ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ನಿನ್ನೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಕುರಿತು ಚರ್ಚೆ ನಡೆಸಲಾಯಿತು.
ಇಲ್ಲಿಯವರೆಗೆ ಬೇಡಿಕೆ ಇದ್ದದ್ದು ಒಳಮೀಸಲಾತಿ ಹಂಚಿಕೆಗೆ ಬೇಡಿಕೆ ಇತ್ತು. ಸಧ್ಯದ ಮಾಹಿತಿ ಪ್ರಕಾರ ಐದು ಗುಂಪುಗಳ ಬದಲಾಗಿ ಮೂರು ವರ್ಗವನ್ನು ಮಾಡುವುದಕ್ಕೆ ಸಚಿವ ಸಂಪುಟ ನಿರ್ಧಾರ ಮಾಡಿದೆ ಎನ್ನಲಾಗಿದೆ. ಎಡಗೈಗೆ ಆರು, ಬಲಗೈಗೆ ಆರು, ಇತರರಿಗೆ ನಾಲ್ಕು ಮೀಸಲಾತಿ ನೀಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಜಸ್ಟಿಸ್ ನಾಗಮೋಹನ್ ದಾಸ್ ವರದಿಯಲ್ಲಿ ಐದು ವರ್ಗಗಳಿಗೆ ಮೀಸಲಾತಿಗೆ ವರದಿ ಸಿದ್ದಪಡಿಸಿತ್ತು. ಈ ವರದಿಯು ಎಸ್ಸಿ (ಬಲ), ಎಸ್ಸಿ (ಎಡ) ಮತ್ತು ಅಲೆಮಾರಿ ಸಮುದಾಯಗಳ ನಡುವೆ ಎಸ್ಸಿಗಳಿಗೆ 17% ಮೀಸಲಾತಿಯನ್ನು ಹಂಚಿಕೊಳ್ಳಲು ಶಿಫಾರಸು ಮಾಡಿದೆ. ವರದಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದ್ದು, ಜಾರಿಗೆ ತರುವ ಕುರಿತು ಕೆಲವು ಸಮಗ್ರವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಂಡ ಬಗ್ಗೆ ಸಂಪುಟ ಸಭೆಯಲ್ಲಿ ತಿಳಿಸಲಾಯಿತು.
ಸುಪ್ರಿಂಕೋರ್ಟ್ ಕೋರ್ಟ್ ಕೂಡ ಒಳಮೀಸಲಾತಿಯನ್ನು ಜಾರಿ ತರುವುದು ಆಯಾ ರಾಜ್ಯಗಳ ಕರ್ತವ್ಯ ಅಂತ ಹೇಳಿತ್ತು, ಆದಾದ ಬಳಿಕ ರಾಜ್ಯದಲ್ಲಿ ಒಳಮೀಸಲಾತಿಯ ಹೋರಾಟ ಇನ್ನೂ ಹೆಚ್ಚಾಗಿತ್ತು, ಇದಲ್ಲದೇ ಒಳಮೀಸಲಾತಿಯನ್ನು ಜಾರಿ ಮಾಡದೇ ಯಾವುದೇ ಸರ್ಕಾರಿ ನೇಮಕಾತಿಯನ್ನು ಮಾಡಿಕೊಂಡಿರಲಿಲ್ಲ. ಈಗ ಒಳಮೀಸಲಾತಿ ಜಾರಿಗೆ ತಂದಿರುವುದರಿಂದ ಇನ್ನೊಂದು ತಿಂಗಳಿನಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇನ್ನು ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿದೆ ಎನ್ನಲಾಗಿದೆ. ಕೆಲವು ಮಂದಿ ಶಾಸಕರು ವರದಿಯನ್ನು ತಿರಸ್ಕಾರ ಮಾಡಿ ಮತ್ತೆ ಸರ್ವೆ ನಡೆಸುವುಂತೆ ಜೋರು ಧ್ವನಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಎರಡು ಕಡೆಯವರನ್ನು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.
ಕೆಲವು ಮಂದಿ ಶಾಸಕರು ವರದಿಯನ್ನು ತಿರಸ್ಕಾರ ಮಾಡಿ ಮತ್ತೆ ಸರ್ವೆ ನಡೆಸುವುಂತೆ ಜೋರು ಧ್ವನಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಎರಡು ಕಡೆಯವರನ್ನು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ. ಹಲವು ಸಮುದಾಯದವರು ಮೀಸಲಾತಿಯನ್ನು ಪಡೆದುಕೊಂಡು ಉನ್ನತ ಸ್ಥಾನಕ್ಕೆ ಹೋಗುತ್ತಿದ್ದಾರೆ. ಮೀಸಲಾತಿಯ ಲಾಭವನ್ನು ಒಂದೇ ವರ್ಗದವರು ಉಣ್ಣುತ್ತಿದ್ದಾರೆ ನೈಜ ದಲಿತರಿಗೆ ಸರಿಯಾಗಿ ಮೀಸಲಾತಿ ಸಿಗುತ್ತಿಲ್ಲ, ದಲಿತರಲ್ಲದವರು ಕೂಡ ಪ.ಜಾತಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ ಅಂತಹವರನ್ನು ಪ.ಜಾತಿಯಿಂದ ಕೈಬಿಡಬೇಕು ಅಂತ ಮೂಲ ದಲಿತರ ಕಳೆದ ಐದು ದಶಕಗಳಿಂದ ಹಲವು ರೀತಿಯ ಹೋರಾಟವನ್ನು ನಡೆಸುತ್ತಿದ್ದರು, ಹಾಗಾಗಿ ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.