Monday, July 7, 2025

ಸತ್ಯ | ನ್ಯಾಯ |ಧರ್ಮ

ಶಾಲಾ ಕಾಲೇಜುಗಳಿಂದಲೇ ಕಡ್ಡಾಯ ‘ಹೃದಯ ತಪಾಸಣೆ’ಗೆ ಸರ್ಕಾರ ಚಿಂತನೆ: ಸಚಿವ ರಾಜಣ್ಣ

ತೀರಾ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆಲ್ಲಾ ಹೃದಯಾಘಾತ ಸಂಭವಿಸಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ಮಕ್ಕಳಿಗಾಗಿಯೇ ಕಡ್ಡಾಯ ‘ಹೃದಯ ತಪಾಸಣೆ’ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.

ಅತಿ ಹೆಚ್ಚು ಹೃದಯಾಘಾತ ಪ್ರಕರಣಗಳನ್ನು ಕಾಣುತ್ತಿರುವ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಎಲ್ಲ ಆಸ್ಪತ್ರೆಗಳಲ್ಲಿಯೂ ಹೃದಯಾಘಾತಕ್ಕೆ ಕಾರಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಂಡು ಜಾಗೃತಿ ಮೂಡಿಸಲು ಎಲ್ಲಾ ಜಿಲ್ಲಾಡಳಿತಕ್ಕೂ ಕರೆ ನೀಡಲಾಗಿದೆ ಎಂದು ಸಚಿವ ರಾಜಣ್ಣ ಮಾಹಿತಿ ನೀಡಿದ್ದಾರೆ.

ತಾವು ಉಸ್ತುವಾರಿ ಸಚಿವರಾಗಿರುವ ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ತಪಾಸಣೆ ಜೊತೆಗೆ ಜಾಗೃತಿಯೂ ಮೂಡಿಸಬೇಕಿದೆ. ಆಹಾರ ಪದ್ದತಿ ಬದಲಾವಣೆ, ಬದಲಾದ ಜೀವನ ಶೈಲಿ, ವಂಶ ಪಾರಂಪರ್ಯ ಸೇರಿ ಹಲವು ಕಾರಣಗಳಿವೆ. ಆದರೆ, ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ಖಚಿತ ಮಾಹಿತಿ ಪಡೆಯಲು ಮೃತಪಟ್ಟ ಕುಟುಂಬದವರ ಮನ ಒಲಿಸಿ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲು ಸಚಿವ ರಾಜಣ್ಣ ಮುಂದಾಗಿದ್ದಾರೆ. ಅದರ ಜೊತೆಗೆ ರಾಜ್ಯಾದ್ಯಂತ ಇದನ್ನು ವಿಸ್ತರಿಸಲು ತಜ್ಞರ ಸಮಿತಿ ರಚನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page