ಬೆಂಗಳೂರು: ಬೃಂದಾವನ ಧಾರಾವಾಹಿ ಖ್ಯಾತಿಯ ನಟ ವರುಣ್ ಆರಾಧ್ಯ ವಿರುದ್ಧ ಬೆಂಗಳೂರು ಪಶ್ಚಿಮ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದಡಿ ವರುಣ್ ವಿರುದ್ಧ FIR ದಾಖಲಿಸಿದ್ದಾರೆ.
ವರುಣ್ ಹಾಗೂ ದೂರು ನೀಡಿರುವ ಯುವತಿ 2019ರಿಂದ ಪರಸ್ಪರ ಪ್ರೀತಿಸುತ್ತಿದ್ದರು. ವರುಣ್ ಪ್ರಸ್ತುತ ಇನ್ನೊಂದು ಹುಡುಗಿಯ ಜೊತೆ ಆತ್ಮೀಯವಾಗಿರುವುದನ್ನು ಪ್ರಶ್ನಿಸಿದ ಕಾರಣಕ್ಕಾಗಿ ಆತ ಯುವತಿಯ ಖಾಸಗಿ ವಿಡಿಯೋ ಮತ್ತು ಫೋಟೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಮುಂದೆ ಬೇರೆಯವರನ್ನು ಮದುವೆಯಾದರೆ, ಅವನನ್ನು ಸಾಯಿಸಿ ನಿನ್ನನ್ನು ಸಾಯಿಸುತ್ತೇನೆ ಬೆದರಿಸಿ, ವಾಟ್ಸ್‌ಆಪ್ ಸಂಖ್ಯೆಗೆ ಖಾಸಗಿ ಫೋಟೋ ಕಳುಹಿಸಿ ಅವಾಚ್ಯ ಪದಗಳಿಂದ ವರುಣ್ ನಿಂದಿಸಿರುವುದಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪರಸ್ಪರ ಪ್ರೀತಿಯಲ್ಲಿದ್ದ ಯುವತಿ ಹಾಗೂ ವರುಣ್ ನಡುವೆ ಕಳೆದ ವರ್ಷ ಬ್ರೇಕಪ್ ಆಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ನಟ ವರುಣ್ ಆರಾಧ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಲಂ.66(ಇ), 67 ಐಟಿ ಆಕ್ಟ್ ಮತ್ತು 504, 506 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.