Tuesday, January 27, 2026

ಸತ್ಯ | ನ್ಯಾಯ |ಧರ್ಮ

ಜಮ್ಮು ಕಾಶ್ಮೀರ : ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ನಾಲ್ವರು ಯೋಧರು

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭೀಕರ ದಾಳಿಗೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಮತ್ತು ಇದೇ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ರಾತ್ರಿಯಿಂದಲೇ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯ ನಡುವೆ ಬುಫ್ಲಿಯಾಜ್ ಬಳಿಯ ಪ್ರದೇಶದಿಂದ ಸೈನಿಕರನ್ನು ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲೇ ಪೂರ್ವನಿಯೋಜಿತವಾಗಿ ಹೊಂಚು ಹಾಕಿಕೊಂಡಿದ್ದ ಭಯೋತ್ಪಾದಕರ ದಾಳಿ ಡಿಕೆಜಿ (ಡೇರಾ ಕಿ ಗಲಿ), ಥಾನಮಂಡಿ, ರಾಜೌರಿಯ ಸಾಮಾನ್ಯ ಪ್ರದೇಶದ ಮೇಲೆ ಕೇಂದ್ರೀಕೃತವಾಗಿತ್ತು.

ರಾಜೌರಿ-ಥಾನಮಂಡಿ-ಸುರನ್‌ಕೋಟೆ ರಸ್ತೆಯ ಸಾವನಿ ಪ್ರದೇಶದಲ್ಲಿ ಮಧ್ಯಾಹ್ನ 3:45ರ ಸುಮಾರಿಗೆ ಈ ದಾಳಿ ನಡೆದಿದೆ. ಟ್ರಕ್ ಮತ್ತು ಜಿಪ್ಸಿ ಸೇರಿದಂತೆ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ಪರಿಣಾಮ ನಾಲ್ವರು ಯೋಧರು ಸಾವನ್ನಪ್ಪಿದ ಬಗ್ಗೆ ಸೇನೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಶಾಖೆಯಾದ ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್) ಹೊಂಚುದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

ಪಕ್ಕದ ರಜೌರಿ ಜಿಲ್ಲೆಯ ಬಾಜಿಮಾಲ್ ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್‌ನ ನಂತರ ಹಲವಾರು ವಾರಗಳ ನಂತರ ಉದ್ದೇಶಿತ ದಾಳಿ ಸಂಭವಿಸಿದೆ. ಇದರಲ್ಲಿ ಕಳೆದ ತಿಂಗಳು ಇಬ್ಬರು ಕ್ಯಾಪ್ಟನ್‌ಗಳು ಸೇರಿದಂತೆ ಐವರು ಸೇನಾ ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page