Saturday, October 25, 2025

ಸತ್ಯ | ನ್ಯಾಯ |ಧರ್ಮ

ಖಾಸಗಿ ಫೋಟೋ ತೋರಿಸಿ ಬ್ಲಾಕ್‌ಮೇಲ್ ಆರೋಪ; ನಟಿ ಆಶಾ ಜೋಯಿಸ್ ವಿರುದ್ಧ ಎಫ್ಐಆರ್ ದಾಖಲು

ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಆಶಾ ಜೋಯಿಸ್‌ ಎಂಬ ನಟಿ ವಿರುದ್ಧ ಆಕೆಯ ಸ್ನೇಹಿತೆಯೇ ದೂರು ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಖಾಸಗಿ ಫೋಟೋ ಕದ್ದು, ಅದನ್ನು ಹಂಚುವುದಾಗಿ ಬ್ಲಾಕ್‌ ಮೇಲ್‌ ಮಾಡಿದ ಆರೋಪದ ಬಗ್ಗೆ ಆಶಾ ಜೋಯಿಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನಟಿ ಆಶಾ ಜೋಯಿಸ್‌, ಮಿಸ್‌ ಇಂಡಿಯಾ ಪ್ಲಾನೇಟ್‌ 2016 ರ ಸ್ಪರ್ಧಿಯಾಗಿದ್ದಳು. ಹಲವು ಕನ್ನಡ ಧಾರವಾಹಿಯಲ್ಲಿ ಪೋಷಕಪಾತ್ರದಲ್ಲಿ ನಟಿಸಿದ್ದ ಆಕೆ ಶೃಂಗೇರಿ ಶಾರದಾ ಪೀಠದ ಜೋಯಿಸರ ಕುಟುಂಬದವಳು ಎಂದೇ ಪರಿಚಯಿಸಿಕೊಂಡಿದ್ದಳು.

ಸ್ನೇಹಿತೆಯ ಖಾಸಗಿ ವಿಡಿಯೋ ಹಂಚಿಕೊಂಡ ಆರೋಪದ ಮೇಲೆ ಆಶಾ ಜೋಯಿಸ್‌ ಎಂಬಾಕೆಯ ವಿರುದ್ದ ಪಾರ್ವತಿ ಎಂಬುವವರು ದೂರು ನೀಡಿದ್ದಾರೆ.

ಘಟನೆ ಹಿನ್ನೆಲೆ
ಪಾರ್ವತಿ ಎಂಬ 61 ವರ್ಷದ ಹಿರಿಯ ಮಹಿಳೆಯೊಡನೆ ಆಶಾ ಜೋಯಿಸ್‌ ಸ್ನೇಹ ಬೆಳೆಸದಿದ್ದಳು. ತನ್ನ ಕಿರುತೆರೆ ನಟನೆಯ ಪ್ರಭಾವ ಹಾಗೂ ಶೃಂಗೇರಿ ಮೂಲದ ಬಗ್ಗೆ ಹೇಳಿಕೊಂಡು ಆಪ್ತಳಾಗಿದ್ದಳು. ಪಾರ್ವತಿಯವರು ತಾವು ಕೆಲಸ ಮಾಡುತ್ತಿದ್ದ ಶೆಲ್ಟರ್‌ ಮಾಲಿಕರೊಡನೆ ಮದುವೆಯಾಗಿದ್ದರು. ಈ ಸಂಗತಿಯನ್ನೇ ಇಟ್ಟು ಆಶಾ ಜೋಯಿಸ್ ಇಬ್ಬರನ್ನೂ ಸುಲಿಗೆ ಮಾಡಲು ಸಂಚು ರೂಪಸಿದ್ದಳು.

ಪಾರ್ವತಿ ಅವರ ಬಳಿಯಿದ್ದ ಮೋಬೈಲ್ ಕದ್ದು, ಅದರಲ್ಲಿದ್ದ ಖಾಸಗಿ ಫೋಟೋಗಳನ್ನು ಕದ್ದು , ಪಾರ್ವತಿಗೆ ಮಾಲಿಕರಿಂದ (ಗಂಡನಿಂದ) 2 ಕೋಟಿ ರೂ. ಹಣ ಕೊಡಿಸಲು ದುಂಬಾಲು ಬಿದ್ದಿದ್ದಳು. ಒಂದು ವೇಳೆ ಹಣ ನೀಡದಿದ್ದರೆ ಈ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಳು. ಪಾರ್ವತಿ ಹಾಗೂ ಅವರ ಪತಿಯೊಡನೆ ನಡೆದಿದ್ದ ವಾಯ್ಸ್‌ ಚಾಟ್‌, ಪ್ರೈವೇಟ್‌ ವಿಡಿಯೋಗಳು ಹಾಗೂ ಖಾಸಗಿ ಪೋಟೋಗಳನ್ನು ತನ್ನ ಬಳಿ ಇರಿಸಿಕೊಂಡು ಬ್ಲಾಕ್‌ ಮೇಲ್‌ ಶುರು ಮಾಡಿದ್ದ ಆಶಾ ವಿರುದ್ದ ಈಗ ತಿಲಕ್‌ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದ್ದು, ಎಫ್ಐಆರ್ ಕೂಡ ದಾಖಲಾಗಿದೆ.

ದುರುದ್ದೇಶದಿಂದ ಖಾಸಗಿ ಮಾಹಿತಿಯನ್ನು ಕದ್ದು ಬ್ಲಾಕ್‌‌ಮೇಲ್ ಮಾಡುತ್ತಿದ್ದಾಳೆಂದು ಆರೋಪಿಸಿ ಆಶಾ ವಿರುದ್ದ ಪಾರ್ವತಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ಧಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page