಷ್ಠ 10 ದಿನಗಳು ಬೇಕಾಗಿದ್ದವು. ಅಂತದ್ದರಲ್ಲಿ ಈಕೆ ತನ್ನ ಪುಟ್ಟ ಮಗುವನ್ನು ಸಂಭಾಳಿಸಿಕೊಂಡು ಫೀಚರ್ ನ 3 ದಿನಗಳಲ್ಲಿ deliver ಮಾಡಲು ಸಾಧ್ಯವೇ ಇಲ್ಲ.

ನಾನು ನೋಡಿರುವಂತೆ ಸುನೈನಾ ಯಾವತ್ತೂ ತನ್ನ deliverables ಗಳಲ್ಲಿ ಹಿಂದೆ ಬಿದ್ದವಳಲ್ಲ. ಒಮ್ಮೊಮ್ಮೆ ರಾತ್ರಿ ಹತ್ತಾದರೂ ಟೀಮ್ಸ್ ಆನ್ಲೈನ್ ನಲ್ಲಿ ಇದ್ದಾಗ ನಾನೇ ಎಷ್ಟೋ ಸಲ ಬೈದದ್ದಿದೆ. ಹೀಗಿದ್ದಾಗ ಇವಳ manager ಸುಜಾತ, ನನ್ನ ಹಳೆಯ ಮ್ಯಾನೇಜರೇ ಇವಳಿಗೆ ನೋವಾಗುವಂತೆ ಬೈದಿದ್ದಾಳೆ-“ನಂಗೂ ಮಗು ಇದೆ ಹಾಗಂತ ನಾನ್ಯಾವತ್ತೂ ಕೆಲಸದಿಂದ ತಪ್ಪಿಸಿಕೊಂಡಿಲ್ಲ. You need to work on your priorities” ಅಂತ.

ಇದೇ ತೆರನಾದ ವಿಷಯದಲ್ಲಿ ನನಗೂ ಸುಜಾತಗು argument ಆಗಿ ನಾನು ತಂಡದಿಂದ ಹೊರ ಬಂದಿದ್ದು. Deliverableನ ವಿಷಯದಲ್ಲಿ ನಾನು ಯಾವತ್ತೂ over work ಮಾಡಿದ್ದವಳಲ್ಲ. ಅಂದು ಆದದ್ದು ಕೂಡ ಅದೇ.

Analyst Response ಹಾಗೂ Solution deliver ಮಾಡಲು minimum 8 Business days ಬೇಕಿದ್ದ ಜಾಗದಲ್ಲಿ  ಎರಡು ದಿನಗಳಲ್ಲಿ deliverable ಕೇಳಿದ್ದರು.

ಸುಜಾತಾ- “ಅಷ್ಟು ದಿನ ಯಾಕೆ? Previous Solution ಗಳಿಂದ ಕಾಪಿ ಮಾಡಬಹುದಲ್ಲ?”

ನಾನು – “copy ಮಾಡೋಕಾದ್ರು ಏನ್ ಇದೆ assesment report ನಲ್ಲಿ ಅಂತ analyse ಮಾಡ್ಬೇಕು ಅಲ್ವಾ?”

ಸುಜಾತಾ – “work hours stretch ಮಾಡಬಹುದು ಅಲ್ವಾ?”

ನಾನು – “ಈ ತರ client ನ ಅವಶ್ಯಕತೆ ಇದೆಯಾ?

ಇವರೆಲ್ಲ ವಿಂಡೋ ಶಾಪಿಂಗ್ ನ ರೀತಿ ಮಾಡ್ತಾರೆ ಅಷ್ಟೇ. 

ಮೊದಲಿಗೆ client ಗೆ ಅರ್ಥ ಮಾಡ್ಸಿ, 182 request for the proposal (RFP) question ಗಳಿಗೆ ಉತ್ತರ ಕೊಡೋದು 2 ದಿನಗಳಲ್ಲಿ ಅಸಾಧ್ಯ. ಅದೇ ರೀತಿ 200+ page ಇರೋ IT assessment ನ ಓದಿ analyse ಮಾಡಿ ಹೊಸ ಫೀಚರ್ ready ಮಾಡಿ POC ಕೊಡೋಕೆ ಆಗಲ್ಲ ಅಂತ.

Let them know that our employees are humans not bots” ಹೀಗೆ ಖಾರವಾಗಿಯೇ ನುಡಿದಿದ್ದೆ.

ನನ್ನ ಈ ಮಾತಿಗೆ ಮ್ಯಾನೇಜಿಂಗ್ ಡೈರೆಕ್ಟರ್ ನ ಸಹಮತ ಕೂಡ ಇತ್ತು. ಇದೇ ಕಾರಣಕ್ಕೆ ನಾನು ಅಂದು ಆ ಪ್ರೊಜೆಕ್ಟ್ ನಿಂದ ಹೊರ ನಡೆದಿದ್ದೆ.

Upper management hierarchy ಯಲ್ಲಿ 15 ಜನ manager ಗಳ ಪೈಕಿ ನಾಲ್ಕು ಐದು ಜನ female manager ಗಳು ಇರ್ತಾರೆ.

ಎಷ್ಟೋ ಕಂಪನಿ ಗಳ CEO ಗಳು ಫೀಮೇಲ್ ಗಳೇ ಆಗಿದ್ದರೂ ಪ್ರೊಜೆಕ್ಟ್ ಮಟ್ಟದಲ್ಲಿ ಟೀಮ್ ಮಟ್ಟದಲ್ಲಿ upper management ಗಳಲ್ಲಿ ಹೆಂಗಸರ ಸಂಖ್ಯೆ ಕಡಿಮೆಯೇ…

ಇದಕ್ಕೆ ಕಾರಣ ತಿಳಿಯದೆ ಇರುವುದೇನಲ್ಲ. Leadership ಮಟ್ಟಕ್ಕೆ ಏರ ಬೇಕೆಂದರೆ, ಅಲ್ಲಿ ಹಲವಾರು sacrify ಗಳನ್ನ ಮಾಡಬೇಕಾಗುತ್ತದೆ. ಮುಖ್ಯವಾಗಿ ಕುಟುಂಬ. ಕುಟುಂಬದ ಸದಸ್ಯರು supportive ಗಳಾಗಿದ್ದರೆ ಸರಿ ಇಲ್ಲವಾದರೆ ಸ್ಟ್ರೆಸ್ ಲೆವೆಲ್ increase ಆಗುತ್ತೆ.

ಮಾತು ತೆಗೆದರೆ equality diversity ಗಳ ಜಪ ಮಾಡುವ corporate management ಗಳು  Upper management ಗಳಲ್ಲಿ ಕಾಣುವ ಈ ratio ಬಗ್ಗೆ ಜಾಣ ಕುರುಡು ತೋರಿಸುವುದು ಗೊತ್ತಿಲ್ಲದೆ ಇಲ್ಲ.

ಸ್ನೇಹಿತನೊಬ್ಬನ ಕಂಪನಿಯಲ್ಲಿ ಡೈವರ್ಸಿಟಿ ಯ ಭಾಗವಾಗಿ eligible ಇದ್ದ ಹಲವು ಫೀಮೇಲ್ ಎಂಪ್ಲೋಯೀ ಗಳಿಗೆ double promotion ಕೊಟ್ಟು managerial post ಕೊಟ್ಟಿದ್ದು ಹಲವಾರು male employee ಗಳ ಅಸಮಾಧಾನಕ್ಕೆ ಕಾರಣ ವಾಗಿತ್ತು. ವಿಶ್ವ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಹೀಗೊಂದು ಮಾತು ಹೇಳಿದ್ದರು-

“Achieving gender equality requires the engagement of women and men, girls and boys. It is everyone’s responsibility.”

 ಹಲವಾರು ಕಡೆ ಜನ ಈ ಜವಾಬ್ದಾರಿಯನ್ನ ಮರೆತು ನಡೆಯೋದು ಗೊತ್ತಿರೋದೇ.

ಕೆಲವು ಸಲ ಹೆಣ್ಣು ಮಕ್ಕಳೇ ಈ ಸುಜಾತಾಳ ರೀತಿ insensitive ಆಗಿ ನಡ್ಕೊಳೋದು ಇರುತ್ತೆ. ಇವರಿಗೆ ಮನೆಗಳಲ್ಲಿ ತುಂಬಾ ಸಪೋರ್ಟ್ ಇರುತ್ತೆ.  ಇನ್ನೂ ಕೆಲವು scenario ಗಳಲ್ಲಿ ಹೇಳಬೇಕೆಂದರೆ, ಗಂಡಿನ ಸಮನಾಗಿ ಸಾಧಿಸುವ ನಿಟ್ಟಿನಲ್ಲಿ ತಮ್ಮ ಪರ್ಸನಲ್ ಲೈಫ್ ಅನ್ನ sacrify ಮಾಡಿರ್ತಾರೆ. And they think it’s ok to do so….

ಸುನೈನಾ ಗೆ ಸಮಾಧಾನ ಮಾಡಿ ಪ್ರೊಜೆಕ್ಟ್ ನಿಂದ relieve ತಗೊಳೋಕೆ ಹೇಳಿ ನನ್ನ ಬೇ ಗೆ ಬಂದೆ.

ಯಾಕೋ ಮನಸ್ಸು ತಡೀಲಿಲ್ಲ…ಆಕಾಂಕ್ಷ ಗೆ ಪಿಂಗ್ ಮಾಡಿದ್ದೆ. ಯಾವುದಾದ್ರೂ requirement ಇದೆಯಾ ಅಂತ.

ಅದಾಗಲೇ ಬ್ರೇಕ್ ಔಟ್ ಏರಿಯಾ ದಲ್ಲಿ ಸುನೈನಾ ಳ ಒಟ್ಟಿಗೆ ನಾನು ಮಾತಾಡುತ್ತಿದ್ದದ್ದನ್ನು ಗಮನಿಸಿದ್ದ ಆಕಾಂಕ್ಷ “ask Sunaina to contact me. Senthil has some requirements in his team” ಎಂದು reply ಮಾಡಿದ್ದಳು.

ಅಬ್ಬಾ ಅದೆಷ್ಟು ಬೇಗ ವಿಷಯ ನ ಗ್ರಹಿಸ್ತಾಳೆ!!!

—-

“ಇಲ್ನೋಡು ನಿಮ್ ಚಿಕ್ಕಪ್ಪ ಒಂದ್ ಹುಡ್ಗನ್ನ ನೋಡಿದ್ದಾನೆ. ನಿನ್ contact number ಪಾಸ್ ಮಾಡಿದೀನಿ. ಫೋಟೋ ನೋಡು ಕಾರ್ಪೊರೇಟ್ ಎಂಪ್ಲಾಯಿನೆ. ಯುಕೆ ನಲ್ಲಿ ಇದ್ದು ಬಂದಿದ್ದವ” ಅಮ್ಮ ಕಾಲ್ ಮಾಡಿ ಒಂದೇ ಉಸಿರಿಗೆ ಹೇಳಿದ್ದರು.

ನಾನು “ಸರಿ ಬಿಡು ಅವ್ನಿಗೆ ಏಳು ಗಂಟೆ ಹಾಗೆ ಕಾಲ್ ಮಾಡೋಕೆ ಹೇಳು” ಅಂತ ಹೇಳಿ ಫೋನ್ ಕುಕ್ಕಿದ್ದೆ. 

ಸರಿಯಾಗಿ ಏಳು ಗಂಟೆಗೆ ಕರೆ ಮಾಡಿದ್ದ. ಪರ್ವಾಗಿಲ್ಲ punctual ಆಗಿದ್ದಾನೆ. ಸರಿ ಒಂದೆರೆಡು ಗಂಟೆ ಗಳ ಕಾಲ ಹುಡುಗ ನ ಜೊತೆ ಮಾತಾಡಿ ಆಯ್ತು. ಇನ್ನೇನು ವೀಕೆಂಡು ಮೀಟ್ ಮಾಡೋದು ಅಂತ ಹೇಳಿ place ಡಿಸ್ಕಸ್ ಕೂಡ ಫೈನಲ್ ಮಾಡಿದ್ದೆವು..

Venue decide ಮಾಡುವಾಗ ಅವನು ” ನಾನು ಶನಿವಾರ ನಾನ್ ವೆಜ್ ತಿನ್ನಲ್ಲ” ಅಂತ ಹೇಳ್ದ.

ಅದಕ್ಕೆ ನಾನು “I am not a religious person actually” ಎಂದೆ.

ಅದಕ್ಕವನು “ಓಹ್! ಹಾಗಿದ್ರೆ ನಿಮ್ಗೆ ದೇವ್ರು ಸಂಪ್ರದಾಯ ಅನ್ನೋದ್ರಲ್ಲಿ ಎಲ್ಲ ನಂಬಿಕೆ ಇಲ್ವಾ?

ಏನ್ರೀ ನೀವು? ಈ ಕಾರ್ಪೊರೇಟ್ ಹುಡ್ಗೀರೇ ಇಷ್ಟು ಬಿಡಿ”

ನಾನು – “ಏನ್ ಹಾಗಂದ್ರೆ?”

ಅವನು – ” ಮತ್ತೇನ್ರಿ ಒಂದು ಸಂಸ್ಕೃತಿ ಅನ್ನೋದು ಇರ್ಬೇಕು ಅಲಾ?”

ನಾನು – “ಮೊದಲಿಗೆ ಆಹಾರ ದ ವಿಚಾರದಲ್ಲಿ ತಾರತಮ್ಯ ಮಾಡೋದು ನಂಗೆ ಆಗಿ ಬರಲ್ಲ. ಹಾಗಂತ ನಿಮ್ ನಂಬಿಕೆ ನಿಮ್ಗೆ ನನ್ನ ನಂಬಿಕೆ ನಂಗೆ.

ಎರಡನೆಯದು ಸಂಸ್ಕೃತಿ ಅನ್ನೋದು ಪುರುಷ ಪ್ರಧಾನ ಸಮಾಜ ಸ್ತ್ರೀ ಯನ್ನ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟು ಕೊಳ್ಳಲು ಮಾಡಿರೋದು. Inclusion ಅನ್ನೋದು ಎಲ್ಲಿದೆ ಮತ್ತೆ?”

ಅವನು – “ಹಾಗಿದ್ರೆ ನೀವು ಯಾವುದೇ ಹಬ್ಬಗಳಲ್ಲಿ participate ಮಾಡಲ್ವ?”

ನಾನು – “ನಂಗೆ ಆಚರಣೆಗಳಲ್ಲಿ ನಂಬಿಕೆ ಇಲ್ಲ. ಹಾಗಂತ ನೀವು ಮಾಡ್ಬೇಡಿ ಅಂತ ಹೇಳಲ್ಲ. ಹಬ್ಬಗಳಲ್ಲಿ ಬೇಕಿದ್ರೆ ಮನೆ ಕ್ಲೀನ್ ಮಾಡಿ ಕೊಡೋದು, ಅಲಂಕಾರ ಮಾಡಿ ಕೊಡೋದು, ಅಡುಗೆ ಮಾಡಿ ಕೊಡೋದು ಈ ತರ participation ಮಾಡ್ತೀನಿ ನಾನು. ಅದು ಬಿಟ್ಟು ಉಪವಾಸ ಮಾಡು, ಆ ಊರಿಗೆ ಹೋಗಿ ಗಂಗಮ್ಮನ ಮಾಡು ಇವೆಲ್ಲ ನನ್ ಕೈಲಿ ಆಗಲ್ಲ. ಹಾಗೆ ದೇವಸ್ಥಾನಕ್ಕೆ temple run ಹೋಗೋಕೆ ಫೋರ್ಸ್ ಎಲ್ಲ ಮಾಡೋ ಹಂಗಿಲ್ಲ.

ಇನ್ನ ಎರಡನೆಯದು, ಭೀಮನ ಅಮಾವಾಸ್ಯೆ! Since I believe in equality, I don’t feel ಭೀಮನ ಅಮಾವಾಸ್ಯೆ, karva chauth, ಧನುರ್ಮಾಸ and all support equality. So you cannot expect my participation in these.

SO DON’T FORCE ME TO DO ANYTHING THAT IS AGAINST TO MY WILL.

ನಾನು rational person”

ಅಲ್ಲಿ ವರೆಗೂ ಹುಡ್ಗೀರು ನಿಮ್ ಹಂಗೇ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿರಬೇಕು. ಬ್ಯೂಟಿ ವಿತ್ ಬ್ರೈನ್ ನೀವು deadly combination ಅಂತೆಲ್ಲಾ ಹೊಗಳಿದ್ದ ಆ ಪುಣ್ಯಾತ್ಮ ಇದ್ದಕ್ಕಿದ್ದ ಹಾಗೆ office call ಬಂತು ಅಂತ ಡಿಸ್ಕನೆಕ್ಟ್ ಮಾಡಿ ಅರ್ಧ ಗಂಟೆ ಆದ ಮೇಲೆ ಮತ್ತೆ ಕರೆ ಮಾಡಿದ್ದ.

“ಹಾಯ್, ನಮ್ ಅಮ್ಮ ತುಂಬಾ ಸಂಪ್ರದಾಯಸ್ತೆ ಕಣ್ರೀ ಅವ್ರಿಗೆ hurt ಮಾಡೋಕೆ ನಂಗೆ ಇಷ್ಟ ಇಲ್ಲ, So we cannot proceed further.”

ನಂಗೆ ಇದೆಲ್ಲಾ ಮಾಮೂಲು ಅಲ್ವಾ “so it’s ok I appreciate that ಅಂತ ಹೇಳಿ all the best for your future” ಅಂತ wish ಮಾಡಿ ಅಮ್ಮಂಗೆ update ಮಾಡ್ತಾ ಇದ್ದೆ.

ಅವ್ನು ಮತ್ತೆ call ಮಾಡಿದ್ದ. ಈ ಸಲ ಏನುಕ್ಕೆ ಅಂದ್ರೆ- 

“I am sorry ರಿ ನಮ್ ಅಮ್ಮ ಅಪ್ಪನಿಗೆ ನಾನ್ ಒಬ್ನೆ ಮಗ. ಅಪ್ಪ ಬೇರೆ ಇನ್ನ ಚಿಕ್ ವಯಸ್ಸಲ್ಲೇ ಹೋಗ್ಬಿಟ್ರು, so ಅಮ್ಮಂಗೆ ಬೇಜಾರ್ ಮಾಡೋಕೆ ಇಷ್ಟ ಇಲ್ಲ” ಅಂತ ಹೇಳಿದೋನು,  ಕೊನೆಗೆ ಒಂದು ಬಾಂಬ್ ಹಾಕೊದಾ?

“But ನಂಗೆ ನೀವು ತುಂಬಾ ಇಷ್ಟ ಆಗಿದೀರಾ, so until either of us get marry, can we both date?” ಅಂತಾ!!!

ಸಿಟ್ಟು ನೆತ್ತಿಗೆ ಏರಿತ್ತು…

ಹೀಗೆ reply ಮಾಡಿದ್ದೆ

“No,

If am desperate and no one is around, I’d rather hire a gigallo but I won’t date you.

If you are the only one male creature left in the entire planet and if I am so desperate, I’d rather use the dildo, but I will never date you.

Get lost you dumb ass.

ಇದಕ್ಕೆ ನಿಮ್ ಅಮ್ಮನ ಸಂಪ್ರದಾಯ ಅಡ್ಡ ಬರಲ್ವಾ?”

——

ಆ ಸಂಜೆ ಎಲ್ಲರೂ ರೆಡ್ ರೈನೊ ನಲ್ಲಿ ಸೇರಿದ್ದೆವು.

ಇದು ಧ್ವನಿಯ ಪ್ಲಾನ್ ಆಗಿತ್ತು.

ನೇಹಾ ಈಗೀಗ ಚೇತರಿಸಿಕೊಳ್ತಾ ಇದ್ದಳು. ಹಾಗಾಗಿ ಅವಳಿಗೆ ಒಂದು change of place ಅಂತ ಬೇಕಿತ್ತು.

ವಾರದಿಂದ gym ಗೆ ಹೋಗಿರಲಿಲ್ಲ. ಮನೇಲೇ ಧ್ವನಿಯ ಅಡುಗೆ. ತಿಂದು ತಿಂದು ಗುಂಡು ಗೌರಮ್ಮ ಆಗಿದ್ದಳು. ಹೀಗೆ ಕಿಚಾಯಿಸಿದ್ದೆ. ನಾನೀಗ ದುಂಡು ಮಲ್ಲಿಗೆ ಅಂತ ನಕ್ಕಿದ್ದಳು….

ಅಬ್ಬಾ!!

ಆ ಸಂಜೆ ನಡೆದ ಘಟನೆ ಯನ್ನ ಹೇಳಿದ್ದೆ.

ಅದಕ್ಕೆ ಧ್ವನಿ ಬಿದ್ದು ಬಿದ್ದು ನಗಾಡುತ್ತ

” ಅವ್ನು ಇಷ್ಟು ಹೊತ್ತಿಗೆ ಅದೆಷ್ಟು ಸಲ ಸತ್ತಿರ್ತಾನೋ ಬಿಡು!!”

ಆಕಾಂಕ್ಷ – ” ಸುಮ್ನೆ no ಅಂತ ಹೇಳಿ ಕಾಲ್ ಕಟ್ ಮಾಡೋಕೆ ಏನ್ ಆಗಿತ್ತು ನಿಂಗೆ? ಬರೀ ಇಂತವೇ!

Satiring a male gaze makes you happy ಅಲ್ವಾ?”

“Happy ನಾ? Pleasure ಅದು ನಿಂಗೇನು ಗೊತ್ತು!” ಅಂದಿದ್ದೆ ನಾನು.

ಹೀಗೆ ಯೋಚಿಸುತ್ತಲೇ ನನ್ನ ಗೆಳತಿ ರಜಿಯಾ ಳ ನೆನಪಾಯಿತು. ಅವಳಿಗೆ ಮೂವತ್ತೈದಾದರು ಇನ್ನೂ ಹುಡುಗ ಸೆಟ್ ಆಗಿಲ್ಲ. ಕಾರಣ ಆಕೆ ಹಿಜಾಬ್ ಧರಿಸಲು ಒಪ್ಪಲ್ಲ ಮತ್ತು non religious ಆದ್ರಿಂದ. NRI ಗಳದ್ದೂ ಇದೆ ರೀತಿಯ ಧೋರಣೆ!

ಅಲ್ಲಾ ಈಗಿನ ಕಾಲದ ಹುಡುಗರಿಗೆ, ಜೀವನಕ್ಕೆ ಏನು ಮುಖ್ಯ ಅನ್ನೋದೇ ಗೊತ್ತಿಲ್ವಾ??

Bold women are only meant for dating,

Homely women are meant for marriage

ಅನ್ನೋ ಈ ಕೆಟ್ಟ ಚಾಳಿ ಕೊನೆ ಆಗೋದು ಯಾವಾಗ??

ವೈಚಾರಿಕ ಹೆಣ್ಣು ಮಕ್ಕಳು, ಸ್ತ್ರೀ ವಾದಿಗಳು ಅಂದ್ರೆ sexually available ಇರ್ತಾರೆ ಅಂತ ಅರ್ಥೈಸಿದ ಮುಠ್ಠಾಳ ಯಾವನೋ…?

ಕಾವ್ಯಶ್ರೀ

ದೊಡ್ಡಬಳ್ಳಾಪುರದ ಇವರು ಸಾಫ್ಟ್‌ವೇರ್ ಇಂಜಿನಿಯರ್

Related Articles

ಇತ್ತೀಚಿನ ಸುದ್ದಿಗಳು