ಮೇಘಾಲಯದ ರಬ್ಬರ್‌ ಕಾರ್ಖಾನೆಯಲ್ಲಿ ಬೆಂಕಿ

ಮೇಘಾಲಯ: ಇಂದು ಮುಂಜಾನೆ ರಿ ಭೋಯ್ ಜಿಲ್ಲೆಯ ರಬ್ಬರ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ರಿ ಭೋಯ್ ಜಿಲ್ಲೆಯ ರಬ್ಬರ್ ಕಾರ್ಖಾನೆಯಲ್ಲಿ ಸೋಮವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆ ತಿಳಿದ ಕೂಡಲೇ  ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಈ ಹಿನ್ನಲೆ ಮಾಹಿತಿ ನೀಡಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ. ಕಾರ್ಯಾಚರಣೆ ಮುಂದುವೆರೆದಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು