Friday, June 14, 2024

ಸತ್ಯ | ನ್ಯಾಯ |ಧರ್ಮ

ಮತ್ತಷ್ಟು ಜಟಿಲಗೊಂಡ ಹಿಜಾಬ್ ತೀರ್ಪು; ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಸಾಧ್ಯತೆ

ನ್ಯಾ.ಹೇಮಂತ್ ಗುಪ್ತಾ ಮತ್ತು ನ್ಯಾ.ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ದರಿಸುವ ಬಗೆಗಿನ ಮನವಿ ಪ್ರಕರಣದಲ್ಲಿ ಎರಡು ಪ್ರತ್ಯೇಕ ಮತ್ತು ವ್ಯತಿರಿಕ್ತ ತೀರ್ಪನ್ನು ಕೊಟ್ಟಿದ್ದಾರೆ. ಈ ಕಾರಣ ಹಿಜಾಬ್ ವಿವಾದದ ಕುರಿತಾದ ತೀರ್ಪು ಮತ್ತಷ್ಟು ಜಟಿಲಗೊಂಡಿದೆ.

ಇನ್ನೇನು ಅ.16 ಕ್ಕೆ ನಿವೃತ್ತಿ ಆಗಲಿರುವ ನ್ಯಾ.ಹೇಮಂತ್ ಗುಪ್ತಾ ಮತ್ತು ಸುದಾಂಶು ಧುಲಿಯಾ ಅವರ ಪ್ರತ್ಯೇಕ ತೀರ್ಪುಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನ ಪರ ಮತ್ತು ವಿರುದ್ಧವಾದ ಎರಡೂ ರೀತಿಯ ತೀರ್ಪು ಪ್ರಕಟವಾಗಿದೆ. ಅದರಲ್ಲಿ ನ್ಯಾ.ಹೇಮಂತ್ ಗುಪ್ತಾ ಹಿಜಾಬ್ ವಿರುದ್ಧದ ತೀರ್ಪು ನೀಡಿದರೆ, ನ್ಯಾ.ಸುದಾಂಶು ಧುಲಿಯಾ ಹಿಜಾಬ್ ಪರವಾಗಿ ತೀರ್ಪು ನೀಡಿದ್ದಾರೆ. ಆ ಮೂಲಕ ಸುದಾಂಶು ಧುಲಿಯಾ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬಹುದು ಎಂಬುದಾಗಿ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ತೀರ್ಪು ನೀಡಿದ್ದಾರೆ

ಆ ಮೂಲಕ ಹಿಜಾಬ್ ತೀರ್ಪು ಈಗ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಆಗಿದೆ. ಇಲ್ಲಿಯವರೆಗೆ ನಡೆದ ವಾದ ಪ್ರತಿವಾದದಲ್ಲಿ ಅರ್ಜಿದಾರರ ಪರವಾಗಿ ಸಂಜಯ್ ಹೆಗ್ಡೆ, ರಾಜೀವ್ ಧವನ್, ದುಶ್ಯಂತ್ ದವೆ, ಯೂಸುಫ್ ಮುಚ್ಚಲ, ಎಂ ಆರ್ ಶಂಶದ್, ಸಲ್ಮಾನ್ ಖುರ್ಷೀದ್, ನಿಜಾಂ ಪಾಷಾ, ಪ್ರಶಾಂತ್ ಭೂಷಣ್, ದೇವದತ್ ಕಾಮತ್, ಶೋಯೆಬ್ ಆಲಂ ಹಾಗೂ ವಕೀಲೆ ವಿ ಮೋಹನಾ ವಾದ ಮಂಡಿಸಿದ್ದರು. ಕರ್ನಾಟಕ ಸರ್ಕಾರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಹಾಗೂ ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು.

ಸಧ್ಯ ಪ್ರಕರಣ ಸಿಜೆಐ ಗೆ ವರ್ಗಾವಣೆ ಆದ ಬೆನ್ನಲ್ಲೇ ಸಿಜೆಐ ಅವರು ಹಿಜಾಬ್ ವಿಚಾರಣೆ ಸಂಬಂಧ ಮೂವರು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠ ರಚಿಸಬೇಕು ಎಂದು ತೀರ್ಪಿನಲ್ಲಿ ಕೋರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು