Friday, April 18, 2025

ಸತ್ಯ | ನ್ಯಾಯ |ಧರ್ಮ

ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಗ್ರಾಮ ಪಂಚಾಯತ್‌ ಸದಸ್ಯರಿಂದ ಹಲ್ಲೆ

ಕೋಲಾರ: ಹಿರಿಯ ಸಾಹಿತಿ, ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಸ್ಥಳೀಯ ಪಂಚಾಯತ್‌ ಸದಸ್ಯರಿಬ್ಬರು ಸೇರಿದಂತೆ ಹಲವರು ದಾಳಿ ಎಸಗಿ ಹಲ್ಲೆ ಮಾಡಿದ್ದಾರೆ. ದಾಳಿಗೊಳಗಾದ ರಾಮಯ್ಯನವರನ್ನು ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಊರಿನಲ್ಲಿ ಹಬ್ಬದ ಪ್ರಯುಕ್ತ ಕಳೆದ ಮೂರು ದಿನಗಳಿಂದ ಲೌಡ್‌ ಸ್ಪೀಕರ್‌ ಹಾಕಲಾಗಿತ್ತು. ಇಂದು ಬೆಳಗ್ಗೆ ರಾಮಯ್ಯನವರು ಸ್ಪೀಕರ್‌ ಹಾಕಿರುವಲ್ಲಿಗೆ ಹೋಗಿ ಹಬ್ಬ ಮುಗಿದಿದೆಯಲ್ಲ ಓದಲು ತೊಂದರೆಯಾಗುತ್ತಿದೆ ದಯವಿಟ್ಟು ಮೈಕ್‌ ಸೌಂಡ್‌ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದಾರೆ.

ನಂತರ ರಾಮಣ್ಣನವರ ಮೇಲೆ ಪಾಪರಾಜನಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಮಂಜುನಾಥ, ಬೈರಪ್ಪ ತೇರಹಳ್ಳಿ ಮೆಂಬರ್ ಮುನಿಯಪ್ಪ ಎನ್ನುವವರು ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ರಾಮಯ್ಯನವರನ್ನು ಕೋಲಾರದ ಆಸ್ಪತ್ರೆಗೆ ಸೇರಿಸಲಾಗಿದ್ದು ಗಾಯಗೊಂಡಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page