Friday, April 26, 2024

ಸತ್ಯ | ನ್ಯಾಯ |ಧರ್ಮ

ಮನುಜಮತ ಸಿನಿ ಗೆಳೆಯರ ತಂಡಂದಿಂದ ಕಲ್ಬುರ್ಗಿಯಲ್ಲಿ 2 ದಿನಗಳ ಚಿತ್ರೋತ್ಸವ

ಕಲ್ಬುರ್ಗಿ: ಸಿನೆಮಾ ಆಸಕ್ತರ ಗುಂಪಾದ ಮನುಜಮತ ಹಾಗೂ ಜನರಂಗ ತಂಡವು ಕಲ್ಬುರ್ಗಿಯಲ್ಲಿ 2 ದಿನಗಳ ಚಲನಚಿತ್ರೋತ್ಸವವನ್ನು ʼಜನಮನದ ಬಣ್ಣಗಳುʼ ಎನ್ನುವ ಥೀಮ್‌ ಇಟ್ಟುಕೊಂಡು ಆಚರಿಸುತ್ತಿವೆ.

ಈ ಎರಡು ದಿನಗಳ ಫಿಲ್ಮ್‌ ಫೆಸ್ಟಿವಲ್‌ ಸಂಭ್ರಮದಲ್ಲಿ ಹಲವು ದೇಶಿ ಹಾಗೂ ವಿದೇಶಿ ಚಿತ್ರಗಳ ವೀಕ್ಷಣೆ ಹಾಗೂ ಆ ಕುರಿತು ಸಂವಾದ ಇರುತ್ತದೆ.

ಈ ಚಿತ್ರೋತ್ಸವದಲ್ಲಿ ರಾಜ್ಯದ ವಿವಿಧೆಡೆಯ ಚಿತ್ರಾಸಕ್ತರು ಹಾಗೂ ಚಿತ್ರ ವಿಮರ್ಶಕರು ಭಾಗವಹಿಸಲಿದ್ದಾರೆ. ಮನುಜಮತ ತಂಡವು ಹಲವು ವರ್ಷಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ, ವಿವಿಧ ವಿಷಯಗಳಡಿ ಚಿತ್ರೋತ್ಸವನ್ನು ಆಚರಿಸುತ್ತಿದೆ.

ಆಸಕ್ತರು ಪೋಸ್ಟರಿನಲ್ಲಿರುವ ಫೋನ್‌ ಸಂಖ್ಯೆಗೆ ಕರೆ ಮಾಡಿ ತಮ್ಮ ಸೀಟುಗಳನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಚಲನ ಚಿತ್ರೋತ್ಸವವು ಮುಂದಿನ ತಿಂಗಳು, ಎಂದರೆ ಅಕ್ಟೋಬರ್‌ ಏಳು ಮತ್ತು ಎಂಟರಂದು ಕಲ್ಬುರ್ಗಿಯ ಆರಾಧ್ಯ ಬಾಂಕ್ವೆಟ್‌ ಹಾಲ್‌ನಲ್ಲಿ ನಡೆಯಲಿದೆ

Related Articles

ಇತ್ತೀಚಿನ ಸುದ್ದಿಗಳು