Home Uncategorized ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ನಿಧನಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಶ್ರದ್ಧಾಂಜಲಿ

ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ನಿಧನಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಶ್ರದ್ಧಾಂಜಲಿ

0


ಹಾಸನ: ದೇಶದ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ೯೨ ವರ್ಷ ಸಾವನಪ್ಪಿದ ಹಿನ್ನಲೆಯಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಬೃಹತ್ ಭಾವಚಿತ್ರವನ್ನಿಟ್ಟು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು.


ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಜವರೇಗೌಡ ಮಾತನಾಡಿ, ದೇಶದ ಅತ್ಯಂತ ಸರಳ, ಪ್ರಾಮಾಣಿಕ ವ್ಯಕ್ತಿಯಾಗಿ ಹಾಗೂ ದೇಶವು ಪ್ರಪಂಚದ ಎಲ್ಲಾ ಕಡೆ ಆರ್ಥಿಕವಾಗಿ ಶಕ್ತಿಯುತ ಬೆಳವಣಿಗೆಯಾಗಿದೆ ಎಂಬುದಕ್ಕೆ ಮೂಲ ಕಾರಣ ಮನ್ ಮೋಹನ್ ಸಿಂಗ್. ರಾಷ್ಟçದಲ್ಲಿ ಯಾವುದೇ ವ್ಯಕ್ತಿಗೆ ಹೋಲಿಕೆ ಮಾಡಿದರೇ ಸಿಂಗ್ ಅಂತಹ ಸರಳವ್ಯಕ್ತಿ ಮತ್ತು ಬಸವಣ್ಣನವರ ಯಾವ ಉದ್ದೇಶವಿತ್ತು ಸರಕಾರದ ಕೆಲಸ ದೇವರ ಕೆಲಸ. ಸರಕಾರದ ಸವಲತ್ತುಗಳನ್ನು ಯಾವುದೇ ಸಂದರ್ಭ ಬಂದರೂ ಸ್ವಂತಕ್ಕೆ ಬಳಕೆ ಮಾಡಬಾರದೆಂಬುದನ್ನು ಕಾಯ, ವಾಚ, ಮನಸ್ಸಾ ನಡೆದುಕೊಂಡು ಬಂದವರು. ಮನ್ ಮೋಹನ್ ಸಿಂಗ್ ಅವರು ಒಂದು ಸಾಮಾನ್ಯ ಕುಟುಂಬದಿAದ ಬಂದವರು. ಆ ಕಾಲದಲ್ಲಿ ಕರೆಂಟ್ ಇಲ್ಲದೇ ಸೀಮೆಎಣ್ಣೆ ದೀಪದಲ್ಲ್ಲಿ ಓದುತ್ತಿದ್ದವರು. ಅಲ್ಲಿಂದ ಬಂದು ವಿದ್ಯಾಭ್ಯಾಸ ಮಾಡಿ ಪ್ರೋಪೆಸರ್ ಆಗಿ ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಅದರಲ್ಲು ಆರ್ಥಿಕ ಸಲಹೆಗಾರರಾಗಿ, ವಿಶ್ವ ಬ್ಯಾಂಕಿನಲ್ಲಿ ಸಲಹೆಗಾರರಾಗಿ, ಯುವಜನ ಆಯೋಗದ ಉಪಾಧ್ಯಕ್ಷರಾಗಿ ಜೊತೆಗೆ ೧೯೯೧ ರಲ್ಲಿ ದೇಶ ಆರ್ಥಿಕವಾಗಿ ತುಂಬ ಹೀನಾಯ ಸ್ಥಿತಿಯಲ್ಲಿ ಇದ್ದ ವೇಳೆ ಚಿನ್ನವನ್ನು ಅಡ ಇಡುವ ವೇಳೆ ಟಿ.ವಿ. ನರಸಿಂಹರಾವ್ ಅವರು ಎಲ್ಲಾವನ್ನು ಹುಡುಕಿದರು. ಈ ದೇಶವನ್ನು ಮತ್ತು ಈ ಸರಕಾರವನ್ನು ಉಳಿಸಬೇಕಾದರೇ ಮನ್ ಮೋಹನ್ ಸಿಂಗ್ ಅವಶ್ಯಕತೆ ಇದೆ ಎಂದರು. ನರಸಿಂಹ ರಾವ್ ನಂತೆ ಅಷ್ಟೆ ಸರಳವಾಗಿ ಬಂದAತಹವರು ಹಾಗೂ ಈ ದೇಶಕ್ಕೆ ಉದಾರೀಕರಣ ನೀತಿಯನ್ನು ಅನುಸರಿಸಿ ಪ್ರಪಂಚ ಭಾರತದ ಕಡೆ ನೋಡುವಂತಾಗಿದೆ. ಇವತ್ತು ಏನಾದರೂ ಆರ್ಥಿಕವಾಗಿ ಈ ಸ್ಥೀತಿಯಲ್ಲಿದ್ದರೆ ಮತ್ತು ನಾವು ಉನ್ನತ ಸ್ಥಿತಿಗೆ ಹೋಗಿದ್ದರೇ ಅದಕ್ಕೆ ಕಾಣಕರ್ತರು ಮನ್ ಮೋಹನ್ ಸಿಂಗ್ ಎಂದು ಬಣ್ಣಿಸಿದರು. ರಾಜಕಾರಣಿಗಳು ಯಾವುದೇ ಪಕ್ಷಕ್ಕೆ ಸೇರಿದ್ದರೂ ಮನ್ ಮೋಹನ್ ಸಿಂಗ್ ನಂತೆ ಜೀವನ ಮಾಡಬೇಕು ಎಂದು ಸಲಹೆ ನೀಡಿದರು. ಸರಕಾರಿ ಆಸ್ಥಿಗಳನ್ನು, ಸರಕಾರಿ ಸವಲತ್ತುಗಳನ್ನು ಯಾವುದೇ ಸಂದರ್ಭ ಬಂದರೂ ದುರುಪಯೋಗ ಮಾಡಿಕೊಂಡಿರುವುದಿಲ್ಲ. ಆದರೇ ಇವತ್ತಿನ ಸ್ಥಿತಿಯೇ ಬೇರೆ ಇದೆ. ಮನ್ ಮೋಹನ್ ಸಿಂಗ್ ಎಂದರೇ ನಮಗೆ ಆದರ್ಶವಾದ ನಾಯಕರು ನಮಗೆ. ಮನ್ ಮೋಹನ್ ಸಿಂಗ್ ಅಂತವರು ಅನೇಕ ಜನರು ಹುಟ್ಟಿ ಬರಬೇಕು. ಮತ್ತೆ ಈ ರಾಷ್ಟçವನ್ನು ಮುನ್ನೆಡೆಸುವಂತಹ ಶಕ್ತಿ ಮತ್ತು ವ್ಯಕ್ತಿತ್ವವನ್ನು ದಯಪಾಲಿಸಲು ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದರು.
ಕಾಂಗ್ರೆಸ್ ಮುಖಂಡರಾದ ರಘು ದಾಸರಕೊಪ್ಪಲು ಮಾತನಾಡಿ, ದೇಶದ ಪ್ರಧಾನಿ ಆಗಿದ್ದ ಮನ್ ಮೋಹನ್ ಸಿಂಗ್ ಒಬ್ಬ ಆರ್ಥಿಕ ತಜ್ಞ. ಜೊತೆಗೆ ತುಂಬ ಸರಳ ಜೀವಿ. ಕಾಂಗ್ರೆಸ್ ಪಕ್ಷದ ನಿಷ್ಠವಂತ ಕಾರ್ಯಕರ್ತ ಹಾಗೂ ಮುಖಂಡರಾಗಿದ್ದರು. ರಾಜ್ಯಸಭೆಯಲ್ಲಿ ಸರಕಾರದ ಬಿಲ್ ಪರ ಮತ್ತು ವಿರೋಧವಾಗಿ ಚರ್ಚೆ ಏರ್ಪಟ್ಟಾಗ ಅದ್ನನ ಮತದಾನಕ್ಕೆ ಹಾಕಿದರು. ಸರಕಾರ ತಂದಿರುವ ಕಾಯಿದೆ ಜನಪರವಾಗಿಲ್ಲ ಅದು ಜನ ವಿರೋಧಿ ಆಗಿದೆ ಎಂದು ಮತ ಚಲಾಯಿಸಿದ್ದಾರೆ ಎಂದರು. ಅವರಿಗೆ ಒಂದು ಬದ್ಧತೆ ಎಂಬುದು ಇತ್ತು. ಆ ಬದ್ಧತೆಯು ಇಂದಿನ ಎಲ್ಲಾ ರಾಜಕಾರಣಿಗಳಿಗೆ ಅಡಿಪಾಯವಾಗಿದೆ. ಮನ್ ಮೋಹನ್ ಸಿಂಗ್ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಆಗಿದ್ದರು. ಇವರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಕೊಡುಗೆ ಕೊಟ್ಟಿರುವುದಾಗಿ ಹೇಳಿದರು.
ಈಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಪಿ. ಮೋಹನ್, ಪ್ರಧಾನ ಕಾರ್ಯದರ್ಶಿ ಮಂಜುನಾಥ ಶರ್ಮ, ನಗರಸಭೆ ಮಾಜಿ ಸದಸ್ಯ ಅಬ್ದೂಲ್ ಕಯಿಂ, ವಕೀಲರಾದ ಜಯರಾಂ, ವಿಶ್ವನಾಥ್, ಚಂದ್ರಶೇಖರ್, ರಾಮಚಂದ್ರ, ಲವಕುಮಾರ್, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version