Friday, June 14, 2024

ಸತ್ಯ | ನ್ಯಾಯ |ಧರ್ಮ

ಫಿಫಾ ವಿಶ್ವಕಪ್ ಫೈನಲ್- ಅರ್ಜೆಂಟೀನಾಗೆ ಕೊನೆಯ ಪಂದ್ಯ: ಲಿಯೋನೆಲ್ ಮೆಸ್ಸಿ ನಿವೃತ್ತಿ

ದೋಹಾ: 2022 ರ ಫಿಫಾ ವಿಶ್ವಕಪ್ ಫೈನಲ್ ಅರ್ಜೆಂಟೀನಾಗೆ ತಮ್ಮ ಕೊನೆಯ ಪಂದ್ಯವಾಗಿದ್ದು, ಇದರ ಜೊತೆ ಖ್ಯಾತ ಫುಟ್ಬಾಲ್‌ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಕೂಡ ನಿವೃತ್ತಿ ಖಚಿತಪಡಿಸಿರುವುದರಿಂದ, ಅವರದ್ದೂ ಕೂಡ ಕೊನೆಯ ಪಂದ್ಯವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಬುಧವಾರ ಕತಾರ್‌ನ ದೋಹಾದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ 3-0 ಗೋಲುಗಳಿಂದ ಕ್ರೊವೇಷಿಯಾವನ್ನು ಸೋಲಿಸಿದ್ದರಿಂದ ಫೈನಲ್‌ ಪ್ರವೇಶಿಸಿದೆ. ಮೆಸ್ಸಿ ಪೆನಾಲ್ಟಿ ಸ್ಪಾಟ್ನಿಂದ ಗುರಿಯಲ್ಲಿದ್ದರು, ಹೀಗಾಗಿ ಮೂರನೇ ಗೋಲ್‌ ಅನ್ನು ಯಶಶ್ವಿಯಾಗಿ ಪಡೆದುಕೊಂಡರು. ಈ ಮೂಲಕ ಟೂರ್ನಿಯಲ್ಲಿ ಈವರೆಗೆ ಐದು ಗೋಲುಗಳನ್ನು ಗಳಿಸಿರುವ ಮೆಸ್ಸಿ, ವಿಶ್ವಕಪ್ ನಲ್ಲಿ ಅರ್ಜೆಂಟೀನಾದ ಪ್ರಮುಖ ಗೋಲ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಹೀಗಾಗಿ ವಿಶ್ವಕಪ್‌ ಪಟ್ಟಿಯಲ್ಲಿ ಗೇಬ್ರಿಯಲ್ ಬಾಟಿಸ್ಟುಟಾ (10) ಅವರನ್ನು ಹಿಂದಿಕ್ಕಿದ್ದಾರೆ. ಹೀಗಾಗಿ 35ರ ಹರೆಯದ ಅವರು ಈವರೆಗೆ 11 ವಿಶ್ವಕಪ್ ಗೋಲುಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದಾರೆ.

ಗೆಲುವಿನ ಕುರಿತು ಮಾದ್ಯಮದೊಂದಿಗೆ ಮಾತನಾಡಿದ ಆವರು, ʼನಾವು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ,  ಅದೇ ರೀತಿ ಇತರ ಉತ್ತಮ ಸಂದರ್ಭಗಳನ್ನು ಎದುರಿಸಿದ್ದೇವೆ. ಹೀಗಾಗಿಯೇ  ಇಂದು ನಾವು ಅದ್ಭುತವಾದ ಕ್ಷಣವನ್ನು ಅನುಭವಿಸುತ್ತಿದ್ದೇವೆʼ ಎಂದು ತಿಳಿಸಿದ್ದಾರೆ.

ʼಫೈನಲ್ ನಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಮುಗಿಸುತ್ತಿದ್ದೇನೆ. ಈಗಾಗಿ ಇಂದಿನ ದಿನ ಜಯವನ್ನು ಸಾಧಿಸಿದ್ದು ನನಗೆ ತುಂಬಾ ಸಂತೋಷವಾಗಿದೆʼ ಎಂದು ಮೆಸ್ಸಿ ಅರ್ಜೆಂಟೀನಾದ ಮಾಧ್ಯಮ ಸಂಸ್ಥೆ ಸುದ್ದಿಗಾರರೊಂದಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಕ್ರೊವೇಷಿಯಾ ವಿರುದ್ಧದ ಸೆಮಿಫೈನಲ್ ಗೆಲುವಿನ ನಂತರ, ʼಅರ್ಜೆಂಟೀನಾ ಮತ್ತೊಮ್ಮೆ ವಿಶ್ವಕಪ್ ಫೈನಲ್ ನಲ್ಲಿದೆ. ಅದನ್ನು ಆನಂದಿಸಿ! ಎಂದು ಮೆಸ್ಸಿ ತಮ್ಮ ಸಹ ಆಟಗಾರರಿಗೆ ಹೇಳಿದ್ದಾರೆ.

ಇನ್ನೂ ಮ್ಯಾಂಚೆಸ್ಟರ್ ಸಿಟಿ ತಂಡದ ಆಟಗಾರ ಜೂಲಿಯನ್ ಅಲ್ವಾರೆಜ್ ಎರಡು ಬಾರಿ ಗೋಲು ಬಾರಿಸಿ ಟೂರ್ನಿಯಲ್ಲಿ ಗಳಿಸಿದ ಗೋಲುಗಳ ಸಂಖ್ಯೆಯನ್ನು ನಾಲ್ಕಕ್ಕೆ ಏರಿಸಿದರು.

ಭಾನುವಾರ ಲುಸೈಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ತಂಡ ಎಂದಿನಿಸಿಕೊಂಡಿರುವ ಅರ್ಜೆಂಟೀನಾ, ಮೊರಾಕ್ಕೊ ಅಥವಾ ಹೋಲ್ಡರ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ.

ಈ ಸಂದರ್ಭದಲ್ಲಿ ಫುಟ್ಬಾಲ್‌ ಅಭಿಮಾನಿಗಳಿಗೆ ಅತ್ಯಂತ ನೆಚ್ಚಿನ ಆಟಗಾರ ಮೆಸ್ಸಿ, ಈ ಬಾರಿಯ ಫಿಫಾ ವಿಶ್ವಕಪ್ ಅನ್ನು ಕೈಯ್ಯಲ್ಲಿಡಿದು ಹರುಷ ಆಚರಿಸಿಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

Related Articles

ಇತ್ತೀಚಿನ ಸುದ್ದಿಗಳು