ಮೀನಿನ ದೋಣಿ ಮುಳುಗಡೆ 50 ಲಕ್ಷಕ್ಕೂ ಹೆಚ್ಚು ನಷ್ಟ!

ಕಾರವಾರ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕೆ ಬೋಟ್‌ ಮುಳುಗಿದ ಘಟನೆ ನಡೆದಿದೆ. ಇಲ್ಲಿನ ಬೈತ್ಕುಲ್‌ ಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದ‌ ವಾಮನ್‌ ಹರಿಕಂತ್ರ ಎನ್ನುವವರ ಬೋಟ್‌ ಸುಮಾರು 30 ಟನ್‌ ಮೀನನ್ನು ಹೊತ್ತು ಬರುತ್ತಿರುವಾಗ ದೋಣಿಯಲ್ಲಿ ನೀರು ತುಂಬಿ ಮುಳುಗಲಾರಂಭಿಸಿದೆ. ಸಮೀದಲ್ಲೇ ಇದ್ದ ಇನ್ನೊಂದು ಬೋಟಿನವರು ದೋಣಿಯಲ್ಲಿದ್ದ ಎಲ್ಲಾ ಮೀನುಗಾರರನ್ನು ರಕ್ಷಿಸಿದ್ದಾರೆ. ಈ ಮುಳುಗಡೆಯಿಂದಾಗಿ ಸುಮಾರು ಐವತ್ತು ಲಕ್ಷ ನಷ್ಟವಾಗಿದೆ ಎನ್ನಲಾಗಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ

Related Articles

ಇತ್ತೀಚಿನ ಸುದ್ದಿಗಳು