Wednesday, January 28, 2026

ಸತ್ಯ | ನ್ಯಾಯ |ಧರ್ಮ

ಗೃಹಲಕ್ಷ್ಮಿಯರಿಗೆ ಸಿಹಿ ಸುದ್ದಿ 20ನೇ ಕಂತಿನ ಹಣ ಬಿಡುಗಡೆ

ಬೆಂಗಳೂರು : ರಾಜ್ಯದ ಮಹಿಳೆಯರ ಜೀವನೋಪಾಯವನ್ನು ಸುಧಾರಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಇದೀಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದ್ದು, ಯೋಜನೆಯ 20ನೇ ಕಂತಿನ ಹಣ ಬಿಡುಗಡೆಯಾಗಿದೆ. ಗೃಹಲಕ್ಷ್ಮಿ ಯೋಜನೆಯ 20ನೇ ಕಂತಿನ ಹಣವಾದ 2,000 ರೂಪಾಯಿಯನ್ನು ಜೂನ್-2025 ತಿಂಗಳ ಆರಂಭದಲ್ಲೇ ಕುಟುಂಬದ ಯಜಮಾನಿಯರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ.

ಈ ಹಿಂದೆ ಡಿಸೆಂಬರ್-2024 ತಿಂಗಳ ಹಣ ಅಂದರೆ 17ನೇ ಕಂತಿನ ಹಣವನ್ನು 11ಮಾರ್ಚ್ 2025 ರಂದು ಮತ್ತು 18ನೇ ಕಂತಿನ ಜನವರಿ-2025 ತಿಂಗಳ ಹಣವನ್ನು 30ಮಾರ್ಚ್ 2025 ರಂದು ಹಾಗೂ ಫೆಬ್ರವರಿ ತಿಂಗಳ 19ನೇ ಕಂತಿನ ಹಣವನ್ನು 19ಮೇ 2025ರಂದು ಜಮಾ ಮಾಡಲಾಗಿತ್ತು. ಅದರಂತೆ ಈಗ ರಾಜ್ಯ ಸರ್ಕಾರ ಮಾರ್ಚ್ ತಿಂಗಳ ಅಂದರೆ 20ನೇ ಕಂತಿನ ಹಣವನ್ನು ನಿನ್ನೆ ರಾಜ್ಯದ 1.28 ಕೋಟಿ ಮಹಿಳೆಯರ ಖಾತೆಗೆ ಬಿಡುಗಡೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page