Saturday, May 3, 2025

ಸತ್ಯ | ನ್ಯಾಯ |ಧರ್ಮ

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ : ಉತ್ಸವ್ ಪಟೇಲ್ ಗೆ ಸನ್ಮಾನ

ಹಾಸನ : ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ಹಾಗೂ ನಮ್ಮ ಜಿಲ್ಲೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡೋಯ್ದ ನಮ್ಮ ಹೆಮ್ಮೆಯ ಸುಪುತ್ರ ಉತ್ಸವ್ ಪಟೇಲ್ ಇವರ ಮುಂದಿನ ಭವಿಷ್ಯ ಉಜ್ವಲದಿಂದ ಕೂಡಿರಲಿ ಎಂದು ಈ ವಿದ್ಯಾರ್ಥಿಯು ಎಲ್ಲ ವಿದ್ಯಾರ್ಥಿಗಳಿಗೆ ಆದರ್ಶ ರೂಪವಾಗಿ ಹೊರಹೊಮ್ಮಲೆಂದು ಹಾರೈಸುತ್ತಾ ಇವರನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸರ್ಕಾರಿ ಪ್ರಾಥಮಿಕ ಹಾಗು ಮಾಧ್ಯಮಿಕ ಕ್ಷೇಮಾಭಿವೃದ್ಧಿ ಸಂಘ ಹಾಸನ ಜಿಲ್ಲಾ ಘಟಕದ ವತಿಯಿಂದ ಶನಿವಾರದಂದು ಸನ್ಮಾನಿಸಿ ಗೌರವಿಸಿದರು. ಇದೆ ವೇಳೆ ಉತ್ಸವ್ ಪಟೇಲ್ ತಂದೆ ಹಾಗೂ ಖ್ಯಾತ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ದೇವರಾಯಪಟ್ಟಣದ ಡಿ.ಟಿ. ಪ್ರಕಾಶ್, ಜಿಲ್ಲಾಧ್ಯಕ್ಷರಾದ ರಾಜೇಂದ್ರ ದೊಡ್ಡಮಗ್ಗೆ, ಕಾರ್ಯಧ್ಯಕ್ಷರಾದ ಸೋಮನಾಯಕ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿಬಿ.ವಿ. ನಾಗರಾಜ್, ಸಹ ಕಾರ್ಯದರ್ಶಿ ಕೆ.ಪಿ. ವೀರೇಶ್, ಸಾಂಸ್ಕöÈತಿಕ ಕಾರ್ಯದರ್ಶಿ ಶಿವಕುಮಾರ್, ಹಾಸನ ತಾಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್, ಹಾಗೂ ಜಿಲ್ಲಾಧ್ಯಕ್ಷರ ಸುಪುತ್ರರಾದ ಗೋಕುಲ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page