ಭೋಪಾಲ್: ಬುಡಕಟ್ಟು ಸಮುದಾಯದ ಕಾರ್ಮಿಕರಿಗೆ ಭೂಮಿಯಲ್ಲಿ ಸಿಕ್ಕ ಬ್ರಿಟಿಷರ ಕಾಲದ 240 ಚಿನ್ನದ ನಾಣ್ಯಗಳ ಪೈಕಿ 239 ನಾಣ್ಯಗಳನ್ನು ಪೊಲೀಸರೇ ಲೂಟಿ ಮಾಡಿರುವ ಆರೋಪದ ಮೇರೆಗೆ ಮಧ್ಯಪ್ರದೇಶದ ಅಲಿಘರ್‌ಪುರ ಜಿಲ್ಲೆಯಲ್ಲಿ ನಾಲ್ವರು ಪೊಲೀಸರನ್ನು ಬಂಧಿಸಲಾಗಿದೆ. ಗುಜರಾತ್‌ನ ಕಾಮಗಾರಿ ಪ್ರದೇಶವೊಂದರಲ್ಲಿ ಕೆಲಸ ಮಾಡುತ್ತಿರುವಾಗ ರಮು ಎಂಬ ಕಾರ್ಮಿಕ ಮಹಿಳೆ ಮತ್ತು ಅವರ ಮಗಳಿಗೆ ಚಿನ್ನದ ನಾಣ್ಯಗಳಿದ್ದ ಬ್ಯಾಗ್ ಒಂದು ಸಿಕ್ಕಿದೆ.
ಬಳಿಕ ಅವರು ಯಾರಿಗೂ ಹೇಳದೇ ಅದನ್ನು ತಮ್ಮ ಊರಿಗೆ ಕೊಂಡೊಯ್ದಿದ್ದಾರೆ. ವಿಚಾರ ಹೇಗೋ ಹಳ್ಳಿಗರಿಗೆ ತಿಳಿದ ಬೆನ್ನಲ್ಲೇ, ನಾಲ್ವರು ಪೊಲೀಸರು ಬಂದು ಚಿನ್ನದ ನಾಣ್ಯಗಳನ್ನು ಕೊಂಡೊಯ್ದಿದ್ದಾರೆ.
ಮಹಿಳೆ 20 ನಾಣ್ಯಗಳನ್ನು ಬಚ್ಚಿಟ್ಟು ಬಳಿಕ 240 ನಾಣ್ಯದ ಲೆಕ್ಕ ನೀಡಿದ್ದಾರೆಂಬ ವಾದಗಳೂ ಇವೆ. ಆದರೆ, ಮಹಿಳೆ ಇದ್ದಿದ್ದೇ 240 ನಾಣ್ಯಗಳು. ಅದರಲ್ಲಿ 239 ನಾಣ್ಯಗಳನ್ನೂ ಪೊಲೀಸರೇ ಕೊಂಡೊಯ್ದಿದ್ದಾರೆ ಎಂದು ಹೇಳಿಕೆ ನೀಡಿ, ಪೊಲೀಸರ ವಿರುದ್ಧ ದೂರು ದಾಖಲಿಸಿದ್ದಾರೆ.