Saturday, September 6, 2025

ಸತ್ಯ | ನ್ಯಾಯ |ಧರ್ಮ

ಗುಂಡಿ ಬಿದ್ದ ರಸ್ತೆಗಳಿಂದ ಪ್ರತಿದಿನ ಐದು ಜನರ ಸಾವು!: ಯುಪಿಯಲ್ಲೇ ಹೆಚ್ಚು

ದೆಹಲಿ: ನಗರ, ಪಟ್ಟಣ, ಗ್ರಾಮೀಣ ಪ್ರದೇಶ ಎಲ್ಲಿ ನೋಡಿದರೂ ನಮ್ಮ ದೇಶದ ಅನೇಕ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಪ್ರಯಾಣಿಕರನ್ನು ಅವು ಪ್ರಯಾಣಿಕರನ್ನು ನರಕಕ್ಕೆ ಸ್ವಾಗತಿಸುತ್ತಿವೆ

ಆದರೆ ಈ ಗುಂಡಿಗಳು ಜನರಿಗೆ ತೊಂದರೆ ನೀಡುವುದಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಗಳನ್ನೂ ಬಲಿ ತೆಗೆದುಕೊಳ್ಳುತ್ತಿವೆ. ದೇಶದಲ್ಲಿ ಪ್ರತಿದಿನ ಸರಾಸರಿ ಐದು ಜನರು ಈ ಕಾರಣದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ನಮ್ಮ ದೇಶದಲ್ಲಿ 2019-2024ರ ನಡುವೆ ಗುಂಡಿ ಬಿದ್ದ ರಸ್ತೆಗಳಿಂದಾಗಿ 9,109 ಜನರು ಮೃತಪಟ್ಟಿದ್ದು, ಅದರಲ್ಲಿ 4,792 ಜನರು ಬಿಜೆಪಿ ಆಡಳಿತದ ಉತ್ತರ ಪ್ರದೇಶದವರೇ ಆಗಿದ್ದಾರೆ.

2023ರಲ್ಲಿ ಸರಾಸರಿ ಪ್ರತಿದಿನ ಆರು ಜನರಂತೆ ಒಟ್ಟು 2,161 ಜನರು ಮೃತಪಟ್ಟಿದ್ದಾರೆ. ಇವರಲ್ಲಿ 1,320 ಜನರು (ಶೇ. 61.1) ಯುಪಿಗೆ ಸೇರಿದವರಾಗಿದ್ದಾರೆ. ಅಂದರೆ, ಅಲ್ಲಿ ಪ್ರತಿದಿನ ಸರಾಸರಿ ನಾಲ್ಕು ಜನರು ಸಾವಿಗೀಡಾಗಿದ್ದಾರೆ.

177 ಮರಣಗಳೊಂದಿಗೆ ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ, 159 ಮರಣಗಳೊಂದಿಗೆ ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ಆ ವರ್ಷದಲ್ಲಿ ಈ ಮೂರು ರಾಜ್ಯಗಳಲ್ಲಿ ಮಾತ್ರ ನೂರಕ್ಕಿಂತ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

ಆದರೆ, ಈ ಗುಂಡಿಗಳಿಂದಾದ ಮರಣಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ವರ್ಷಗಳ ದತ್ತಾಂಶ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page