Sunday, June 16, 2024

ಸತ್ಯ | ನ್ಯಾಯ |ಧರ್ಮ

ʼನನ್ನನ್ನು ಕ್ಷಮಿಸಿʼ – ಸುಪ್ರೀಂ ಕೋರ್ಟ್‌ ಮುಂದೆ ರಾಮದೇವ್‌

ನವದೆಹಲಿ: ಪತಂಜಲಿ ಆಯುರ್ವೇದದ ಸಹ-ಸಂಸ್ಥಾಪಕ ಮತ್ತು ಯೋಗ ವ್ಯಾಪಾರಿ ರಾಮ್‌ದೇವ್ ಮತ್ತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣನ್ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಕಂಪನಿಯು ಮೂಲಕ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದು, ಸುಪ್ರೀಂ ಕೋರ್ಟ್‌ ಮುಂದೆ ಬೇಷರತ್ ಕ್ಷಮೆಯಾಚಿಸಿದ್ದಾರೆ.

ಅಲೋಪತಿ ವಿರುದ್ಧ ಅವೈಜ್ಞಾನಿಕ ಟೀಕೆಗಳನ್ನು ಮಾಡುವ ಪತಂಜಲಿಯ ಜಾಹೀರಾತುಗಳ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಇದಕ್ಕೂ ಮೊದಲು, ಸುಪ್ರೀಂ ಕೋರ್ಟ್ ರಾಮ್‌ದೇವ್ ಮತ್ತು ಬಾಲಕೃಷ್ಣನ್ ಅವರ ಕ್ಷಮೆಯನ್ನು ಸ್ವೀಕರಿಸಲು ನಿರಾಕರಿಸಿತು , ಇದನ್ನು “ಕೇವಲ ನಾಲಗೆ ಸೇವೆ – mere lip service” ಎಂದು ಕರೆದಿತ್ತು ಮತ್ತು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಪತಂಜಲಿ ಕಂಪನಿ ತಪ್ಪುದಾರಿಗೆಳೆಯುವ ಮಾಹಿತಿ ಪ್ರಕಟಿಸಿದರೂ, ಅದರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಕೇಂದ್ರ ಸರ್ಕಾರವನ್ನು ನ್ಯಾಯಾಲಯ ಪ್ರಶ್ನಿಸಿದೆ.

“I hereby tender my unconditional apology in regard to the issue of advertisements which occurred after the statement of counsel of respondent no. 5 (Patanjali) which was recorded in the order dated November 21, 2023, which I am informed has the force of an injunction…” ಎಂದು ರಾಮ್‌ದೇವ್ ಮತ್ತು ಬಾಲಕೃಷ್ಣನ್ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣ ಇಂದು ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಾಗುತ್ತಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಬೇಕು.

ಪ್ರತ್ಯೇಕ ಪ್ರಕರಣದಲ್ಲಿ, 2022 ರಲ್ಲಿ ದೆಹಲಿ ಹೈಕೋರ್ಟ್ ಬಾಬಾ ರಾಮ್‌ದೇವ್ ಅವರಿಗೆ ಅಲೋಪತಿ ವಿರುದ್ಧ ಜನರನ್ನು “ತಪ್ಪು ದಾರಿಗೆ ಎಳೆಯಬೇಡಿ” ಮತ್ತು ಪತಂಜಲಿಯ ಉತ್ಪನ್ನ ಕರೋನಿಲ್ ಬಗ್ಗೆ ಅಧಿಕಾರಿಗಳು ಹೇಳಿದ್ದಕ್ಕಿಂತ ಹೆಚ್ಚಿನ ಯಾವುದೇ ಮಾತುಗಳನ್ನು ಆಡದಂತೆ ಎಚ್ಚರಿಕೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು