Tuesday, February 25, 2025

ಸತ್ಯ | ನ್ಯಾಯ |ಧರ್ಮ

ಸಿಖ್ ವಿರೋಧಿ ದಂಗೆ ; ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಗೆ ಜೀವಾವಧಿ ಶಿಕ್ಷೆ ಪ್ರಕಟ

1984ರ ನವೆಂಬರ್‌ 1 ರಂದು ನಡೆದ ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಸಂಸದ ಸಜನ್ ಕುಮಾರ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ದೆಹಲಿಯ ರೋಸ್ ಅವೆನ್ಯೂ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿ ಆದೇಶ ಹೊರಡಿಸಿದೆ.

ಸಿಖ್ ವಿರೋಧಿ ದಂಗೆಯ ವೇಳೆ ಇಬ್ಬರ ಕೊಲೆ ಪ್ರಕರಣದಲ್ಲಿ ಸಜನ್ ಕುಮಾರ್ ಹೆಸರು ಕೇಳಿ ಬಂದಿತ್ತು. ಸರಸ್ವತಿ ವಿಹಾರ್‌ ಬಳಿ ಜಸ್ವಂತ್‌ ಸಿಂಗ್‌ ಮತ್ತು ಅವರ ಮಗ ತರುಣ್‌ದೀಪ್‌ ಸಿಂಗ್‌ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ್‌ ಕುಮಾರ್‌ ಅವರನ್ನು ಮುಖ್ಯ ಆರೋಪಿ ಎಂದು ಬಂಧಿಸಲಾಗಿತ್ತು.

ದಾಳಿಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ಮಾರಕಾಸ್ತ್ರಗಳನ್ನು ಹಿಡಿದಿದ್ದ ಗುಂಪು, ಸಿಖ್‌ ಸಮುದಾಯದವರಿಗೆ ಸೇರಿದ ಸ್ಥಳಗಳಲ್ಲಿ ಲೂಟಿ ಮಾಡಿ, ಗಲಭೆ ಸೃಷ್ಟಿಸಿ ಅಪಾರ ಹಾನಿಗೆ ಕಾರಣವಾಗಿತ್ತು. ಆ ವೇಳೆ ಮನೆಗಳಿಗೆ ನುಗ್ಗಿದ ಉದ್ರಿಕ್ತರು, ಪತಿ ಮತ್ತು ಮಗನನ್ನು ಹತ್ಯೆ ಮಾಡಿದ್ದರು.

ಆದರೆ ಈ ಪ್ರಕರಣದ ಬಗ್ಗೆ ಜಸ್ವಂತ್‌ ಪತ್ನಿ ಮನೆಗೆ ನುಗ್ಗಿ ಲೂಟ ಮಾಡಿದಲ್ಲದೇ ಬೆಂಕಿ ಹಚ್ಚಿದ್ದರು ಎಂದು ಸಾಕ್ಷಿ ಹೇಳಿರುವುದು ಪ್ರಾಸಿಕ್ಯೂಷನ್‌ ಆರೋಪ ಪಟ್ಟಿಯಲ್ಲಿ ದಾಖಲಾಗಿದೆ.ಇನ್ನು ಸಜ್ಜನ್‌ ಕುಮಾರ್‌ ಅವರು ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಿದ್ದ ನ್ಯಾಯಾಲಯ 2021 ರ ಡಿಸೆಂಬರ್‌ 16 ರಂದು ಈ ಪ್ರಕರಣದಲ್ಲಿ ಸಜ್ಜನ್‌ ಕುಮಾರ್‌ ವಿರುದ್ಧ ಆರೋಪಿಸಿತ್ತು.

ಫೆ.21 ರಂದು ಸಿಖ್‌ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್‌ ಕುಮಾರ್‌ ಶಿಕ್ಷೆಯ ಪ್ರಮಾಣವನ್ನು ದೆಹಲಿ ಹೈಕೋರ್ಟ್‌ ಕಾಯ್ದಿರಿಸಿತ್ತು. ಇದೀಗ ಮಾಜಿ ಸಂಸದ ಸಚಿನ್ ಕುಮಾರ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page