Saturday, June 29, 2024

ಸತ್ಯ | ನ್ಯಾಯ |ಧರ್ಮ

‘ಗೋ’ಸ್ವಾಮಿ ಎಂಬ ಹಳೆಯ ‘ಹುಲಿ’, ಇಟ್ಸ್ ಟೈಮ್ ಟು ‘ಗೋ’ ಎಂದ ಜೂಲನ್

ಆಕೆ ಗೋ ಸ್ವಾಮಿ ಎಂಬ ಹೆಸರಿಗೆ ತಕ್ಕಂತೆ ನಿಜವಾದ ಗೋ ಗೆಟ್ಟರ್. ಹೆಸರಲ್ಲಿ ‘ಗೋ’ ಅಂತಿದ್ದರೂ, ಮೈದಾನಕ್ಕೆ ಇಳಿದರೆ ಆಕೆ ಥೇಟು ‘ಹುಲಿ’. ಕೈಯಲ್ಲಿ ಬಾಲ್ ಹಿಡಿದು ಬ್ಯಾಟ್ಸ್ ಮನ್ ಕಡೆ ನುಗ್ಗುತ್ತಿದ್ದರೆ ಕಣ್ಣಲ್ಲಿ ಕಾಣಿಸೋದು ಕೇವಲ ವಿಕೆಟ್ ತೆಗೆಯುವ ಹಂಬಲ. ಹೌದು, ಭಾರತದ ಹಿರಿಯ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿ ಈಗ ಅಂತರಾಷ್ಟ್ರೀಯ ಕ್ರಿಕಟ್ ಗೆ ವಿದಾಯ ಹೇಳಿದ್ದಾರೆ. ಭಾರತ ತಂಡಕ್ಕಾಗಿ ಇಷ್ಟು ವರ್ಷಗಳ ಅವರ ಕ್ರಿಕೆಟ್ ಸೇವೆ, ಸಾಧನೆ ಮತ್ತು ಮನರಂಜನೆಗೆ ಈಗ ತೆರೆ ಬಿದ್ದಿದೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್ ಜೂಲನ್ ಗೋಸ್ವಾಮಿ ಇನ್ನು ಮುಂದೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವುದನ್ನು ನೋಡಲಾಗುವುದಿಲ್ಲ. ಜೂಲನ್ ಸೆಪ್ಟೆಂಬರ್ 24 ರಂದು ‘ಹೋಮ್ ಆಫ್ ಕ್ರಿಕೆಟ್’ ಅಂದರೆ ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ತಮ್ಮ 20 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. 39 ವರ್ಷದ ಜೂಲನ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯವಾಗಿತ್ತು. ಈ ಹಾದಿಯಲ್ಲಿ ತಮ್ಮ ಕೊನೆಯ ಪಂದ್ಯದಲ್ಲಿ ವಿಶ್ವದಾಖಲೆಯನ್ನೂ ನಿರ್ಮಿಸಿದ್ದಾರೆ ಜೂಲನ್.

ಬಲಗೈ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಅಂತರಾಷ್ಟ್ರೀಯ ಕ್ರಿಕೆಟ್ ಜೀವನ ಒಂದು ಅದ್ಭುತ ಪಯಣ. ಅವರು 204 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಅವರು  255 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವೇಗದ ಬೌಲರ್ 7 ಬಾರಿ 4 ವಿಕೆಟ್ ಮತ್ತು ಎರಡು ಬಾರಿ 5 ವಿಕೆಟ್ಗಳನ್ನು ಪಡೆದಿದ್ದಾರೆ.

ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಜೂಲನ್ ನಂತರ, ಸ್ಟೆಫನಿ ಟೇಲರ್ ಸಕ್ರಿಯ ಆಟಗಾರರಲ್ಲಿ ಅತಿ ಹೆಚ್ಚು ಅಂದರೆ 152 ವಿಕೆಟ್‌ಗಳನ್ನು ಹೊಂದಿದ್ದಾರೆ. ಜೂಲನ್ 12 ಟೆಸ್ಟ್ ಪಂದ್ಯಗಳಲ್ಲಿ 44 ವಿಕೆಟ್ ಹಾಗೂ 68 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 56 ವಿಕೆಟ್ ಪಡೆದಿದ್ದಾರೆ. ಅಲ್ಲದೆ, ಮಹಿಳೆಯರ ODI ಕ್ರಿಕೆಟ್‌ನಲ್ಲಿ 10000 ಕ್ಕೂ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ ಮೊದಲ ಬೌಲರ್. ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಜೂಲನ್ ಈ ಸಾಧನೆ ಮಾಡಿದ್ದಾರೆ.

25 ನವೆಂಬರ್ 1982 ರಂದು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಚಕ್ಡಾ ಎಂಬ ಸಣ್ಣ ಪಟ್ಟಣದಲ್ಲಿ ಸರಳ ಕುಟುಂಬದಲ್ಲಿ ಜನಿಸಿದ ಈ ಆಟಗಾರ್ತಿ ಹುಡುಗರೊಂದಿಗೆ ಆಡುವ ಮೂಲಕ ಕ್ರಿಕೆಟ್ ಪ್ರಾರಂಭಿಸಿದರು. ಆರಂಭದ ದಿನಗಳಲ್ಲಿ ಜೂಲನ್ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರು. ಪ್ರತಿದಿನ ಅಭ್ಯಾಸಕ್ಕಾಗಿ ಲೋಕಲ್ ರೈಲಿನಲ್ಲಿ ಎರಡೂವರೆ ಗಂಟೆಗಳ ಕಾಲ ಪ್ರಯಾಣಿಸುತ್ತಿದ್ದರು.

ಜೂಲನ್ ಗೋಸ್ವಾಮಿ ತಮ್ಮ ವೇಗದ ಬೌಲಿಂಗ್‌ನಿಂದಾಗಿ ‘ಚಕ್ಡಾ ಎಕ್ಸ್‌ಪ್ರೆಸ್’ ಎಂದು ಕರೆಯಲ್ಪಟ್ಟರು. ಜೂಲನ್ ಗಂಟೆಗೆ 120 ಕಿಮೀ ವೇಗದಲ್ಲಿ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದರು. ಜೂಲನ್ ಗೋಸ್ವಾಮಿ ಫಿಟ್ನೆಸ್ ವಿಚಾರದಲ್ಲಿ ಯಾವತ್ತೂ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ಬಾರಿ ಗಾಯಗೊಂಡರೂ ಎಂದಿಗೂ ಛಲ ಬಿಡಲಿಲ್ಲ. ಜೂಲನ್ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಟೆಸ್ಟ್, ಏಕದಿನ ಹಾಗೂ ಟಿ20ಯಲ್ಲಿ ಒಟ್ಟು 353 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆ ನೋಡಿದರೆ ಬೆಳೆಯುವ ಪೈರು ಮೊಳಕೆಯಲ್ಲೇ ಎಂಬಂತೆ ಜೂಲನ್ 23 ನೇ ವಯಸ್ಸಿನಲ್ಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದರು. ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್ ಎನಿಸಿಕೊಂಡರು. ಜೂಲನ್ ಮಹಿಳಾ ವಿಶ್ವಕಪ್‌ನಲ್ಲೂ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ.

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅವರು ಒಟ್ಟು 40 ಬಲಿ ಪಡೆದಿದ್ದಾರೆ. ಅಲ್ಲದೆ, ಸುಮಾರು 6 ವಿಶ್ವಕಪ್‌ಗಳಲ್ಲಿ ಭಾಗವಹಿಸಿ, 2007 ರಲ್ಲಿ ಐಸಿಸಿ ಫೀಮೇಲೆ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ ಕೂಡಾ ಪಡೆದಿದ್ದಾರೆ. 2010 ರಲ್ಲಿ, ಇವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2002 ರಲ್ಲಿ ಜೂಲನ್ ಅವರ ಚೊಚ್ಚಲ ಪಂದ್ಯದ ನಂತರ ಅನೇಕ ಮಹಿಳಾ ಕ್ರಿಕೆಟಿಗರು ಬಂದು ಹೋಗಿದ್ದಾರೆ. ಆದರೆ ಬಂಗಾಳದ ಈ ಬೌಲರ್ ಇಲ್ಲಿಯವರೆಗೂ ತಮ್ಮನ್ನು ತಾವು ಸಮರ್ತಿಸಿಕೊಂಡಿದ್ದಾರೆ ಮತ್ತು ದೊಡ್ಡ ಕ್ರಿಕೆಟ್ ತಾರೆಯಾಗಿ ಹೊರಹೊಮ್ಮಿದ್ದಾರೆ.

ಕಳೆದ 20 ವರ್ಷಗಳಲ್ಲಿ ಅವರು ಯುವ ಆಟಗಾರ್ತಿಯರಿಗೆ ಮಾದರಿಯಾಗಿದ್ದಾರೆ. ದೇಶದ ಮೂಲೆ ಮೂಲೆಯ  ಯುವ ಆಟಗಾರ್ತಿಯರು ಅವರನ್ನು ತಮ್ಮ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ. ಜೂಲನ್ ಯುವ ಆಟಗಾರರಲ್ಲಿ ‘ಜೂಲನ್ ದೀ’ ಎಂದು ಪ್ರಸಿದ್ಧರಾಗಿದ್ದರು. ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ  ಅವರಿಗೆ ಅಭಿಮಾನಿಗಳಿದ್ದಾರೆ.  ಪಾಕಿಸ್ತಾನದ ಬೌಲರ್ ಕೈನಾತ್ ಇಮ್ತಿಯಾಜ್ ಇತ್ತೀಚೆಗೆ ಜೂಲನ್ ಅವರನ್ನು ನೋಡಿದ ನಂತರವೇ ತಾನು ವೇಗದ ಬೌಲರ್ ಆಗಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಜೂಲನ್ ಗೋಸ್ವಾಮಿ 1997 ರ ವಿಶ್ವಕಪ್‌ನಲ್ಲಿ ಬಾಲ್ ಗರ್ಲ್ (ಮೈದಾನದ ಹೊರಗೆ ಬಿದ್ದ ಚೆಂಡನ್ನು ಹಿಂತಿರುಗಿಸುವುದು) ಆಗಿದ್ದರು. ಅಂತಹ ಹುಡುಗಿ ಇಂದು ಭಾರತೀಯ ಕ್ರಿಕೆಟ್ ನಲ್ಲಿ ಏರಿರುವ ಎತ್ತರ ಎಲ್ಲರ ಕಣ್ಣ ಮುಂದಿದೆ. ಹಾಗಾಗಿ ಅವರ ಎಲ್ಲರ ಕ್ರಿಕೆಟ್ ದಾಖಲೆಗಳು ಮತ್ತು ಅವರ ಕ್ರಿಕೆಟ್ ಪ್ರೀತಿ ಅವರ ನಿವೃತ್ತಿಯ

🔶 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ದಯವಿಟ್ಟು ನನ್ನೂರಿಗೆ ಮನುಷ್ಯರನ್ನು ಹುಟ್ಟಿಸು ಕಳಿಸು ದೇವಾ ಎಂಬ ಆರ್ದ್ರ ಆರ್ತನಾದದ ಈ ಕವಿತೆ ಪ್ರಸ್ತುತ ಸನ್ನಿವೇಶಗಳಿಗೆ ಕನ್ನಡಿ ಹಿಡಿದಂತಿದೆ. ಕವಯಿತ್ರಿ ಫಾತಿಮಾ ರಲಿಯಾ ಅವರ ಈ ಕವಿತೆಯನ್ನು ಒಮ್ಮೆ ಕೇಳಿಸಿಕೊಳ್ಳಿ…
ಇದನ್ನೂ ನೋಡಿ:
https://www.facebook.com/watch?v=808934966912602

Related Articles

ಇತ್ತೀಚಿನ ಸುದ್ದಿಗಳು