Monday, July 28, 2025

ಸತ್ಯ | ನ್ಯಾಯ |ಧರ್ಮ

ಸಂತ್ರಸ್ತೆ ದೂರು, ಸೆಕ್ಷನ್ 376 ದಾಖಲು ; ಪ್ರಜ್ವಲ್ ಗೆ ಜೈಲು ಫಿಕ್ಸ್, ಹೆಚ್.ಡಿ.ರೇವಣ್ಣ ಕಥೆ ಏನು?

ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಎ.1 ಆರೋಪಿಯಾಗಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತಂತ ಪುತ್ರ ಹಾಗೂ ತಂದೆ ಇಬ್ಬರೂ ನಿರೀಕ್ಷಣಾ ಜಾಮೀನು ಕೋರಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ನಡುವೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮೇಲೆ ನಾನ್ ಬೇಲೆಬಲ್ ಕೇಸ್ ಬುಕ್ ಆಗೋ ಸಾಧ್ಯತೆ ಇದೆ. ಹೀಗಾಗಿ ಅವರು ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಇಂದು ಬಂಧನಕ್ಕೆ ಒಳಗಾಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ನಡುವೆ ನಿನ್ನೆಯ ದಿನ ಪ್ರಜ್ವಲ್ ರಾಸಲೀಲೆ ಕೇಸ್ ತನಿಖೆ ನಡೆಸುತ್ತಿರುವಂತ ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತೆಯನ್ನು ಹೊಳೆನರಸೀಪುರ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಸಂತ್ರಸ್ತ ಮಹಿಳೆಯಿಂದ ಜಡ್ಜ್ ಮುಂದೆ 164ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ತಡರಾತ್ರಿ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ   ಸೆಕ್ಷನ್ 376 ದಾಖಲಾಗಿದೆ.

ಕ್ರೈಮ್​ ಇನ್​ವೆಸ್ಟಿಗೇಷನ್​​​ ಡಿಪಾರ್ಟ್​ಮೆಂಟ್​ ಪೊಲೀಸ್​ ಠಾಣೆಯಲ್ಲಿ ಪ್ರಜ್ವಲ್​ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್​​ 376(2), 506, 354(A) , 354(B), 354(C) ಅಡಿಯಲ್ಲಿ ಎಫ್​ಐಆರ್​ ಮಾಡಲಾಗಿದೆ. ಹೀಗಾಗಿ ಪ್ರಜ್ವಲ್​ ರೇವಣ್ಣ ವಿದೇಶದಿಂದ ಬರುತ್ತಿದ್ದಂತೆ ಜೈಲು ಸೇರುವ ಎಲ್ಲಾ ಸಾಧ್ಯತೆ ಮುಂದಿದೆ.

ಇಂದು ಹೊಳೆನರಸೀಪುರ ಜೆ ಎಂ ಎಫ್ ಸಿ ಕೋರ್ಟ್ ಹಾಗೂ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ನೀಡುವ ಆದೇಶದ ಮೇಲೆ ಆರೋಪಿಗಳಾದಂತ ಪ್ರಜ್ವಲ್, ರೇವಣ್ಣ ಭವಿಷ್ಯ ನಿರ್ಧಾರವಾಗಿದೆ. ನಾಳೆ ನಿರೀಕ್ಷಣಾ ಜಾಮೀನು ಸಿಗದೇ ಇದ್ರೇ, ಹೆಚ್.ಡಿ ರೇವಣ್ಣ ಕೂಡ ಬಂಧನವಾಗೋ ಸಾಧ್ಯತೆ ಇದೆ. ಅಲ್ಲದೇ ಹೊಳೆನರಸೀಪುರ ನ್ಯಾಯಾಲಯವು ಹೆಚ್.ಡಿ ರೇವಣ್ಣ ವಿರುದ್ಧವೂ 376 ಸೇರಿಸಲು ಅನುಮತಿಸಿದ್ದೇ ಆದ್ರೇ, ಇಬ್ಬರು ಆರೋಪಿಗಳೂ ಜೈಲು ಸೇರಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page