Friday, November 8, 2024

ಸತ್ಯ | ನ್ಯಾಯ |ಧರ್ಮ

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್ ನಿವೃತ್ತಿ- ಅಂತಿಮ ಸಂದೇಶ

ನವದೆಹಲಿ:ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ತಮ್ಮ ಅಧಿಕಾರಾವಧಿಯ ಅಂತಿಮ ದಿನದಂದು, ಡಿವೈ ಚಂದ್ರಚೂಡ್ ಅವರು ವಿಧ್ಯುಕ್ತ ಪೀಠದಿಂದ ತಮ್ಮ ಅಂತಿಮ ಸಂದೇಶವನ್ನು ನೀಡಿದರು ಮತ್ತು ಅವರು ಇನ್ನು ಮುಂದೆ ದೇಶದ ಉನ್ನತ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವುದಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಂಡರು. “ನಾಳೆಯಿಂದ ನನಗೆ ನ್ಯಾಯ ನೀಡಲು ಸಾಧ್ಯವಾಗುವುದಿಲ್ಲ, ಆದರೆ ನಾನು ತೃಪ್ತಿ ಹೊಂದಿದ್ದೇನೆ” ಎಂದು ಅವರು ಹೇಳಿದರು.

ನವೆಂಬರ್ 9, 2022 ರಂದು ಅಧಿಕಾರ ವಹಿಸಿಕೊಂಡ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಎರಡು ವರ್ಷಗಳ ಅವಧಿ ಮುಗಿದ ನಂತರ ಇಂದು ತಮ್ಮ ಸ್ಥಾನಕ್ಕೆ ವಿದಾಯ ಹೇಳಿದರು. ಹಿಂದಿನ ದಿನ ಸಂಜೆ ತಮ್ಮ ರಿಜಿಸ್ಟ್ರಾರ್ ಜುಡಿಷಿಯಲ್ ಅವರೊಂದಿಗಿನ ಲಘುವಾದ ಕ್ಷಣವನ್ನು ನೆನಪಿಸಿಕೊಳ್ಳುತ್ತಾ, “ನನ್ನ ರಿಜಿಸ್ಟ್ರಾರ್ ಜುಡಿಷಿಯಲ್ ಎಷ್ಟು ಗಂಟೆಗೆ ಕಾರ್ಯಕ್ರಮ ಪ್ರಾರಂಭಿಸಬೇಕು ಎಂದು ನನ್ನನ್ನು ಕೇಳಿದಾಗ, ನಾನು ಬಾಕಿ ಇರುವ ತುಂಬಾ ವಸ್ತುಗಳನ್ನು ಗಂಟುಕಟ್ಟಬಹುದು ಎಂದು ಭಾವಿಸಿ ಮಧ್ಯಾಹ್ನ 2 ಗಂಟೆಗೆ ಎಂದು ಹೇಳಿದೆ. ಆದರೆ ನಾನು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಯಾರಾದರೂ ಇಲ್ಲಿಗೆ ಬರುತ್ತಾರೆಯೇ, ಇಲ್ಲ ನನ್ನನ್ನು ನಾನೇ ಸ್ಕ್ರೀನ್‌ ಮೇಲೆ ನೋಡಬೇಕಾಗಿ ಬಂದೀತೋ..?” ಎಂದು ಎಂದು ಹೇಳಿದರು.

ನ್ಯಾಯಾಧೀಶರ ಪಾತ್ರವನ್ನು ವಿವರಿಸುತ್ತಾ, ಪ್ರತಿದಿನ ನ್ಯಾಯಾಲಯಕ್ಕೆ ಸೇವೆ ಸಲ್ಲಿಸಲು ಬರುವುದು ಪುಣ್ಯಕ್ಷೇತ್ರಕ್ಕೆ ಹೋದಂತೆ. “ನಾವು ಮಾಡುವ ಕೆಲಸವೆಂದರೆ ಒಂದೋ ಕೇಸ್‌ ಮಾಡುವುದು ಇಲ್ಲವೇ, ಕೇಸ್‌ ಬ್ರೇಕ್‌ ಮಾಡುವುದು,” ಎಂದು ಅವರು ಹೇಳಿದರು. ತಮಗಿಂತ ಹಿಂದೆ ನ್ಯಾಯಾಲಯವನ್ನು ಅಲಂಕರಿಸಿದ ಮತ್ತು ದಂಡವನ್ನು ವರ್ಗಾಯಿಸಿದ ಮಹಾನ್ ನ್ಯಾಯಾಧೀಶರಿಗೆ ಗೌರವ ಸಲ್ಲಿಸಿದ ಅವರು, ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸಮರ್ಥ ನಾಯಕ ಎಂದು ಹೊಗಳಿ, ಅವರ ಸಮರ್ಥ ಕೈಯಲ್ಲಿ ಪೀಠವನ್ನು ಬಿಡಲು ನನಗೆ ಭರವಸೆ ಇದೆ ಎಂದು ಹೇಳಿದರು.

“ನಾನು ನ್ಯಾಯಾಲಯದಲ್ಲಿ ಯಾರಿಗಾದರೂ ನೋವುಂಟು ಮಾಡಿದ್ದರೆ, ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದ ಅವರು “ಮಿಚ್ಚಾಮಿ ದುಕ್ಕಡಮ್” ಎಂಬ ಜೈನ ವಾಕ್ಯವನ್ನು ಉಲ್ಲೇಖಿಸಿ, “ನನ್ನ ಎಲ್ಲಾ ದುಷ್ಕೃತ್ಯಗಳನ್ನು ಕ್ಷಮಿಸಿ” ಎಂದು ಹೇಳಿದರು. 

ಚಂದ್ರಚೂಡ್‌ ಅವರನ್ನು ಬೀಳ್ಕೊಡಲು ವಕೀಲರು ಮತ್ತು ಬಾರ್‌ನ ಸದಸ್ಯರು ಒಟ್ಟುಗೂಡಿದರು, ಅವರನ್ನು ನ್ಯಾಯಾಂಗದ “ರಾಕ್ ಸ್ಟಾರ್” ಎಂದು ಬಣ್ಣಿಸಿದರು.

ಅವರ ಉತ್ತರಾಧಿಕಾರಿಯಾಗಿ ನಾಮನಿರ್ದೇಶನಗೊಂಡಿರುವ ಮತ್ತು ನವೆಂಬರ್ 11 ರಂದು ಭಾರತದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, “ನ್ಯಾಯಮೂರ್ತಿ ಚಂದ್ರಚೂಡ್ ಅವರ ಕೋರ್ಟ್‌ಗೆ ಹಾಜರಾಗಲು ನನಗೆ ಎಂದಿಗೂ ಅವಕಾಶ ಇರಲಿಲ್ಲ, ಆದರೆ ಅವರು ಸಮಾಜದ ಅಂಚಿನಲ್ಲಿರುವವರಿಗೆ ಏನು ಮಾಡಿದ್ದಾರೋ ಅದಕ್ಕೆ ಬೇರೆ ಹೋಲಿಕೆಯೇ ಇಲ್ಲ,” ಎಂದು ಹೇಳಿದರು.

ಖನ್ನಾ ಅವರು ನ್ಯಾಯಮೂರ್ತಿ ಚಂದ್ರಚೂಡ್ ಅವರ ಸಮೋಸಾಗಳ ಬಗಿಗಿನ ಪ್ರೇಮವನ್ನು ವಿವರಿಸುತ್ತಾ, “ಮುಖ್ಯ ನ್ಯಾಯಮೂರ್ತಿ ಸ್ವತಃ ಅವುಗಳನ್ನು ತಿನ್ನದಿದ್ದರೂ, ಪ್ರತಿಯೊಂದು ಸಭೆಯಲ್ಲೂ ಸಮೋಸಾಗಳನ್ನು ಕೊಡಲಾಗುತ್ತಿತ್ತು,” ಎಂದು ಹೇಳಿದರು.

ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಧಿಕಾರಾವಧಿಯು ನ್ಯಾಯಾಲಯದೊಳಗೆ ಅನೇಕ ಬದಲಾವಣೆಗಳನ್ನು ಕಂಡಿತು. ನ್ಯಾಯಾಲಯದ ಒಳಗೆ ವಿಶೇಷಚೇತನರೇ ನಡೆಸುವ ಮಿಟ್ಟಿ ಕೆಫೆ ಸ್ಥಾಪನೆಯಿಂದ ಹಿಡಿದು ಮಹಿಳಾ ವಕೀಲರಿಗೆ ಮೀಸಲಾದ ಬಾರ್ ರೂಂ ಮುಂತಾದ ಹೊಸತನಗಳು ಬಂದಿವೆ.

ತಮ್ಮ ಎರಡು ವರ್ಷಗಳ ಅವಧಿಯಲ್ಲಿ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಮಹತ್ವದ ತೀರ್ಪುಗಳ ಸರಣಿಯನ್ನು ಬರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜಕೀಯವನ್ನು ಮರುವ್ಯಾಖ್ಯಾನಿಸಿದ ಆರ್ಟಿಕಲ್ 370 ರ ಹಿಂಪಡೆಯುವಿಕೆಯನ್ನು ಎತ್ತಿಹಿಡಿಯುವ ಸಂವಿಧಾನ ಪೀಠದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು, ಸೆಪ್ಟೆಂಬರ್ 2024 ರೊಳಗೆ ಚುನಾವಣೆಗಳನ್ನು ನಡೆಸುವಂತೆ ಆದೇಶಿಸಿದ್ದರು.

ಮತ್ತೊಂದು ಮಹತ್ವದ ತೀರ್ಪಿನಲ್ಲಿ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಶಾಸಕಾಂಗಕ್ಕೆ ಮುಂದೂಡುವ ಮೂಲಕ ಸಲಿಂಗ ವಿವಾಹಗಳನ್ನು ಗುರುತಿಸಲು ವಿಶೇಷ ವಿವಾಹ ಕಾಯ್ದೆಯನ್ನು ಬದಲಾಯಿಸಲು ನಿರಾಕರಿಸಿದರು. ಆದಾಗ್ಯೂ, ಅವರು LGBTQ+ ಸಮುದಾಯದ ಹಕ್ಕನ್ನು ತಾರತಮ್ಯದಿಂದ ಮುಕ್ತವಾಗಿ ಘನತೆಯಿಂದ ನಡೆಸಿಕೊಳ್ಳಬೇಕೆಂದು ಒತ್ತಾಯಿಸಿದರು. 

ಜಸ್ಟಿಸ್ ಚಂದ್ರಚೂಡ್ ಅವರು ವಿವಾದಾತ್ಮಕ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ತೆಗೆದುಹಾಕಲು ತೀರ್ಪು ನೀಡಿದರು, ರಾಜಕೀಯ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ಕಡ್ಡಾಯಗೊಳಿಸಿದರು ಮತ್ತು ಚುನಾವಣಾ ಬಾಂಡ್‌ಗಳನ್ನು ನೀಡುವುದನ್ನು ನಿಲ್ಲಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆದೇಶಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page