Saturday, September 13, 2025

ಸತ್ಯ | ನ್ಯಾಯ |ಧರ್ಮ

ಹಳೆ ತಾಲ್ಲೂಕು ಕಚೇರಿ ಕಡತಗಳಿಗೆ ಬೆಂಕಿ – ಜನತೆ ಆಕ್ರೋಶ

ಬೇಲೂರು : ಬೇಲೂರು ಪಟ್ಟಣದ ಹಳೆಯ ತಾಲೂಕು ಕಚೇರಿ ಆವರಣದಲ್ಲಿ ರಾಶಿ ರಾಶಿ ಕಸಕ್ಕೆ ಹಾಕಿದ ಬೆಂಕಿಯ ಕೆನ್ನಾಲಿಗೆ ಹೆಚ್ಚು ಉರಿಯುತ್ತಿರುವ ಜೊತೆಗೆ ಸುತ್ತಲಿನ ಪ್ರದೇಶ ಹೊಗೆಯಿಂದ ಕೂಡಿದ್ದು, ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಅಲ್ಲದೆ ಬೆಂಕಿಯನ್ನು ಶೀಘ್ರವೇ ನಂದಿಸಬೇಕು ಮತ್ತು ಬೆಂಕಿ ಹಚ್ಚಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು! ಶಿಲ್ಪ ಕಲೆಗಳ ನಾಡು ಚೆನ್ನಕೇಶವನ ಬೀಡು ಎಂದೇ ಖ್ಯಾತಿಯಾದ ಬೇಲೂರು ಪಟ್ಟಣದ ಹೃದಯ ಭಾಗದಲ್ಲಿರುವ ಶತಮಾನ ಪೂರೈಸಿದ ಹಳೆಯ ತಾಲೂಕು ಕಚೇರಿ ಸದ್ಯ ಕಸಬಾ ಹೋಬಳಿಗೆ ಒಳಪಟ್ಟ ಕಚೇರಿಗಳು ಹಾಗೂ ಇನ್ನಿತರ ಜನರ ಉಪಯೋಗಕ್ಕೆ ಬಳಕೆ ಮಾಡುತ್ತಿರು ಕಚೇರಿಯ ಸುತ್ತಮುತ್ತಲಲ್ಲಿನ ರಾಶಿ ರಾಶಿ ಕಸಕ್ಕೆ ಇಲ್ಲಿನ ಅಧಿಕಾರಿ ಸಿಬ್ಬಂದಿಗಳು ಮುನ್ನೆಚ್ಚರಿಕೆ ಇಲ್ಲದೆ ಬೆಂಕಿಯನ್ನು ಹಾಕಿದ ಪರಿಣಾಮದಿಂದ ಬೆಂಕಿಯ ಕೆನ್ನಾಲಿಗೆ ತೀವ್ರತೆ ಪಡೆದಿದ್ದು, ಹೊಗೆ ಸಂಪೂರ್ಣವಾಗಿ ಆವರಣವನ್ನು ಆವರಿಸಿದ್ದಲ್ಲದೆ ಹಳೆಯ ತಾಲೂಕು ಕಚೇರಿ ಸುತ್ತಮುತ್ತಲಿರುವ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ, ಪೊಲೀಸ್ ಸ್ಟೇಷನ್, ಅಂಗಡಿ ಮಳಿಗೆಗಳು ಸೇರಿದಂತೆ ಜನವಸತಿ ಕೇಂದ್ರಗಳ ಸುತ್ತ ಹೊಗೆ ಸುತ್ತುವರಿದ ಹಿನ್ನೆಲೆಯಲ್ಲಿ ಜನರು ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ದಿನಗಳಿಂದಲೂ ಕೂಡ ಹೊಗೆ ತೀವ್ರ ಪರಿಣಾಮವನ್ನು ಕಂಡರೂ ಕೂಡ ಸಂಬಂಧ ಪಟ್ಟವರು ಹಳೆಯ ತಾಲೂಕು ಕಚೇರಿಯ ಅಧಿಕಾರಿ ಸಿಬ್ಬಂದಿಗಳು ಯಾವುದೇ ಕ್ರಮವನ್ನು ಕೈಗೊಳ್ಳದೆ ಜಾಣಮೌನಕ್ಕೆ ಜಾರಿದ್ದಾರೆ, ಈಗಾಗಲೇ ಪುರಸಭೆ ಮೌಖಿಕವಾದಂತ ಆದೇಶವನ್ನು ನೀಡಿದ್ದರೂ ಕೂಡ ಇಲ್ಲಿನ ಅಧಿಕಾರಿಗಳು ಖ್ಯಾರೆ ಎಂದಿಲ್ಲ ಬೆಂಕಿಯ ಕಿಡಿ ತಾಲೂಕು ಪಂಚಾಯಿತಿ ಅಥವಾ ಇನ್ನಿತರ ಕಡೆ ಹರಡಿದರೆ ಗತಿ ಏನು? ತಾಲೂಕು ಪಂಚಾಯಿತಿ ಮತ್ತು ಹಳೆ ತಾಲ್ಲೂಕು ಕಚೇರಿಯಲ್ಲಿ ಕಡತಗಳಿದ್ದು ಈ ಕಡತಗಳ ಬಗ್ಗೆ ಏಕೆ ಯೋಚನೆಯನ್ನು ಮಾಡುತ್ತಿಲ್ಲ ಅದಲ್ಲದೆ ಹಳೆ ತಾಲೂಕು ಕಚೇರಿ ಹಿಂಭಾಗದಲ್ಲಿ ಅಧಿಕಾರಿಗಳ ವಸತಿ ಗೃಹಗಳು ಮತ್ತು ಜನರ ವಸತಿಗೃಹಗಳು ಕೂಡ ಇದ್ದು ಅವುಗಳಿಗೆ ಹಾನಿಯಾಗು ವುದಿಲ್ಲವೇ? ಈ ಬಗ್ಗೆ ಸಂಬಂಧ ಪಟ್ಟವರು ಶೀಘ್ರದಲ್ಲಿ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಚನ್ನೇಗೌಡರ ಬೀದಿಯ ಶಂಕರ್ ಎಂಬುವರು ಕಳೆದ ಮೂರು ದಿನಗಳಿಂದಲೂ ಕೂಡ ತಾಲೂಕು ಪಂಚಾಯಿತಿ ಮತ್ತು ಹಳೆ ತಾಲೂಕು ಕಚೇರಿಯ ಮಧ್ಯೆ ಜಾಗದಲ್ಲಿ ಕಸಕ್ಕೆ ಬೆಂಕಿ ಹಾಕಿದ ಪರಿಣಾಮದಿಂದ ಬೆಂಕಿಯ ತೀವ್ರತೆ ಹೆಚ್ಚಾಗಿ ಸುತ್ತಲಿನ ಜನ ನಿಜಕ್ಕೂ ಆತಂಕಕ್ಕೆ ಒಳಾಗಾಗಿ ದ್ದಾರೆ. ಈ ಬಗ್ಗೆ ಇಲ್ಲಿ ಕೆಲವೊಬ್ಬ ಅಧಿಕಾರಿ ಸಿಬ್ಬಂದಿಯನ್ನು ಕೇಳಿದರೆ ಅವರು ಉಡಾಫೆಯಿಂದ ವರ್ತಿಸುತ್ತಾರೆ ಒಂದು ವೇಳೆ ಬೆಂಕಿಯ ತೀವ್ರತೆ ಹೆಚ್ಚಾಗಿ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆಗಾರರು ಯಾರು ಅಲ್ಲದೆ ಬೇಲೂರು ಪಟ್ಟಣದ ಹೃದಯ ಭಾಗದಲ್ಲಿ ಇಂತಹ ಘಟನೆ ನಡೆದರು ಪುರಸಭೆ ಏಕೆ ಮೌನವಹಿಸಿದೆ ಎಂಬ ಬಗ್ಗೆ ತಿಳಿಯುತ್ತಿಲ್ಲ ಜನವಸತಿ ಕೇಂದ್ರಗಳು ಕಚೇರಿಗಳು ವಿಶೇಷವಾಗಿ ಜನಸಂದಣಿ ಯನ್ನು ಹೊಂದಿರುವಂತಹ ಇಂತಹ ತಾಣದಲ್ಲಿ ಬೆಂಕಿ ಯನ್ನು ನಂದಿಸುವ ಕೆಲಸಕ್ಕೆ ಯಾರು ಮುಂದಾಗುತ್ತಿಲ್ಲ ಈ ಬಗ್ಗೆ ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page