Tuesday, July 22, 2025

ಸತ್ಯ | ನ್ಯಾಯ |ಧರ್ಮ

ಮಾಜಿ ಪ್ರಧಾನಿ ದೇವೇಗೌಡರು ಕೊಟ್ಟ ಮಾತಿಗೆ ತಪ್ಪಿದ್ದಾರೆ, Jds , Bjb ಪಕ್ಷಗಳ ವಿರುದ್ದ ಕೃಷ್ಣಬೈರೇಗೌಡರ ವಾಗ್ದಾಳಿ

ಹಾಸನ : “ಮಾಜಿ ಪ್ರಧಾನಿ ದೇವೇಗೌಡರು ಕಳೆದ ಲೋಕಸಭೆ ಚುನಾವಣೆಯಲ್ಲಿ ‘ನಮ್ಮನ್ನು ಗೆಲ್ಲಿಸಿದರೆ ಒಂದು ಗಂಟೆಯಲ್ಲಿ ಮೇಕೆದಾಟು ಯೋಜನೆಗೆ ಸಹಿ ಹಾಕಿಸುತ್ತೇವೆ’ ಎಂದಿದ್ದರು. ಜನರು ಬಿಜೆಪಿ-ಜೆಡಿಎಸ್‌ಗೆ ಹೆಚ್ಚಿನ ಸೀಟ್‌ಗಳನ್ನು ಕೊಟ್ಟರು. ಆದರೆ, ಒಂದು ವರ್ಷ ಮೂರು ತಿಂಗಳು ಕಳೆದರೂ ಮೇಕೆದಾಟು ಬಗ್ಗೆ ಒಂದು ಮಾತೂ ಆಡಿಲ್ಲ. ಇದು ರಾಜ್ಯಕ್ಕೆ ದ್ರೋಹವಲ್ಲವೇ?” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.

ಚನ್ನರಾಯಪಟ್ಟಣದಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿತ “ಯುವ ಪರ್ವ” ಸಮಾವೇಶದಲ್ಲಿ ಅವರು ಮಾತನಾಡಿದರು.

“ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಯಿತು, ಒಬ್ಬರೇ ಶಾಸಕರು ಗೆದ್ದಿದ್ದಾರೆ. ಆದರೆ, ಸಂಸದರು ಹೆಚ್ಚಿನ ಮತಗಳಿಂದ ಗೆದ್ದಿದ್ದಾರೆ. ಜನರಿಗೆ ಕಾಂಗ್ರೆಸ್ ಮೇಲೆ ಒಲವಿದೆ, ನಮ್ಮ ತಪ್ಪಿನಿಂದ ಹಿನ್ನಡೆಯಾಯಿತು, ಜನರ ತಪ್ಪಿಲ್ಲ,” ಎಂದರು. “ಕಂದಾಯ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದೇವೆ. ನಮ್ಮ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಯುವ ಕಾಂಗ್ರೆಸ್ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು,” ಎಂದು ಕರೆ ನೀಡಿದರು.

ಬಿಜೆಪಿ-ಜೆಡಿಎಸ್‌ನಿಂದ ಕರ್ನಾಟಕಕ್ಕೆ ದ್ರೋಹ:“ಮಾಜಿ ಪ್ರಧಾನಿ ಕಳೆದ ಲೋಕಸಭೆ ಚುನಾವಣೆಯಲ್ಲಿ ‘ನಮ್ಮನ್ನು ಗೆಲ್ಲಿಸಿದರೆ ಒಂದು ಗಂಟೆಯಲ್ಲಿ ಮೇಕೆದಾಟು ಯೋಜನೆಗೆ ಸಹಿ ಹಾಕಿಸುತ್ತೇವೆ’ ಎಂದಿದ್ದರು. ಜನರು ಬಿಜೆಪಿ-ಜೆಡಿಎಸ್‌ಗೆ ಹೆಚ್ಚಿನ ಸೀಟ್‌ಗಳನ್ನು ಕೊಟ್ಟರು. ಆದರೆ, ಒಂದು ವರ್ಷ ಮೂರು ತಿಂಗಳು ಕಳೆದರೂ ಮೇಕೆದಾಟು ಬಗ್ಗೆ ಒಂದು ಮಾತೂ ಆಡಿಲ್ಲ. ಇದು ರಾಜ್ಯಕ್ಕೆ ದ್ರೋಹವಲ್ಲವೇ?” ಎಂದು ಪ್ರಶ್ನಿಸಿದರು. “ಪೆನ್ನು, ಅಧಿಕಾರ, ಸರ್ಕಾರ ಎಲ್ಲವೂ ಇದೆ, ಆದರೆ ಏಕೆ ಸಹಿ ಮಾಡಿಸಿಲ್ಲ? ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡಬೇಕು, ಆದರೆ 53 ಪೈಸೆಯೂ ಕೊಟ್ಟಿಲ್ಲ. ಇವರೆಲ್ಲ ನಾಲಾಯಕ್‌ಗಳು, ಕರ್ನಾಟಕದ ದ್ರೋಹಿಗಳು,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಭಾಷೆಗೆ ಅವಮಾನ:“ಬಿಜೆಪಿಯವರು ಕನ್ನಡ ಭಾಷೆಯನ್ನು ನಿರ್ಣಾಮ ಮಾಡಲು, ಕನ್ನಡವನ್ನು ಪಕ್ಕಕ್ಕೆ ಸರಿಸಿ ಹಿಂದಿ ಹೇರಲು ಹೊರಟಿದ್ದಾರೆ. ನಮ್ಮ ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಕನ್ನಡಿಗರನ್ನೇ ಸದೆಬಡಿಯಲು ಬಲವಂತವಾಗಿ ಹಿಂದಿ ಹೇರಲು ಮುಂದಾಗಿದ್ದಾರೆ. ಜೆಡಿಎಸ್ ಬಿಜೆಪಿಯ ಏಜೆಂಟ್ ಆಗಿ ಗುಲಾಮಗಿರಿ ಮಾಡುತ್ತಿದೆ,” ಎಂದು ಟೀಕಿಸಿದರು.

ಕಾಂಗ್ರೆಸ್‌ನ ಹೋರಾಟ: “ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರಾಜ್ಯದ ಪರವಾಗಿ ಕಲ್ಲು-ಬಂಡೆಯಂತೆ ಗಟ್ಟಿಯಾಗಿ ಮಾತನಾಡುತ್ತಾರೆ. ಆದರೆ, ನಮ್ಮ ನೀರು, ನಮ್ಮ ಪಾಲು ಕೇಳಿದ್ದಕ್ಕೆ ಸಿಬಿಐ, ಇಡಿಯಂತಹ ಸಂಸ್ಥೆಗಳನ್ನು ಛೂ ಬಿಟ್ಟು ಕೇಸ್‌ ಹಾಕಿಸುತ್ತಿದ್ದಾರೆ. ಆದರೂ, ನಾವು ಕರ್ನಾಟಕದ ಹಕ್ಕು, ನಮ್ಮ ಪಾಲಿಗಾಗಿ ಹೋರಾಟ ಮಾಡುತ್ತೇವೆ,” ಎಂದರು. “ಬಿಜೆಪಿ-ಜೆಡಿಎಸ್ ಕರ್ನಾಟಕವನ್ನು ಮಾರಾಟ ಮಾಡಲು ಹೊರಟಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಹಳ್ಳಿ-ಹಳ್ಳಿಗೆ ತೆರಳಿ ಜನರಲ್ಲಿ ಅರಿವು ಮೂಡಿಸಬೇಕು,” ಎಂದು ಕರೆ ನೀಡಿದರು.

ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಸಂಸದ ಶ್ರೇಯಸ್‌ಪಟೇಲ್, ಶಾಸಕ ರಿಜ್ವಾನ್ ಹರ್ಷದ್, ಮತ್ತು ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page