Thursday, August 21, 2025

ಸತ್ಯ | ನ್ಯಾಯ |ಧರ್ಮ

ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ಬಿಜೆಪಿ ಮಾಜಿ ಸಂಸದ ಗೌತಮ್‌ ಗಂಭೀರ್?

ಸದ್ಯ, ಟಿ20 ವಿಶ್ವಕಪ್ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಯಾರು ಎಂಬುದೇ ಭಾರತೀಯ ಕ್ರಿಕೆಟ್‌ ಲೋಕದ ದೊಡ್ಡ ಚರ್ಚೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡದ ಚುಕ್ಕಾಣಿಯನ್ನು ಯಾರಿಗೆ ಹಸ್ತಾಂತರಿಸಲಿದೆ? ಏಕೆಂದರೆ ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅಧಿಕಾರಾವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಗೌತಮ್ ಗಂಭೀರ್ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಹಲವು ಹೆಸರುಗಳು ಮುಂದೆ ಬರುತ್ತಿವೆ. ಇದರಲ್ಲಿ ದೇಶದ ಜೊತೆಗೆ ಹೊರ ದೇಶಗಳ ಮಾಜಿ ಆಟಗಾರರ ಹೆಸರುಗಳೂ ಇವೆ, ಆದರೆ ಸದ್ಯಕ್ಕೆ ಟೀಂ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ಗೌತಮ್ ಗಂಭೀರ್ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಗೌತಮ್ ಗಂಭೀರ್ ಅವರನ್ನು ಹೊಸ ಮುಖ್ಯ ಕೋಚ್ ಮಾಡಲು ಬಿಸಿಸಿಐ ಒಲವು ಹೊಂದಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಮಂಡಳಿಯು ಗೌತಮ್ ಗಂಭೀರ್ ಅವರೊಂದಿಗೂ ಮಾತುಕತೆ ನಡೆಸಿದೆ. ಸದ್ಯ ಗಂಭೀರ್ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ.

IPL 2024 ಮೇ 26ರಂದು ಕೊನೆಗೊಳ್ಳಲಿದೆ. ಈ ತಂಡದ ಟೂರ್ನಿಯ ಅಂತಿಮ ಪಂದ್ಯ ಅಂದು ನಡೆಯಲಿದೆ. ಅದೇ ಸಮಯದಲ್ಲಿ, ಬಿಸಿಸಿಐ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ತಾರೀಖು ಕೊನೆಯ ದಿನ. ಆ ದಿನದಂದೇ ಗಂಭೀರ್‌ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಈ ದಿನವನ್ನು ಆರಿಸಿಕೊಳ್ಳಲಾಗಿದೆ. ಏಕೆಂದರೆ ಐಪಿಎಲ್‌ ಮುಗಿಯದೆ ಗಂಭೀರ್‌ ಅರ್ಜಿ ಸಲ್ಲಿಸುವಂತಿಲ್ಲ.

ವರದಿಗಳನ್ನು ನಂಬುವುದಾದರೆ, ರಾಹುಲ್ ದ್ರಾವಿಡ್ ತಮ್ಮ ಅವಧಿ ವಿಸ್ತರಣೆ ಬಯಸುತ್ತಿಲ್ಲ.

ಈ ಹಿಂದೆ ದೆಹಲಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಗಂಭೀರ್‌ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದರು. ಆ ಸಮಯದಲ್ಲೂ ಅವರು ಕ್ಷೇತ್ರಕ್ಕಿಂತಲೂ ಹೆಚ್ಚು ಸಮಯ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page