Wednesday, July 2, 2025

ಸತ್ಯ | ನ್ಯಾಯ |ಧರ್ಮ

ದನವನ್ನು ಉಳಿಸುವ ಪ್ರಯತ್ನದಲ್ಲಿ ಇಡೀ ಕುಟುಂಬವೇ ಬಲಿ, ಏಕಾಂಗಿಯಾದ ಮಹಿಳೆ

ಹಸುವನ್ನು ಉಳಿಸಲು ಯತ್ನಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ವಯಸ್ಸಾದ ಪತಿ-ಪತ್ನಿ, ಅವರ ಮಗ ಮತ್ತು ಮೊಮ್ಮಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಈ ವೇಳೆ ಮನೆಯಲ್ಲಿ ಇಲ್ಲದ ಕಾರಣ ಅವರ ಸೊಸೆ ಈ ದುರಂತದಿಂದ ಪಾರಾಗಿದ್ದಾರೆ.

ಪಶ್ಚಿಮ ಬಂಗಾಳದ ಜಲಪಾಯಿಗುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಸಂಜೆ ಟಾಕಿಮರಿ ಗ್ರಾಮದ 30 ವರ್ಷದ ಮಿಥುನ್ ಎಂಬಾತ ಹೊಲದಿಂದ ಹಸುವನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಶೆಡ್ ಹೊರಗೆ ನಿಂತಿದ್ದ ನೀರಿನಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಹಸುವಿಗೆ ತಗುಲಿದೆ. ಈ ಹಿನ್ನಲೆಯಲ್ಲಿ ಹಸುವನ್ನು ರಕ್ಷಿಸಲು ಯತ್ನಿಸಿದ ಮಿಥುನ್ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ.

ಮಿಥುನ್‌ನ ಕಿರುಚಾಟ ಕೇಳಿದ 60 ವರ್ಷದ ತಂದೆ ಪರೇಶ್ ಮತ್ತು ತಾಯಿ ದೀಪಾಲಿ ಮಗನನ್ನು ರಕ್ಷಿಸಲು ಪ್ರಯತ್ನಿಸಿದರು. ಈ ಹಿನ್ನೆಲೆಯಲ್ಲಿ ಇಬ್ಬರೂ ಕೂಡ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ದೀಪಾಲಿ ಕೈಯಲ್ಲಿದ್ದ ಮಿಥುನ್ ಅವರ ಎರಡು ವರ್ಷದ ಮಗ ಸುಮನ್ ಕೂಡ ಸಾವನ್ನಪ್ಪಿದ್ದಾನೆ.

ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಘಟನೆ ವೇಳೆ ಮಿಥುನ್ ಪತ್ನಿ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page