Monday, July 28, 2025

ಸತ್ಯ | ನ್ಯಾಯ |ಧರ್ಮ

ಲೋಕಸಭಾ ಚುನಾವಣೆ 2024: ಕರ್ನಾಟಕದ ಯಾವ ಕ್ಷೇತ್ರದಲ್ಲಿ ಎಂದು ಚುನಾವಣೆ? ಇಲ್ಲಿದೆ ಪೂರ್ತಿ ಲಿಸ್ಟ್

ಬೆಂಗಳೂರು: ದೇಶದಲ್ಲಿ 18ನೇ ಲೋಕಸಭಾ ಚುನಾವಣೆಗೆ ದಿನಾಂಕವನ್ನ ಮುಖ್ಯ ಚುನಾವಣಾ ಆಯೋಗ ಘೋಷಿಸಿದ್ದು, ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಲಿದ್ದು. ಜೂನ್ 4ಕ್ಕೆ ಫಲಿತಾಂಶ ಹೊರ ಬೀಳಲಿದೆ.

ಇನ್ನು ಕರ್ನಾಟಕದಲ್ಲಿ ಏಪ್ರಿಲ್ 26ರಂದು ಮೊದಲನೇ ಹಂತದ ಮತದಾನ ನಡೆಯಲಿದ್ದು ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಈ ಮಾಹಿತಿಯನ್ನು ಇಂದು ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.

ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಏಪ್ರಿಲ್ 26, ಮೇ 7ರಂದು ಮತದಾನ

ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7ರಂದು ಲೋಕಸಭೆಗೆ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು ಅಂದೇ ಫಲಿತಾಂಶ ಪ್ರಕಟವಾಗಲಿದೆ. ದಕ್ಷಿಣ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

ಏಪ್ರಿಲ್ 26ಕ್ಕೆ ಮತದಾನ ನಡೆಯಲಿರುವ ಕ್ಷೇತ್ರಗಳು

1) ಚಿತ್ರದುರ್ಗ
2) ಉಡುಪಿ-ಚಿಕ್ಕಮಗಳೂರು
3) ದಕ್ಷಿಣ ಕನ್ನಡ
4) ಹಾಸನ
5) ತುಮಕೂರು
6) ಚಿಕ್ಕಬಳ್ಳಾಪುರ
7) ಕೋಲಾರ
8) ಮಂಡ್ಯ
9) ಮೈಸೂರು-ಕೊಡಗು
10) ಚಾಮರಾಜನಗರ
11) ಬೆಂಗಳೂರು ಗ್ರಾಮಾಂತರ
12) ಬೆಂಗಳೂರು ದಕ್ಷಿಣ
13) ಬೆಂಗಳೂರು ಉತ್ತರ
14) ಬೆಂಗಳೂರು ಕೇಂದ್ರ

ಮೇ 7ರಂದು ಚುನಾವಣೆ ಎದುರಿಸಲಿರುವ ಕ್ಷೇತ್ರಗಳು

1) ಬೆಳಗಾವಿ
2) ಬಳ್ಳಾರಿ
3) ಚಿಕ್ಕೋಡಿ
4) ಹಾವೇರಿ-ಗದಗ
5) ಕಲಬುರಗಿ
6) ಬೀದರ್​
7) ಹುಬ್ಬಳಿ – ಧಾರವಾಡ
8) ಕೊಪ್ಪಳ
9) ರಾಯಚೂರು
10) ಉತ್ತರ ಕನ್ನಡ
11) ದಾವಣಗೆರೆ
12) ಶಿವಮೊಗ್ಗ
13) ಬಾಗಲಕೋಟೆ
14) ವಿಜಯಪುರ

Related Articles

ಇತ್ತೀಚಿನ ಸುದ್ದಿಗಳು

You cannot copy content of this page