Saturday, June 15, 2024

ಸತ್ಯ | ನ್ಯಾಯ |ಧರ್ಮ

ಮೋಹದ ಬಲೆ: ಮಹಿಳೆ ಸೇರಿದಂತೆ ಐವರನ್ನು ಬಂಧಿಸಿದ ಭದ್ರಾವತಿ ಪೊಲೀಸರು

ಶಿವಮೊಗ್ಗ: ಮಹಿಳೆ ಸೇರಿದಂತೆ ಐವರನ್ನು ಬಂಧಿಸುವ ಮೂಲಕ ಭದ್ರಾವತಿಯ ಹೊಸಮನೆ ಪೊಲೀಸರು ಹನಿಟ್ರ್ಯಾಪ್ ಗ್ಯಾಂಗ್ (Honeytrap Gang) ಒಂದನ್ನು ಭೇದಿಸಿದ್ದಾರೆ. ಇವರಿಂದ ರೆನಾಲ್ಟ್ ಡಸ್ಟರ್ ಎಸ್‌ಯುವಿ ಹಾಗೂ ಏಳು ಮೊಬೈಲ್ ಫೋನುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಶ್ವೇತಾ, ಹುಬ್ಬಳ್ಳಿಯ ವಿನಾಯಕ್, ಮಹೇಶ್, ಯಲ್ಲಪ್ಪ ಮತ್ತು ಅರುಣ್ ಕುಮಾರ್ ಬಂಧಿತರು. ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಭದ್ರಾವತಿ ನಿವಾಸಿ ಶರತ್ ನೀಡಿದ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಶರತ್ ಕೆಲವು ತಿಂಗಳ ಹಿಂದೆ ಭದ್ರಾವತಿಯಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದಾಗ ಬಸ್‌ನಲ್ಲಿ ಶ್ವೇತಾಳನ್ನು ಭೇಟಿಯಾಗಿದ್ದರು. ಅಂದು ಅವರು ತಮ್ಮ ಫೋನ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡರು. ಕೆಲವು ದಿನಗಳ ನಂತರ, ಶ್ವೇತಾ ನಗ್ನಳಾಗಿ ಶರತ್‌ಗೆ ವಾಟ್ಸಾಪ್ ಕರೆ ಮಾಡಿದ್ದಳು. ಆ ವಿಡಿಯೋ ತೋರಿಸಿ ಆಕೆ ಆತನಿಂದ 20 ಲಕ್ಷ ರೂ. ನೀಡುವಂತೆ ಬ್ಲಾಕ್‌ಮೇಲ್‌ ಮಾಡಿದ್ದಳು,

ಶರತ್ ಅವರನ್ನು ಬೆದರಿಸಿ ತಂಡವು 1 ಲಕ್ಷ ರೂ. ಪಡೆಯುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಲಾರಂಭಿಸಿದರು. ಗ್ಯಾಂಗ್ ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳಿದ್ದು, ಶರತ್ ಅವರನ್ನು ಹೋಟೆಲ್ಲಿಗೆ ಬರುವಂತೆ ಹೇಳಿದೆ. ನಂತರ ದುಷ್ಕರ್ಮಿಗಳು ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಮೈಸೂರಿಗೆ ಕರೆದೊಯ್ದಿದ್ದಾರೆ. ದಾರಿ ಮಧ್ಯೆ ಶ್ವೇತಾ ಅವರಿಂದ 25 ಲಕ್ಷ ಸಾಲ ಪಡೆದಿರುವುದಾಗಿ ತಿಳಿಸುವ ಬಾಂಡ್ ಪೇಪರ್‌ಗೆ ಸಹಿ ಹಾಕುವಂತೆ ಶರತ್‌ ಬಳಿ ಒತ್ತಾಯಿಸಿದರು. ಗ್ಯಾಂಗ್ ಅವರನ್ನು ಎರಡು ದಿನಗಳ ಕಾಲ ಬೀಗ ಹಾಕಿ ಕೂಡಿ ಹಾಕಿತ್ತು ಮತ್ತು ಹಲ್ಲೆ ಕೂಡ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರ ಸೆರೆಯಿಂದ ತಪ್ಪಿಸಿಕೊಂಡು ಭದ್ರಾವತಿಗೆ ಮರಳಿದ ಶರತ್ ನಂತರ ಹೊಸಮನೆ ಪೊಲೀಸರಿಗೆ ದೂರು ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು