Monday, July 28, 2025

ಸತ್ಯ | ನ್ಯಾಯ |ಧರ್ಮ

ಗಗನಸಖಿ ಮೇಲೆ ಅತ್ಯಾಚಾರ: ವ್ಯಕ್ತಿ ಬಂಧನ

ದೆಹಲಿ:  ಗಗನಸಖಿಯ ಮೇಲೆ ಆಕೆಯ ಮನೆಯಲ್ಲಿ ಅತ್ಯಾಚಾರ ಎಸಗಿರುವ ಘಟನೆಯು ದಕ್ಷಿಣ ದೆಹಲಿಯ ಮೆಹ್ರಾಲಿ ಪ್ರದೇಶದಲ್ಲಿ ಸಂಭವಿಸಿದ್ದು, ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ದೆಹಲಿ ಪೊಲೀಸರು  ಬಂಧಿಸಿದ್ದಾರೆ.

ಆರೋಪಿಯು ಖಾನಪುರ ನಿವಾಸಿ ಹರ್ಜೀತ್ ಯಾದವ್ರಾ ಎಂದು ಮಾಹಿತಿ ದೊರಕಿದ್ದು, ರಾಜಕೀಯ ಪಕ್ಷದ ಸ್ಥಳೀಯ ಮುಖಂಡ ಹಾಗೂ ಸಂತ್ರಸ್ತೆಗೆ ಪರಿಚಿತ ಎಂದು ತಿಳಿದುಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಯಾದವ್ ಭಾನುವಾರ ಮದ್ಯದ ಅಮಲಿನಲ್ಲಿ ತನ್ನ ಮನೆಗೆ ಬಂದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಆರೋಪಿಯ ಪರಿಚಯವಿತ್ತು ಮತ್ತು ಅತನು ರಾಜಕೀಯ ಪಕ್ಷವೊಂದರ ಬ್ಲಾಕ್ ಲೀಡರ್ ಎಂದು ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೆಹ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ತನ್ನ ಮನೆಗೆ ನುಗ್ಗಿ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆಯಿಂದ ಪಿಸಿಆರ್‌ಗೆ ಭಾನುವಾರ ಕರೆ ಬಂದಿತ್ತು, ಈ ಹಿನ್ನಲೆ ಪೊಲೀಸರು ಮಹಿಳೆಯ ಮನೆಗೆ ತಲುಪಿ ಆರೋಪಿಯನ್ನು ಬಂಧಿಸಿದ್ದು, ಮಹಿಳೆಯ ಹೇಳಿಕೆಯನ್ನು ಆಧರಿಸಿ ಆತನ ಮೇಲೆ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 376, 323, 509 ಮತ್ತು 377 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಉಪ ಕಮಿಷನರ್ (ದಕ್ಷಿಣ) ಚಂದನ್ ಚೌಧರಿ ಹೇಳಿದ್ದಾರೆ.

ಈ ಹಿನ್ನಲೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page