ಗಾಜಾ: ಇಸ್ರೇಲ್ ದಾಳಿಯಲ್ಲಿ 85 ಸಾವು, ಹಸಿವಿನಿಂದ 29 ಸಾವು

ಗಾಜಾ: ಗಾಜಾ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದೆ. ಈ ದಾಳಿಗಳ ಪರಿಣಾಮವಾಗಿ ಈಗಾಗಲೇ ಸಾವಿರಾರು ಜನರು ಸಾವಿಗೀಡಾಗಿದ್ದಾರೆ. ಆದರೂ ಇಸ್ರೇಲ್ ಭೂಮಿಯನ್ನು ಆಕ್ರಮಿಸಿಕೊಳ್ಳುವ ಸಲುವಾಗಿ ಪ್ಯಾಲೆಸ್ಟೀನಿಯನ್ನರನ್ನು ಕ್ರೂರವಾಗಿ ಕೊಲ್ಲುತ್ತಲೇ ಇದೆ.

ಗುರುವಾರ ಬೆಳಗಿನ ಜಾವ ಆರಂಭವಾದ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 85 ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಮತ್ತೊಂದೆಡೆ, ದಾಳಿಗಳಿಂದ ಮಾತ್ರವಲ್ಲ, ಹಸಿವಿನಿಂದ ಉಂಟಾಗುವ ಸಾವುಗಳೂ ಅಲ್ಲಿ ಹೆಚ್ಚುತ್ತಿವೆ.

ಗಾಜಾ ಆರೋಗ್ಯ ಸಚಿವಾಲಯವು ಇತ್ತೀಚೆಗೆ 29 ಮಕ್ಕಳು ಮತ್ತು ವೃದ್ಧರು ಹಸಿವಿನಿಂದ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದೆ. ಸಾವಿರಾರು ಪ್ಯಾಲೆಸ್ಟೀನಿಯನ್ನರು ಈಗಲೂ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಬಹಿರಂಗಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು