ಗ್ಯಾಂಗ್‌ಗಳ ಮಾರಾಮಾರಿ: ಕರ್ತವ್ಯ ನಿಷ್ಠೆ ಪಾಲಿಸದ ಇಬ್ಬರು ಪೊಲೀಸರ ಅಮಾನತು

ಬೆಳಗಾವಿ : ಗಲಾಟೆಯಿಂದ ಇಬ್ಬರ ಕೊಲೆ ನಡೆದಿರುವುದು ತಿಳಿದಿದ್ದರೂ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸದ ಪೊಲೀಸರನ್ನು ಅಮಾನತುಗೊಳಿಸಿರುವ ಘಟನೆ ಬೆಳಗಾವಿಯ ಸುಳೇಭಾವಿ ಗ್ರಾಮದಲ್ಲಿ ನಡೆದಿದೆ.

ಅಕ್ಟೋಬರ್‌ 6 ರಂದು ಬೆಳಗಾವಿಯ ಸುಳೇಭಾವಿ ಎಂಬ ಗ್ರಾಮದಲ್ಲಿ ರಾತ್ರೋರಾತ್ರಿ ಎರಡು ಗ್ಯಾಂಗ್‌ಗಳ ನಡುವೆ ಗಲಾಟೆಗಳು ನಡೆದಿವೆ. ಗಲಭೆಯಲ್ಲಿ ಮಹೇಶ್‌ ಮತ್ತು ಪ್ರಕಾಶ್‌ ಎಂಬುವವರ ಹತ್ಯೆಯಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಮಾರಿಹಾಳ ಠಾಣೆ ಹೆಡ್‌ಕಾನ್ಸ್‌ಟೇಬಲ್‌ ಇಬ್ಬರಿಗೆ ಗ್ಯಾಂಗ್‌ಗಳ ಮಾರಾಮಾರಿಯ ಬಗ್ಗೆ ಮಾಹಿತಿ ಗೊತ್ತಿದ್ದರೂ ಠಾಣೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ನಿರ್ಲಕ್ಷ್ಯ ಮಾಡಿದ್ದಾರೆ. ಈ ಕಾರಣ ಇಬ್ಬರೂ ಪೊಲೀಸರನ್ನು ಅಮಾನತು ಮಾಡುವಂತೆ ಬೆಳಗಾವಿ ಪೊಲೀಸ್‌ ಆಯುಕ್ತ ಡಾ.ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

ಮಾರಿಹಾಳ ಠಾಣೆಯ ಬಿ.ಎಸ್‌ ಬಳಗಣ್ಣವರ್‌ ಮತ್ತು ಆರ್‌.ಎಸ್‌ ತಳೇವಾಡೆ ಅಮಾನತುಗೊಂಡ ಇಬ್ಬರು ಪೊಲೀಸ್‌ ಸಿಬ್ಬಂದಿಗಳಾಗಿದ್ದಾರೆ.

ಇದನ್ನೂ ನೋಡಿ: ಕಾಂತಾರ ಗೆಲುವಿನ ಹತ್ತು ಕಾರಣಗಳು ಇಲ್ಲಿವೆ ನೋಡಿ.

Related Articles

ಇತ್ತೀಚಿನ ಸುದ್ದಿಗಳು