ದರ್ಶನ್ ಬಂಧನದ ಬೆನ್ನಲ್ಲೇ ಗೆಳತಿ ಪವಿತ್ರಾ ಗೌಡ ಪೊಲೀಸರ ವಶಕ್ಕೆ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಅವರನ್ನು ಬಂಧನವಾಗಿದ್ದು, ಇದೀಗ ಅವರ ಗೆಳತಿ ಪವಿತ್ರಾಗೌಡ ಅವರನ್ನೂ ಕೂಡ ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದರ್ಶನ್ ಆಪ್ತರಾದ ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೆಜ್ ಮಾಡಿದ್ದ ಎನ್ನಲಾದ ರೇಣುಕಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅದೇ ಕಾರಣಕ್ಕಾಗಿ ಚಿತ್ರದುರ್ಗದ ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿ ಕೊಲೆ ಮಾಡಲಾಗಿದೆ.

ಈಗಾಗಲೇ ಆರೋಪಿಗಳು ದರ್ಶನ್ ಸೂಚನೆ ಮೇರೆಗೆ ಕೊಲೆ ನಡೆಸಿರುವ ಬಗ್ಗೆ, ಕೊಲೆ ಸಂದರ್ಭದಲ್ಲಿ ಆರೋಪಿಗಳ ಜೊತೆಗೆ ದರ್ಶನ್ ಕೂಡ ಇದ್ದರು ಎಂಬ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ ಎಂಬುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಜೂನ್ 8ರಂದು ಆತನನ್ನು ಉದ್ಯಮಿ ವಿನಯ್ ಎಂಬುವವರ ಶೆಡ್ ನಲ್ಲಿ ಇರಿಸಿ, ಜೂನ್ 09 ರಂದು ಕೊಲೆ ಮಾಡಲಾಗಿದೆ. ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇದರ ಹೆಚ್ಚಿನ ವಿಚಾರಣೆಗಾಗಿ ಈಗ ಪೊಲೀಸರು ಪವಿತ್ರಾ ಗೌಡ ಅವರನ್ನೂ ವಶಕ್ಕೆ ಪಡೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು