Saturday, June 22, 2024

ಸತ್ಯ | ನ್ಯಾಯ |ಧರ್ಮ

ಗ್ಯಾಲಂಟ್ ಇನ್ ಡಿಸ್ಟ್ರೆಸ್

ತಿಂದ ಬಾಳೆಹಣ್ಣಿನ ಸಿಪ್ಪೆಯಿಂದ ಹಿಡಿದು ಚಿಪ್ಸ್ ಪ್ಯಾಕೆಟ್ ಗಳು, cigarette ತುಂಡುಗಳು ಎಲ್ಲವೂ ಅಲ್ಲೇ ಚೆಲ್ಲಾಪಿಲ್ಲಿ. ಕ್ಯಾಟಿ ಮೊದ ಮೊದಲು ಸ್ವಲ್ಪ ದಿನ ಸರಿ ಹೋಗ್ತಾನೆ ಅಂತ ಅಂದುಕೊಂಡಿದ್ದಳು. ಯಾಕೋ ತಿಂಗಳಾದರೂ ಅವನ ವರ್ತನೆ ಬದಲಾಗಲಿಲ್ಲ. ಈಗೀಗ ಅವಳ ಮೇಲೆ ಕೈ ಕೂಡ ಮಾಡೋಕೆ ಶುರು ಮಾಡಿದ್ದ – ಟೆಕ್ಕಿ ಡೈರೀಸ್ ನಲ್ಲಿ ಕಾವ್ಯಶ್ರೀ.

I did not want to hear the pain of my male partner because hearing it required that I surrender my investment in the patriarchal ideal of the male as protector of the wounded. If he was wounded, then how could he protect me? 

~Bell Hooks

ಮೀಟಿಂಗ್ ರೂಮಿನಿಂದ ಹೊರಗೆ ಬಂದಾಗ ಕ್ಯಾಥಲಿನ್ ನಗುತ್ತಾ ನಿಂತಿದ್ದಳು. ಕೈಯ್ಯಲ್ಲಿ ದೊಡ್ಡ ಸ್ವೀಟ್ ಬಾಕ್ಸ್ ಹಿಡಿದು.

ಧ್ವನಿ ಓಡಿ ಹೋಗಿ ಕ್ಯಾಥಲಿನ್ ಳನ್ನು ಅಪ್ಪಿಕೊಂಡು 

“ಹೇಯ್ ಕ್ಯಾಥಲಿನ್ ಎಷ್ಟ್ ದಿನ ಆಯ್ತು ಸಿಕ್ಕಿ”

ಕ್ಯಾಥಲಿನ್ – ” ಇನ್ಮೇಲೆ ದಿನ ಸಿಗ್ತಿನಿ.’

ಧ್ವನಿ – “ಅಂದ್ರೆ ನೀನ್ ಮತ್ತೆ ಕೆಲ್ಸಕ್ಕೆ ಬರ್ತಾ ಇದ್ಯಾ!! ನಿನ್ gallant ಸುಮ್ನೆ ಒಪ್ಕೊಂಡ್ನ? ಇಲ್ಲ ಅವ್ನಿಗೆ ಟಾಟಾ ಮಾಡ್ ಬಂದ್ಯಾ?”

ಆಕಾಂಕ್ಷ – “ನಿಂಗೂ ಈ ಕೋತಿ ಹಿತಾ ಗಾಳಿ ಬೀಸಿದ್ಯ ಹೇಗೆ? ಬರೀ ನೆಗಟಿವೇ ಹೇಳ್ತೀಯ. ವೆಲ್ಕಂ ಬ್ಯಾಕ್ ಟು ದಿ ಟೀಮ್ ಕ್ಯಾಟಿ.” 

ಹೀಗೆ ಹೇಳಿ ಕ್ಯಾಟಿ (ಕ್ಯಾಥಲಿನ್) ಗೆ ಒಂದು hug ಕೊಟ್ಟು ನಗುತ್ತಾ ಮುಂದೆ ಹೋದಳು.

ನಾನು – “hello can some one please explain here 

ಇವಳು ಡೈವೋರ್ಸ್ ಅಂತ ಎಕ್ಸ್ಟ್ರೀಮ್ ಲೆವೆಲ್ ಗೆ ಹೋದಾಗ ಬಾಯಿ ನೋವು ಬರೋ ಅಷ್ಟು ಮಾತ್ ಆಡಿ ಇಬ್ರಿಗೂ ಕೌನ್ಸೆಲಿಂಗ್ ಕೊಟ್ಟಿದ್ದು ನಾನು. And by the way ಮಿಸ್ ಆಕಾಂಕ್ಷ you can’t call me ಕೋತಿ “

ಹೀಗೆ ಮೂತಿ ತಿರುಗಿಸುತ್ತಾ ಇದ್ದಾಗ ಕ್ಯಾಟಿ “ಎರಡು ತಿಂಗಳಲ್ಲ ಎರಡು ಸೆಂಚುರಿ ಬಿಟ್ಟು ಬಂದ್ರು ನೀನ್ ಬದಲಾಗಲ್ಲ ಅದೆಷ್ಟು ಜಗಳ ಕಾಯ್ತಿಯೆ ಮಾರಾಯ್ತಿ” ಅಂತ ಹೇಳ್ತಾ ಕಾಜು ಕಟ್ಲಿ ಯನ್ನ ಬಾಯಿಗೆ ತುರುಕಿದ್ಳು…

——-

ಕ್ಯಾಟಿ (ಕ್ಯಾಥಲಿನ್) ನಮ್ ಪ್ರೊಜೆಕ್ಟ್ ನ ಸಾಫ್ಟ್ವೇರ್ ಡೆವೆಲಪರ್.

ಬಹಳ dedicated worker. ಈ ದಿನಕ್ಕೆ delivery ಮಾಡ್ತಿನಿ ಅಂತ ಅಂದ್ರೆ ಅದಕ್ಕಿಂತ ಎರಡು ದಿನ ಮುಂಚೆ delivery ಮಾಡಿರ್ತಾಳೆ. ಅಂತ ಹುಡುಗಿ ಎರಡು ತಿಂಗಳ ಹಿಂದೆ emotional break down ಗೆ ಒಳಗಾಗಿ ಕುಸಿದು ಬಿದ್ದಿದ್ದಳು.

ಎಷ್ಟೇ ಅಪ್ತರಾಗಿದ್ದರೂ ತನ್ನ ಖಾಸಗಿ ವಿಷಯವನ್ನು ಹಂಚಿಕೊಳ್ಳದ ರಿಸರ್ವ್ಡ್ ಹುಡುಗಿ ಕ್ಯಾಟಿ.

ಅವ್ಳ ಬಾಯಿಂದ ವಿಷಯ ತಿಳಿದುಕೊಳ್ಳಲು ಸಾಹಸ ಪಡಬೇಕಾಗಿತ್ತು. 

ಮೊದಲಿಗೆ ಕ್ಯಾಟಿ onsite interview ಗಳನ್ನ ಕೊಡ್ತಾ ಇದ್ದ ಕಾರಣ ಆ frustration ಇರ್ಬೇಕು ಅಂತ ಅಂದುಕೊಂಡಿದ್ದೆವು. ಅವ್ಳ ಗಂಡ ಕ್ರಿಸ್ಟೋಫರ್ ಸಿಂಗಪುರದಲ್ಲಿ ಕೆಲಸಕ್ಕೆ ಸೇರಿ ಆಗಲೇ ವರ್ಷವಾಗುತ್ತ ಬಂತು.

ಸಹಜವಾಗಿ seperation anxiety ಇರಬಹುದು ಅನ್ನೋ ಯೋಚನೆ ಮೇಲೆ ನಾನು ಆಕಾಂಕ್ಷ ಮಾತಿಗೆ ಶುರು ಮಾಡಿದೆವು.

ಆಗಲೇ ಅವಳ ಬದುಕಿನ ಒಂದೊಂದೇ ಪುಟಗಳು ಮತ್ತು ಕಾರ್ಪೊರೇಟ್ ಕ್ಯಾಪಿಟಲಿಸಂ ನ ಬಳಸಿ ಬಿಸಾಡು ನಡೆಯಿಂದ ಕುಟುಂಬಗಳ ಮೇಲೆ ಆಗ್ತಾ ಇರೋ ಪರಿಣಾಮಗಳು ತೆರೆದು ಕೊಳ್ತ ಹೋದ್ವು.

ಕ್ರಿಸ್ಟೋಫರ್ ಗೆ ಪ್ರತಿಷ್ಠಿತ ಸೋಶಿಯಲ್ ಮೀಡಿಯಾ ದ ದೈತ್ಯ ಕಂಪನಿ ಒಂದರಲ್ಲಿ ಕೆಲಸ ಸಿಕ್ಕು ಅವ್ನು ಸಿಂಗಾಪುರಕ್ಕೆ ಹೋಗಿದ್ದು ನಿಜ ಅಷ್ಟೇ. ಆದ್ರೆ ಅಷ್ಟೇ ವೇಗವಾಗಿ ಅವ್ನು ವಾಪಸ್ ಬಂದದ್ದು ಇನ್ನೂ ನಿಜ. ಕಾರಣ lay off.

Lay off ಅನ್ನೋ ಪದ ಕಾರ್ಪೊರೇಟ್ ನಲ್ಲಿ ದುಸ್ವಪ್ನ. ಇದೊಂದು ರೀತಿ ಸುನಾಮಿಯಂತೆ. Lay off ಮಾಡಲು ಒಂದು ಕಂಪನಿ ನಿಂತರೆ ಅದರ ಹಿಂದೆ ಒಂದರ ಮೇಲೆ ಒಂದರಂತೆ ಹಲವು ಕಂಪನಿಗಳು ಅದೇ ಹಾದಿಯನ್ನು ಹಿಡೀತಾರೆ.

ಇದಕ್ಕೆ ಕಾರಣಗಳು ಹಲವು.

Cost reduction, over staffing, staff redundancy ಮತ್ತೂ ಹಲವು.

ನಾವು campus recruit ಆಗಿ job posting ಆಗಿದ್ದ ಸಮಯ. Soft skills ಟ್ರೈನಿಂಗ್ ನಲ್ಲಿದ್ದಾಗ ನಮ್ಮ over excitement ಅನ್ನು ನೋಡಿದ್ದ trainer ಹೀಗೆ ಹೇಳಿದ್ದ “ನೀವು ಹೇಗೆ ಈ ಕಾರ್ಪೊರೇಟ್ privilege ಗೆ ಒಗ್ಗಿ ಹೋಗ್ತಿರೋ ಅದೇ ತರ lay off ಗಳಿಗೂ ತಯಾರ್ ಆಗಿರಬೇಕು ಅಂತ.” ಈ ನಾರ್ತ್ ಅಮೆರಿಕನ್ ಕಂಪನಿಗಳು Lay off ಗಳನ್ನ ಒಂದು dignified ರೀತಿಯಲ್ಲಿ ಮಾಡೋದು ಕೂಡ ಇಲ್ಲ. ಬರೀ ಒಂದು ಮೇಲ್ ಕಳಿಸ್ತಾರೆ ಅಷ್ಟೇ.

ಈ ವಿಚಾರದಲ್ಲಿ ಕೆಲ ಯುರೋಪಿಯನ್ ಕಂಪನಿಗಳು ಎಷ್ಟೋ ಮೇಲು. ಕಾರಣ ಈ ಕೆಲ ನಾನ್ ಇಂಗ್ಲಿಷ್ ದೇಶಗಳಲ್ಲಿ, Scandinavian ದೇಶಗಳಲ್ಲಿ labour law ತುಂಬಾ ಸ್ಟ್ರಾಂಗ್ ಆಗಿರುವ ಕಾರಣ ಹಾಗೆಲ್ಲ ಕಿತ್ತು ಬಿಸಾಡೋ ಹಾಗಿಲ್ಲ. ಹಲವು ಯುರೋಪಿಯನ್ ಮೂಲದ ಕಂಪನಿಗಳಲ್ಲಿ ಅಂದ್ರೆ ಎರಡನೇ ಮಹಾಯುದ್ಧಕ್ಕೂ ಮೊದಲು ಶುರು ಆದ ಕಂಪನಿಗಳಲ್ಲಿ ತಮ್ಮ employee ಗಳಿಗೆ ಗೋಲ್ಡನ್ ಹ್ಯಾಂಡ್ ಶೇಕ್ ಕೊಟ್ಟು ಅಥವಾ ಬೇರೊಂದು ಪ್ರೊಜೆಕ್ಟ್ ಅನ್ನ ಹುಡುಕಿ ಕೊಳ್ಳುವ ಅವಕಾಶ ಕೊಟ್ಟೋ respectfully ಕಳಿಸಿಕೊಡ್ತಾರೆ.

ಮೊದಲಿಗೆ lay off ಅನ್ನೋದೇ shattering. ಎಷ್ಟೋ ಜನ ಡೆಡಿಕೇಟೆಡ್ ಆಗಿ ಆ ಕಂಪನಿ ಗೆ ಕೆಲ್ಸ ಮಾಡಿರ್ತಾರೆ. ಹಾಗಿರುವಾಗ ಅವ್ರನ್ನ ಏಕಾ ಏಕಿ ಕೆಲಸದಿಂದ ತೆಗೆದು ಹಾಕಿದಾಗ ಆಕಾಶನೆ ತಲೆ ಮೇಲೆ ಬಿದ್ದಂತೆ ಆಗದೆ ಇರಲ್ಲ. ಕೊನೆಪಕ್ಷ ಕಂಪನಿ ಗಳು ತಮ್ಮ employee ಗಳಿಗೆ ಕೌನ್ಸೆಲಿಂಗ್ ಆದ್ರೂ ಕೊಟ್ಟು ಕಳಿಸೋದು ಉತ್ತಮ.

ಕ್ರಿಸ್ಟೋಫರ್ ನ ವಿಚಾರದಲ್ಲಿ ಆದದ್ದು ಇದೆ. ಇನ್ನೇನು ಪ್ರೊಬೇಷನರಿ ಪೀರಿಯಡ್ ಮುಗಿಯೋಕೆ ಇಪ್ಪತ್ತು ದಿನ ಇದ್ದಾಗ ಅವನ ಕೆಲಸ ಹೋಗುತ್ತೆ. ಅಲ್ಲಿಂದ ಬಂದ ಮೇಲೆ ಅವನ ವರ್ತನೆ ತುಂಬಾ ಬದಲಾಗುತ್ತೆ.

ಸುಮ್ ಸುಮ್ನೆ ಕ್ಯಾಟಿ ಯ ಮೇಲೆ ರೇಗಾಡೋದು. ಅವಳ ಪ್ರತಿ ಮಾತಿನಲ್ಲೂ ಒಂದೊಂದು ಕೊಂಕು ತೆಗೆಯೋದು. ಅವಳ ಮನೆಯವರು ಬಂದಿದ್ದಾಗ ಬೈದು ಕಳಿಸಿದ್ದು.

ಮೂರು ಹೊತ್ತು Game, OTT, junk food, alcohol, cigerette ಹೀಗೆ ಸೋಫಾ ಬಿಟ್ಟು ಮೇಲೇಳ್ತಾ ಇರ್ಲಿಲ್ಲ. ತಿಂದ ಬಾಳೆಹಣ್ಣಿನ ಸಿಪ್ಪೆಯಿಂದ ಹಿಡಿದು ಚಿಪ್ಸ್ ಪ್ಯಾಕೆಟ್ ಗಳು, cigarette ತುಂಡುಗಳು ಎಲ್ಲವೂ ಅಲ್ಲೇ ಚೆಲ್ಲಾಪಿಲ್ಲಿ.

ಕ್ಯಾಟಿ ಮೊದ ಮೊದಲು ಸ್ವಲ್ಪ ದಿನ ಸರಿ ಹೋಗ್ತಾನೆ ಅಂತ ಅಂದುಕೊಂಡಿದ್ದಳು. ಯಾಕೋ ತಿಂಗಳಾದರೂ ಅವನ ವರ್ತನೆ ಬದಲಾಗಲಿಲ್ಲ. ಈಗೀಗ ಅವಳ ಮೇಲೆ ಕೈ ಕೂಡ ಮಾಡೋಕೆ ಶುರು ಮಾಡಿದ್ದ. ಕಡೆಗೆ ಕೌನ್ಸೆಲಿಂಗ್ ಗೆ ಕರೆದಾಗ ಗಲಾಟೆ ಮಾಡಿ ರಂಪ ಮಾಡಿ bike ತೆಗೆದುಕೊಂಡು ಆಚೆ ಹೋದೋನು ಬೆಳಗ್ಗೆ ಆದ್ರೂ ಬಂದಿರಲಿಲ್ಲ.

ಅಲ್ಲ 15,000 ಜನರಿಗೆ ಆದದ್ದೇ ಇವನಿಗೂ ಆಗಿರೋದು ಅಲ್ವಾ? ಇವನ್ಯಾಕೆ ಹೀಗೆ ಆಡ್ತಾ ಇದಾನೆ…ಈ ಆರು ತಿಂಗಳಲ್ಲಿ upskill ಮಾಡ್ಕೋ ಬಹುದಿತ್ತು ಅಲ್ವಾ…

ಹೀಗೆ ಧ್ವನಿಯ ಏನೇನೋ ಪ್ರಶ್ನೆಗಳು.

ಅಂದು ನಾನು, ಆಕಾಂಕ್ಷ, ನೇಹಾ ಮತ್ತು ಧ್ವನಿ ನಾಲ್ಕು ಜನ ಕ್ಯಾಟಿಯ ಮನೆಗೆ ಹೋದೆವು. ಕ್ರಿಸ್ಟೋಫರ್ ಬಂದಿದ್ದ. ಮನೆ ಅಕ್ಷರಶಃ ತಿಪ್ಪೆಯಾಗಿತ್ತು.  ನಮ್ಮ ಮುಖ ನೋಡಿದವನೇ ದುರುಗುಟ್ಟುತ್ತ ಒಳ ನಡೆದ.

ಏನು ಮಾಡೋಕೆ ಆಗಲ್ಲ. ನಮ್ patriarchal society ಇರೋದೇ ಹಾಗೆ. When a male is depressed he’ll start to oppress.

Depression and oppression ಎರಡೂ ವಿರುದ್ಧ ಪದಗಳು ಅನ್ನೋದು masculinity ಅಂತ ಬಂದಾಗ ಅಲ್ಲಿ ಸುಳ್ಳಾಗುತ್ತದೆ.

ಅಮೆರಿಕಾದ ಖ್ಯಾತ ಸೈಕಾಲಜಿಸ್ಟ್ ಟರ್ರನ್ಸ್ ರಿಯಲ್ ಈ ಟಾಕ್ಸಿಕ್ ಮಸ್ಕ್ಯುಲಿನಿಟಿ ಯ ಬಗ್ಗೆ ಹೀಗೆ ಹೇಳ್ತಾನೆ 

 “Men who do not turn to face their own pain are too often prone to inflict it on others.” 

ಇಲ್ಲಿ ತಪ್ಪು ಅವರದ್ದಲ್ಲ ಬಿಡಿ. ಉದ್ಯೋಗಂ ಪುರುಷ ಲಕ್ಷಣಂ ಅಂತ   dictate ಮಾಡಿ ಬಿಟ್ಟಿದಾರಲ.

ನಮ್ ಹೆಣ್ಣು ಮಕ್ಕಳು ಏನು ಕಡಿಮೆ ಇಲ್ಲ. ಗಂಡಸಿನ ಐಡೆಂಟಿಟಿ ಯನ್ನ ಆತ ಮಾಡುವ ಉದ್ಯೋಗಕ್ಕೆ ಸೀಮಿತ ಮಾಡಿದ್ದಾರೆ.

ಹಾಗಾಗಿ ಈ ರೀತಿಯ lay off ಗಳನ್ನ ತುಂಬಾ ಜನ ಗಂಡಸರು sportive ಆಗಿ ತಗೊಳೊಲ್ಲ. 

ಟರನ್ಸ್ ರಿಯಲ್ ನ ಇನ್ನೊಂದು ಮಾತು ನೆನಪಿಗೆ ಬರುತ್ತೆ..

“Healthy self-esteem is the capacity—rarely taught to either sex in our culture—to hold oneself in warm regard even when colliding with one’s human shortcomings.  Our capacity to stay rooted in a compassionate understanding of one another’s flaws keeps us humane.  When we lose touch with our own frailties we become judgmental and dangerous to others.”

ನಮ್ಮಲ್ಲಿ self esteem ಅನ್ನೋದು achivement esteem ಆಗಿರೋದು ವಿಪರ್ಯಾಸ.

ಹಂಗೂ ಹಿಂಗೂ ಕ್ರಿಸ್ಟೋಫರ್ ಮಾತಿಗೆ ಕುಳಿತ.

ಅಷ್ಟೊತ್ತಿಗಾಗಲೇ ಅವರ ರೆಸ್ಟ್ ರೂಮ್ ಇಂದ ಬಂದಿದ್ದ ಧ್ವನಿ ಕುದಿತಾ ಇದ್ಳು. “Toilet Flush ಮಾಡೋಕು ಎಂತ ಡಿಪ್ರೆಶನ್ ಹಿತಾ” ಅಂತ ಹಲ್ಲು ಮಸೆದಿದ್ದಳು.

ಒಂದೇ ಉಸಿರಿಗೆ ಕ್ರಿಸ್ಟೋಫರ್ ನಿಗೆ left right ತಗೊಂಡ್ಲು.

“ಅಲ್ಲ ಸಿಂಗಪೂರ್ ಇಂದ ವಾಪಸ್ ಬಂದು ಆರ್ ತಿಂಗಳು ಆಗ್ತಾ ಬಂತು ಎಲ್ಲೋ ಒಂದ್ ತಿಂಗಳು ಬ್ರೇಕ್ ತಗೊಂಡು ಆಮೇಲೆ upskill ಮಾಡೋದು ಬಿಟ್ಟು ಇಲ್ಲಿ ಹೆಂಡ್ತಿ ಮೇಲೆ ನಿನ್ ದಬ್ಬಾಳಿಕೆ ಮಾಡ್ತಾ ಇದ್ಯಾ?

ನಾನ್ ನಿನ್ ಜಾಗದಲ್ಲಿ ಇದ್ದಿದ್ದರೆ ಇಲ್ಲ ಸಿಂಗಪುರದಲ್ಲೆ ಸ್ಟಾರ್ಟ್ ಅಪ್ ನಲ್ಲಾದ್ರು ಕೆಲ್ಸಾ ಹುಡುಕ್ಕೋತಾ ಇದ್ದೆ. ಇಲ್ಲ ಅಂದಿದ್ರೆ ಬೆಂಗಳೂರಿಗೆ ವಾಪಸ್ ಬರೋ ಹೊತ್ತಿಗೆ ಒಂದು ಹತ್ತು ಕಂಪನಿಗಳಲ್ಲಿ ಆದ್ರೂ ಇಂಟರ್ವ್ಯೂ ಕೊಟ್ಟಿರ್ತ ಇದ್ದೆ. ಆಯ್ತು depression is real ಒಪ್ಕೊಳೋಣ. Counselling ತಗೊಬೌದಿತ್ತು. ಅದ್ನ ಬಿಟ್ಟು ಕೌನ್ಸೆಲಿಂಗ್ ಗೆ ಕರ್ದಾಗ ಅವ್ಳ ಮೇಲೆ ಕೈ ಮಾಡಿದ್ಯಲ. ಅಸಲಿಗೆ ಕ್ಯಾಟಿ ಏನು ನಿನ್ನ ಕೆಲ್ಸಕ್ಕೆ ಹೋಗು ಅಂತ compel ಮಾಡಿದಾಳ? ಎಲ್ಲಾದ್ರೂ ಟ್ರಿಪ್ ಹೋಗ್ ಬಿಟ್ಟು ಬಾ break ತಗೋ ಅಂತ ಹೇಳಿಲ್ವ? ಏನ್ ಬಂದಿರೋದು ನಿಂಗೆ?” 

ನೇಹಾ ಧ್ವನಿಯನ್ನು ಸಮಾಧಾನ ಮಾಡಿ ಹೊರಗೆ ಕರ್ಕೊಂಡ್ ಹೋಗಿದ್ಳು.

ಧ್ವನಿಯ ಆವೇಶದಲ್ಲಿ ಅಂತ ತಪ್ಪೇನು ಕಾಣಲಿಲ್ಲ. 

ಕ್ರಿಸ್ಟೋಫರ್ ನ ಕಣ್ಣಲ್ಲಿ ಸಣ್ಣಗೆ ನೀರು ಜಿನುಗಿದ್ದು ಯಾರ ಕಣ್ಣಿಗೂ ಕಾಣದೆ ಇರ್ಲಿಲ್ಲ.

ಆಕಾಂಕ್ಷ – “ಏನಿದು ಕ್ರಿಸ್ಟೋಫರ್ ನೀವೇ ಇಷ್ಟು immature ಆಗಿ ನಡ್ಕೊಂಡ್ರೆ ಹೇಗೆ?”

ಕ್ರಿಸ್ಟೋಫರ್ – “–“

ನೇಹಾ – “ಅರೆ ಯಾರ್ ನಿನ್ ಕೆಲ್ಸ ಹೋದ್ರೆ ಪಾಪ ಕ್ಯಾಟಿ ಮೇಲೆ ಯಾಕೆ frustration ತೋರಿಸ್ತಿಯ? ಅವ್ಳ ಅಪ್ಪ ಅಮ್ಮ ಬಂದಿದ್ರೆ ಹಾಗ ಅವಮಾನ ಮಾಡಿ ಕಳಿಸೋದು?”

ಕ್ರಿಸ್ಟೋಫರ್ – “–“

ಈ ಕೆಲಸ ಕಳ್ಕೊಂಡ ಗಂಡಿಸಿನ ಒಣ ಜಂಭ ಹೇಳಬೇಕಿಲ್ಲ. ಅವನ ಹೆಂಡತಿ ಯಾವುದೇ shirt ತಂದು ಕೊಟ್ರು ಹಾಕೊಳಲ್ಲ. ಕಡೆಗೆ ಹರಿದ shirt ನಲ್ಲೇ ಊರು ತಿರುಗಾಡ್ತಾನೇ.

ಅಪ್ಪಿ ತಪ್ಪಿ ಆಕೆ ಆತ ಅಟೆಂಡ್  ಮಾಡಿದ್ದ ಇಂಟರ್ವ್ಯೂ ಬಗ್ಗೆ ವಿಚಾರಿಸಿದಳು ಅಥವಾ ಇಂಟರ್ವ್ಯೂಗೆ suggestion ಏನಾದ್ರೂ ಕೊಟ್ಳು ಅಂತ ಇಟ್ಕೊಳ್ಳಿ… 

ಗಂಡಿನ ಆತ್ಮಾಭಿಮಾನ ಅದೆಲ್ಲಿಂದ ಬಂದು ಬಿಡುತ್ತೋ ಗೊತ್ತಿಲ್ಲ.

ನಾನು – “lay off is something unavoidable ಅಲ್ವಾ? ಅದನ್ನ sportive ಆಗಿ ತಗೋ ಬಹುದಿತ್ತು.

ನಿಮ್ಮೊಟ್ಟಿಗೆ lay off ಆಗಿದ್ದ ಹುಡುಗ ಒಬ್ಬ Singapore dairies ಅಂತ ಬ್ಲಾಗ್ ತೆಗೆದಿದ್ದಾನೆ ಗೊತ್ತಾ?

ಅದೇ ultimate ಅಲ್ಲ ಅಲ್ವಾ ಕ್ರಿಸ್ಟೋಫರ್? ಇಲ್ಕೇಳಿ I do understand it’s a shattering. I know ಜನ ಎಷ್ಟು ಮಾತಾಡ್ತಾರೆ ಅಂತ. ಆದ್ರೆ ಮಾತಾಡೋರು ಯಾರು ಬಂದು ಈಗ ನಿಮ್ಮನ್ನ ನೋಡ್ಕೊಳಲ್ಲ. Grabbing a job in that company itself was a big achievement. I don’t say, it’s ok. I only say this too shall pass on. Post lay off depression is real. ಆದ್ರೆ please ಆ depression ಅನ್ನ oppression ಆಗಿ ತಿರುಗಿಸಬೇಡಿ. ಹೊರಗಿನ peer pressuring ಗೆ ಕಿವಿ ಕೊಡಬೇಡಿ. 

ಹಾಗೆ ಎಂಜಿನಿಯರಿಂಗ್ ಮಾಡಿದ ಮಾತ್ರಕ್ಕೆ ಐಟಿ ಯಲ್ಲೇ continue ಮಾಡ್ಬೇಕು ಅಂತೇನಿಲ್ಲ ಅಲ್ವಾ? Atleast ಕ್ಯಾಟಿ ನ ನೋಡಿ… She love you as a human being, not as an Engineer. ಅವಳಿಗೋಸ್ಕರ ಆದ್ರೂ ನೀವು ಸ್ವಲ್ಪ ಸಮಯ ತಗೊಳಿ. ಹೀಲ್ ಆಗಿ”

ಅವನ ಕಣ್ಣಲ್ಲಿ ನೀರು ನಿಲ್ಲಲಿಲ್ಲ. ಕ್ಯಾಟಿ ಹೋಗಿ ಅವ್ನ ಕೈ ಪ್ರೀತಿಯಿಂದ ಅಮುಕಿದ್ದಳು.

ಈ ವಿಚಾರದಲ್ಲಿ ನಾನು ನಾರ್ತ್ ಈಸ್ಟ್ ಮಂದಿಯನ್ನ appreciate ಮಾಡ್ತೀನಿ. ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡ ಎಷ್ಟೋ ಮಂದಿ social media marketing ಮಾಡ್ತಾನೋ, trading ಮಾಡ್ತಾನೋ ಬದುಕನ್ನ ಮುಂದುವರಿಸಿದ್ದರು.

ಅವರ ಜೀವನ ಪ್ರೀತಿ ಎಲ್ಲರಿಗೂ ಮಾದರಿ. Home service ಮಾಡಲು ಬಂದಿದ್ದ ಪಾರ್ಲರ್ ನ ಹುಡುಗಿ ಲಜ್ಜೋ ತಾನು MBA ಪದವೀಧರೆ ಆಗಿದ್ದುಕೊಂಡು, ತಾನು ಕೆಲಸ ಮಾಡ್ತಾ ಇದ್ದ ಸ್ಟಾರ್ಟ್ ಅಪ್ shut down ಆಗಿದ್ದ ಕಾರಣ beauty parlour ತೆರೆದಿದ್ದ ಕತೆ ಕೇಳಿ ಖುಷಿ ಪಟ್ಟಿದ್ದೆ. 

ಯಾರೋ ಯಾಕೆ ನಮ್ ಧ್ವನಿ ನೆ ಇಲ್ವಾ!! Domino’s ನಲ್ಲಿ ಕೆಲಸ ಮಾಡಿ ಕಾರ್ಪೊರೇಟ್ ಗೆ ಬಂದವಳು.

ಕಡೆಗೆ ಕ್ರಿಸ್ಟೋಫರ್ ಸ್ವಲ್ಪ ದಿನ ಕ್ಯಾಟಿ ಯ ಜೊತೆ ಟ್ರಿಪ್ ಗೆ ಹೋಗಿ ಬಂದು ಮತ್ತೆ upskill ಮಾಡಿಕೊಳ್ಳಲು ಒಪ್ಪಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಕೌನ್ಸೆಲಿಂಗ್ ಗೆ ಒಪ್ಪಿದ್ದು ಖುಷಿ ತರಿಸಿತ್ತು. ಕ್ಯಾಟಿ ಕೆಲ ದಿನಗಳ ಕಾಲ vacation ತಗೊಂಡು ಕ್ರಿಸ್ಟೋಫರ್ ನ ಹೀಲಿಂಗ್ ಪ್ರೋಸೆಸ್ ಗೆ ಜೊತೆಯಾಗಲು ಒಪ್ಪಿದ್ದಳು.

ಈ Patriarchal societyಯ ಸಿದ್ಧ ಮಾದರಿಗಳು ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು ಅಪಾಯಕಾರಿ. ಅವರು ತುಂಬಾ emotional ಆದಾಗ, express ಮಾಡೋಕೆ ಆಗಲ್ಲ. Free ಆಗಿ ಒಂದೆರೆಡು ಹನಿ ಕಣ್ಣೀರು ಹಾಕಿ ಹಗುರಾಗೋಕೆ ಆಗಲ್ಲ

ಖ್ಯಾತ ಮನಃಶಾಸ್ತ್ರಜ್ಞೆ ಕ್ಯಾರೋಲ್ ಗ್ಯಾಲಿಗನ್ ಹೀಗೆ ಹೇಳ್ತಾಳೆ

“Our ability to communicate our own feelings, and to pick up the feelings of others and thus to heal fractures in connection, threatens the structures of hierarchy. Feelings of empathy and tender compassion for another’s suffering or humanity make it difficult to maintain or justify inequality.”

ಇದರ ಬಗ್ಗೆ ಬೆಲ್ ಹುಕ್ಸ್ ತಮ್ಮ will to change masculinity ಯಲ್ಲಿ ಹೀಗೆ ಬರೆದಿದ್ದಾರೆ

“Learning to wear a mask (that word already embedded in the term “masculinity”) is the first lesson in patriarchal masculinity that a boy learns. He learns that his core feelings cannot be expressed if they do not conform to the acceptable behaviors sexism defines as male. Asked to give up the true self in order to realize the patriarchal ideal, boys learn self-betrayal early and are rewarded for these acts of soul murder.”

ಒಬ್ಬ engineering topper ಹೆಣ್ಣು ಮಗಳು ಮದುವೆ ಆಗಿ ಮಕ್ಕಳಾದ ನಂತರ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡಲೂ ಯೋಚನೆ ಮಾಡಲ್ಲ.

ಅದೇ ಒಬ್ಬ ಗಂಡಸು ತಾನು ಮಾಡುವ ಕೆಲಸದಿಂದ ಒಂದು ಹಂತ ಕೆಳಗೆ ಇಳಿದು ಬೇರೆ ಕೆಲಸ ಮಾಡಲೂ ಹಿಂಜರಿತಾನೇ.

ಎಲ್ಲರೂ ಹೀಗೆ ಅಲ್ಲ.

ಈಗಿನ gen z ಗಳು ಈ lay off ಗಳನ್ನ light ಆಗಿ ತಗೊಂಡು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರೋದು, ಹೊಸ ಹೊಸ inovation ಗಳಲ್ಲಿ ಮುಂದೆ ಬಂದಿರೋದು ಖುಷಿಯ ವಿಚಾರ.

2005 ರ recession ನ victim ಗಳಲ್ಲಿ ಎಷ್ಟೋ ಜನ ಇಂದು ಸ್ಟಾರ್ಟ್ ಅಪ್ ಗಳ ಓನರ್ ಗಳಾಗಿದ್ದಾರೆ ಸುಮಾರು ಜನ ಬ್ಯುಸಿನೆಸ್ ನಲ್ಲಿ well established ಆಗಿದ್ದಾರೆ.

ಒಂದು ಬಾಗಿಲು ಮುಚ್ಚಿತು ಅಂತ ಅದೇ ಬಾಗಿಲ ಮುಂದೆ ಅಳುತ್ತಾ ಕೂತಿದ್ದರೆ ಹೇಗೆ? ಕಳೆದು ಕೊಂಡ ಅವಕಾಶಗಳ ಕಾರಣಕ್ಕೆ ನಮ್ಮವರ ಮೇಲೆ ಸಿಟ್ಟು ತೋರಿಸಿ ಅವ್ರ ಮನಸ್ಸಿಗೆ ಘಾಸಿ ಮಾಡುವುದು ಎಷ್ಟು ಸರಿ? ಮುಂದೆ ಸಾಗಬೇಕು ಪ್ರೀತಿ ಹಂಚಬೇಕು. ಬದುಕು ಮತ್ತು ಸಂಬಂಧಗಳು ದೊಡ್ಡವು ಅಲ್ವಾ?

ಕಾವ್ಯಶ್ರೀ

ದೊಡ್ಡಬಳ್ಳಾಪುರದ ಇವರು ಸಾಫ್ಟ್‌ವೇರ್ ಇಂಜಿನಿಯರ್

Related Articles

ಇತ್ತೀಚಿನ ಸುದ್ದಿಗಳು