Sunday, March 16, 2025

ಸತ್ಯ | ನ್ಯಾಯ |ಧರ್ಮ

ಬೇಲೂರಿನಲ್ಲಿ ಪುಂಡಾನೆ ಸೆರೆ ಮೊದಲ ದಿನವೇ ಅರಣ್ಯ ಇಲಾಖೆಯ ಶ್ರಮಕ್ಕೆ ಫಲ

ಹಾಸನ: ಜಿಲ್ಲೆಯಲ್ಲಿ ಮೊದಲ ದಿನದ ಕಾಡಾನೆ ಸೆರೆ ಕಾರ್ಯಾಚರಣೆ ಮಾಡಲಾಗಿದ್ದು, ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಂತರ ಒಂಟಿಸಲಗವನ್ನು ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಬಳಿಯ ಎಸ್ಟೇಟ್ ನಲ್ಲಿ ಸೆರೆ ಹಿಡಿಯಲಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿಯ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ಸರ್ಕಾರ ಮೂರು ಪುಂಡಾನೆಗಳ ಸೆರೆಗ ಅನುಮತಿ ನೀಡಿದ್ದು, ಇಂದಿನಿಂದ ಅಧಿಕೃತ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಅರವಳಿಕೆ ಮದ್ದು ನೀಡಿ ಅರಣ್ಯ ಸಿಬ್ಬಂದಿ ಕಾಡಾನೆ ಸೆರೆ ಹಿಡಿದಿದ್ದಾರೆ. ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ನಡೆದ ಕಾಡಾನೆ ಸೆರೆ ಯಶಸ್ವಿ ಆಗಿದೆ.

ಬೇಲೂರು ತಾಲ್ಲೂಕಿನ ಬಿಟ್ಟೋಡು ಕ್ಯಾಂಪಿಗೆ ಮಾ.15ರಂದು ಮತ್ತಿಗೋಡು ಮತ್ತು ದುಬಾರೆ ಆನೆ ಶಿಬಿರಗಳಿಂದ ಏಳು ಸಾಕಾನೆಗಳು ಆಗಮಿಸಿದ್ದವು. ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಭೀಮ, ಕಂಜನ್, ಪ್ರಶಾಂತ, ಹರ್ಷ, ಧನಂಜಯ, ಮಹೇಂದ್ರ ಮತ್ತು ಏಕಲವ್ಯ ಭಾಗವಹಿಸಿದ್ದವು. ಕಾರ್ಯಾಚರಣೆಗೂ ಮುನ್ನ, ಸ್ಥಳೀಯ ಶಾಸಕ ಎಚ್.ಕ. ಸುರೇಶ್, ತಹಸೀಲ್ದಾರ್ ಮಮತಾ, ಮತ್ತು ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಪೂಜೆ ಸಲ್ಲಿಸಲಾಯಿತು. ಅರಣ್ಯ ಇಲಾಖೆ ವಿಶೇಷ ಕಾರ್ಯತಂಡ (ETF) ಸಿಬ್ಬಂದಿ ಪುಂಡಾನೆಗಳನ್ನು ಗುರುತಿಸಲು ಕಾಡಿಗೆ ತೆರಳಿದ್ದು, ಸತತ ನಾಲ್ಕು ಗಂಟೆಯ ನಂತರ ಕೊನೆಗೂ ಪುಂಡಾನೆಯೊಂದನ್ನು ಸೆರೆಯಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ

ವರ್ಷದ ಮೊದಲ ವಾರವೇ ಒರ್ವನನ್ನು ಬಲಿಪಡೆದಿದ್ದ, ಕಾಡಾನೆ, ನಂತರ 2 ತಿಂಗಳ ಅವಧಿಯಲ್ಲಿ ಸಕಲೇಶಪುರ ಮತ್ತು ಬೇಲೂರು ಭಾಗದಲ್ಲಿ ನಾಲ್ವರು ಕಾಡಾನೆ ದಾಳಿಗೆ ಬಲಿಯಾದ ಹಿನ್ನಲೆಯಲ್ಲಿ, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಮಾನವ ಮತ್ತು ಕಾಡಾನೆ ಸಂಘರ್ಷವನ್ನು ತಡೆಯಲು ಕ್ರಮಗಳನ್ನು ಕೈಗೊಂಡಿದ್ದು, ಇಂದಿನಿಂದ ಕಾಡಾನೆಯನ್ನು ಹಿಡಿಯಲು ಸರ್ಕಾರದ ಅನುಮತಿಯೊಂದಿಗೆ ಅರಣ್ಯ ಇಲಾಖೆ ಮುಂದಾಗಿತ್ತು. ಮೊದಲ ದಿನವೇ ಅರಣ್ಯ ಇಲಾಖೆಯ ಶ್ರಮಕ್ಕೆ ಫಲ ಸಿಕ್ಕಿದ್ದು, ಪುಂಡಾನೆಯೊಂದು ಸೆರೆಯಾಗಿರುವುದು ಸ್ಥಳೀಯರ ಆತಂಕವನ್ನು ಸ್ವಲ್ಪ ಕಡಿಮೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page