Home ರಾಜ್ಯ ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ವಿರುದ್ಧ ಎಫ್‌ಐಆರ್, 4.8 ಕೋಟಿ ಮೌಲ್ಯದ ನಗದು ವಶ

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ವಿರುದ್ಧ ಎಫ್‌ಐಆರ್, 4.8 ಕೋಟಿ ಮೌಲ್ಯದ ನಗದು ವಶ

0

ಕರ್ನಾಟಕದ ಚಿಕ್ಕಬಳ್ಳಾಪುರದ ಫ್ಲೈಯಿಂಗ್ ಸರ್ವೆಲೆನ್ಸ್ ತಂಡ (ಎಫ್‌ಎಸ್‌ಟಿ) ಬುಧವಾರ ಭಾರಿ ಜಪ್ತಿ ಮಾಡಿದ್ದು, 4.8 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಎಫ್‌ಎಸ್‌ಟಿ ತಂಡ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ. ಎಫ್‌ಐಆರ್‌ನಲ್ಲಿ ಸುಧಾಕರ್ ಅವರು ಲಂಚದಲ್ಲಿ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ ಮತ್ತು ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿಲಾಗಿದೆ. ಚುನಾವಣೆಗೂ ಒಂದು ದಿನ ಮೊದಲು ಇಷ್ಟು ದೊಡ್ಡ ಮೊತ್ತ ಸಿಕ್ಕಿರುವುದು ನ್ಯಾಯಯುತ ಮತದಾನದ ಕುರಿತಾದ ಕಾಳಜಿಗಳು ಹೆಚ್ಚಾಗಿವೆ.

ಚಿಕ್ಕಬಳ್ಳಾಪುರದ ಎಫ್‌ಎಸ್‌ಟಿ ₹ 4.8 ಕೋಟಿ ಹಣವನ್ನು ವಶಪಡಿಸಿಕೊಂಡಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ಗೋವಿಂದಪ್ಪ ಎಂಬವರ ಮನೆಯಿಂದ ಈ ಭಾರಿ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದ್ದು, 500 ರೂಪಾಯಿಗಳ ಬಂಡಲ್‍ಗಳಾಗಿ ಇವುಗಳನ್ನು ಕೂಡಿಡಲಾಗಿತ್ತು. ಗೋವಿಂದಪ್ಪ ಅವರನ್ನು ವಿಚಾರಣೆಗೆ ಗುರಿಪಡಿಸಿದ ಬಳಿಕ ಅವರು ನೀಡಿದ ಮಾಹಿತಿ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯ ಬೆನ್ನಲ್ಲೇ ಆದಾಯ ತೆರಿಗೆ ಅಧಿಕಾರಿಗಳು ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಎಫ್‌ಐಆರ್ ಆರ್‌ಪಿ ಕಾಯ್ದೆಯ ಸೆಕ್ಷನ್ 123 ಮತ್ತು ಐಪಿಸಿಯ 171 (ಬಿ, ಸಿ, ಇ, ಎಫ್) ಅಡಿಯಲ್ಲಿ ಲಂಚ ಮತ್ತು ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರಿದ ಆರೋಪಗಳನ್ನು ಸುಧಾಕರ್‌ ಅವರ ಮೇಲೆ ಹೊರಿಸಿದೆ.

You cannot copy content of this page

Exit mobile version