Thursday, February 5, 2026

ಸತ್ಯ | ನ್ಯಾಯ |ಧರ್ಮ

ದೆಹಲಿ ಜೈಪುರ ಎಕ್ಸ್ಪ್ರೆಸ್ ವೇನಲ್ಲಿ ಬೆಂಕಿ ದುರಂತ, ಇಬ್ಬರ ಸಾವು

ಬುಧವಾರ ರಾತ್ರಿ ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿದ್ದ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಧ್ಯಕ್ಕೆ ಬೆಂಕಿ ಅವಘಡಕ್ಕೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ.

ದೆಹಲಿಯಿಂದ ಜೈಪುರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿರುವ ಝಾರ್ಸಾ ಮೇಲ್ಸೇತುವೆ ಬಳಿ ರಾತ್ರಿ 8:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅಗ್ನಿಶಾಮಕ ಇಲಾಖೆ ಉಪ ನಿರ್ದೇಶಕ ಗುಲ್ಶನ್ ಕಲ್ರಾ ತಿಳಿಸಿದ್ದಾರೆ.

ಎಆರ್ 01 ಕೆ 7707 ನೋಂದಣಿ ಸಂಖ್ಯೆಯ ಸ್ಲೀಪರ್ ಬಸ್‌ಗೆ ಕ್ಯಾರೇಜ್‌ವೇಯಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿಯನ್ನು ಪಡೆದ ನಂತರ ಮೂರು ಅಗ್ನಿಶಾಮಕ ಇಂಜಿನ್‌ಗಳು ಸ್ಥಳಕ್ಕೆ ಧಾವಿಸಿವೆ. ಏಳು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗುರುಗ್ರಾಮ್‌ನ ಸಿವಿಲ್ ಆಸ್ಪತ್ರೆಯ ಡಾ.ಮಾನವ್ ಖಚಿತಪಡಿಸಿದ್ದಾರೆ.

ಬಹುತೇಕ ಎಲ್ಲಾ ಪ್ರಯಾಣಿಕರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳು 30 ರಿಂದ 50 ರಷ್ಟು ಸುಟ್ಟಗಾಯಗಳನ್ನು ಅನುಭವಿಸಿದ್ದಾರೆ ಆದರೆ ಸ್ಥಿರರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page