Saturday, June 15, 2024

ಸತ್ಯ | ನ್ಯಾಯ |ಧರ್ಮ

ಗಂಧದಗುಡಿ ಚಿತ್ರದ ಟ್ರೇಲರ್‌ ನೋಡಿ ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಬೆಂಗಳೂರು : ಅಪ್ಪು ಅಭಿನಯದ ʼಗಂಧದಗುಡಿʼ ಚಿತ್ರದ ಟ್ರೇಲರ್‌ ನೋಡಿದ ಪ್ರಧಾನಿ ನರೇಂದ್ರ ಮೋದಿ, ಪುನೀತ್‌ ರಾಜ್‌ಕುಮಾರ್‌ ಮತ್ತು  ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ಇಂದು ನಾಡಿನಾದ್ಯಂತ ಕರ್ನಾಟಕ ರತ್ನ ಪುನೀತ್‌ ರಾಜ್‌ ಕುಮಾರ್‌ ಕೊನೆಯದಾಗಿ ಅಭಿನಯಿಸಿದ ʼಗಂಧದ ಗುಡಿʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರದ ಟ್ರೇಲರ್‌ ನೋಡಿದ ನರೇಂದ್ರ ಮೋದಿಯವರು ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಟ್ವೀಟ್‌ಗೆ  ಪ್ರತಿಕ್ರಿಯಿಸಿದ್ದು ಚಿತ್ರಕ್ಕೆ ಪ್ರಶಂಸೆ ವ್ಯಕ್ತಸಿದರು.

ಈ ಕುರಿತು ಟ್ವೀಟ್‌ ಮಾಡಿದ ಪ್ರಧಾನಿ ಮೋದಿ  “ಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರು ಒಬ್ಬ ತೇಜಸ್ಸಿನ, ಶಕ್ತಿದಾಯಕ  ಮತ್ತು ಹುಟ್ಟಿನಿಂದಲೇ  ಅಪ್ರತಿಮ ಪ್ರತಿಭೆವುಳ್ಳ  ವ್ಯಕ್ತಿಯಾಗಿದ್ದರು. #ಗಂಧದಗುಡಿ ಸಿನಿಮಾ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಸಂರಕ್ಷಣೆಗೆ ಅರ್ಪಣೆ ಮಾಡಿರುವ ಚಿತ್ರವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯಗಳು” ಎಂದು ಟ್ವೀಟ್‌ ಮಾಡುವುದರ ಮುಖಾಂತರ ಅಪ್ಪು ಚಿತ್ರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ನೋಡಿ: ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ನಿಜಕ್ಕೂ ದರೋಡೆಕೋರ ಆಗಿದ್ದರೆ?
ಕೆಳಜಾತಿ ಜನರು ಯಾವುದೇ ಮಹತ್ಸಾಧನೆಯನ್ನು ಮಾಡಿದಾಗ ಮೇಲ್ಜಾತಿಗಳು ಅವರ ಹುಟ್ಟನ್ನೆ ಅನುಮಾನಿಸುವ, ಅವರ ಚಾರಿತ್ರ್ಯವನ್ನು ತಿರುಚುವ ಯತ್ನ ನಡದೇ ಇದೆ. ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವ ಕಟ್ಟುಕಥೆ ಕೂಡ ಇಂತಹದ್ದೇ ಒಂದು ಪ್ರಯತ್ನ ಎನ್ನುವ ಸಂಶೋಧಕ, ಚಿಂತಕ ಡಾ.ಅರುಣ್‌ ಜೋಳದ ಕೂಡ್ಲಿಗಿ ಇಲ್ಲಿ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿಯ ಕುರಿತು ತಮ್ಮ ಆಳವಾದ ಅಧ್ಯಯನದ ವಿಚಾರಗಳನ್ನು ಹಂಚಿಕೊಂಡಿದ್ದಾರೆ
.

Related Articles

ಇತ್ತೀಚಿನ ಸುದ್ದಿಗಳು