Sunday, July 27, 2025

ಸತ್ಯ | ನ್ಯಾಯ |ಧರ್ಮ

ತೆಲಂಗಾಣ ವಿಧಾನಸಭಾ ಚುನಾವಣೆ : BRS ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ

ಪಂಚ ರಾಜ್ಯಗಳ ಚುನಾವಣೆಯ ಕೊನೆಯ ರಾಜ್ಯವಾಗಿ ಇಂದು ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ ಎದುರು ನೋಡುತ್ತಿದೆ. ಆ ಮೂಲಕ ಗುರುವಾರ ಸಂಜೆ 5 ಗಂಟೆಗೆ ಪಂಚರಾಜ್ಯಗಳ ಚುನಾವಣೆಗೆ ಅಂತಿಮ ತೆರೆ ಬೀಳಲಿದೆ.

ಈ ಮುನ್ನ ಮಿಜೋರಾಂ, ಛತ್ತೀಸ್ ಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ಚುನಾವಣೆಗಳು 2 ತಿಂಗಳ ಅವಧಿಯಲ್ಲಿ ಮುಕ್ತಾಯಗೊಂಡಿದ್ದವು. ಈ ಎಲ್ಲಾ ರಾಜ್ಯಗಳ ಜೊತೆಗೆ ತೆಲಂಗಾಣದಲ್ಲೂ ಇಂದು ಚುನಾವಣೆ ನಡೆದು, ಡಿ.3ರಂದು ಮತಗಳ ಫಲಿತಾಂಶ ಪ್ರಕಟವಾಗಲಿದೆ.

BRS ಹಾಗೂ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ತೆಲಂಗಾಣ ವಿಧಾನಸಭೆಯಲ್ಲಿ ಈ ಬಾರಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಒಂದು ರಾಜಕೀಯ ಅವಲೋಕನದ ಪ್ರಕಾರ ಯಾವುದೇ ಪಕ್ಷ ಬಹುಮತ ಪಡೆದುಕೊಂಡರೂ ಅದು ತೀರಾ ಕಡಿಮೆ ಅಂತರ ಅಥವಾ ಅತಂತ್ರ ವಿಧಾನಸಭೆಗೂ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ತೆಲಂಗಾಣದಲ್ಲಿ 119 ಕ್ಷೇತ್ರಗಳಿವೆ. ಒಟ್ಟು 2290 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3.13 ಕೋಟಿ ಮತರಾದರಿದ್ದಾರೆ. ರಾಜ್ಯದಲ್ಲಿ ಹಾಲಿ ಬಿಆರ್ ಎಸ್ ಸರ್ಕಾರವಿದ್ದು, ಅದನ್ನು ಮಡಿಸಿ, ಅಧಿಕಾರಕ್ಕೇರಲು ಕಾಂಗ್ರೆಸ್ ಶತಾಯ ಗತಾಯ ಯತ್ನ ನಡೆಸಿದೆ. ಬಿಜೆಪಿ ಕೂಡ ಹಿಂದೆಂದಿಗಿಂತ ಹೆಚ್ಚು ಬಲದೊಂದಿಗೆ ಸ್ಪರ್ಧೆಗೆ ಇಳಿದಿದೆ.

ಇಂದು ಏಕ ಹಂತದಲ್ಲಿ 119 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದು, ಮತದಾನ ಮುಕ್ತಾಯಗೊಂಡ ನಂತ್ರ, ಸಂಜೆ ಎಕ್ಸಿಟ್ ಪೋಲ್ ಫಲಿತಾಂಶ ಹೊರ ಬೀಳಲಿದೆ. ಯಾವ ಪಕ್ಷ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಮಾಹಿತಿ ಸ್ಪಷ್ಟವಾಗೋ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page