Sunday, January 11, 2026

ಸತ್ಯ | ನ್ಯಾಯ |ಧರ್ಮ

ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಪತ್ನಿ ನಿಧನ

ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ ಅವರ ಪತ್ನಿ ಶಾರದಾ ವಿ.ಪಾಟೀಲ (93) ಅವರು ಮಂಗಳವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆಯನ್ನು ಚಿಂಚೋಳಿಯ ವೀರೇಂದ್ರ ಪಾಟೀಲ ಸಮಾಧಿ ಪಕ್ಕದಲ್ಲಿ ಬುಧವಾರ ಮಧ್ಯಾಹ್ನ 2 ಕ್ಕೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರಿಗೆ ಪುತ್ರ ಮಾಜಿ ಶಾಸಕ ಕೈಲಾಸ ವೀರೇಂದ್ರ ಪಾಟೀಲ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮಾಜಿ ಸಂಸದ ಅಳಿಯ ಡಾ. ಬಿ.ಜಿ ಜವಳಿ ಸೇರಿದಂತೆ ಅಪಾರ ಬಂಧು ಬಳಗ ಹೊಂದಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘X’ ನಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page