ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಸಮೀಪ ಶನಿವಾರ ನಡೆದ ಭೀಕರ ಅಪಘಾತದಲ್ಲಿ ಟ್ರ್ಯಾಕ್ಟರ್ ಟ್ರೈಲರ್‌ನಿಂದ ಕೆಳಗೆ ಬಿದ್ದು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ರುಕ್ಮಿಣಿಬಾಯಿ (28), ಶಿವಾನಿ ನಾಯ್ಕ (6), ರೋಷನ್ ನಾಯ್ಕ (4) ಮತ್ತು ಪಾಂಡು ನಾಯ್ಕ (30) ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಆನೇಕಲ್ ತಾಂಡಾದ ನಿವಾಸಿಗಳಾಗಿದ್ದು, ಮೂರು ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಇವರೆಲ್ಲರೂ ಕಬ್ಬು ಕಟಾವು ಕೆಲಸಕ್ಕಾಗಿ ಬಾಗಲಕೋಟೆಗೆ ಬಂದಿದ್ದರು. ಕೆಲಸ ಮುಗಿಸಿ ತಮ್ಮ ಊರಿಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಚಲಿಸುತ್ತಿದ್ದ ಟ್ರ್ಯಾಕ್ಟರ್ ಮತ್ತು ಟ್ರೈಲರ್ ಅನ್ನು ಸಂಪರ್ಕಿಸುವ ಬಂಪರ್ (ಲಿಂಕ್) ಕಳಚಿಕೊಂಡ ಪರಿಣಾಮ, ಟ್ರೈಲರ್‌ನಲ್ಲಿದ್ದ ನಾಲ್ವರು ರಸ್ತೆಗೆ ಬಿದ್ದಿದ್ದಾರೆ. ಮೃತ ರುಕ್ಮಿಣಿಬಾಯಿ ಅವರು ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
