ನಂದಿನಿ ಹಾಲಿನ ದರ 3ರೂ ಏರಿಕೆಗೆ ಮುಂದಾಗಿ ಬಿಗ್‌ ಶಾಕ್‌ ನೀಡಿದ ಸರ್ಕಾರ

ಬೆಂಗಳೂರು : ಬಸ್ ಹಾಗೂ ಮೆಟ್ರೋ ಪ್ರಯಾಣದ ದರ ಹೆಚ್ಚಳ ಬೆನ್ನಲ್ಲೇ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ. ನಂದಿನಿ ಹಾಲಿನ ದರ ಕನಿಷ್ಠ ರೂ.3ಗೆ ಸರ್ಕಾರ ಹೆಚ್ಚಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.ದರ ಏರಿಕೆ ಕುರಿತಾಗಿ ಕೆಎಂಎಫ್​​​​, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು, ಸಂಬಂಧಿಸಿದ ಸಚಿವ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರಿಂದು ಮಹತ್ವದ ಸಭೆಯಲ್ಲಿ ಚರ್ಚಿಸಲಿದ್ದಾರೆ.

ಈಗಾಗಲೇ ಪ್ರತಿ ಲೀಟರ್ ಗೆ ರೂ.5 ಹೆಚ್ಚಳಕ್ಕೆ ಹಾಲು ಒಕ್ಕೂಟಗಳು ಸರ್ಕಾರ ಎದುರು ತಮ್ಮ ಬೇಡಿಕೆ ಇಟ್ಟಿವೆ. ಸಭೆಯ ನಂತರದಲ್ಲಿ ಸರ್ಕಾರ ಹಾಲಿನ ದರ ಅಂದಾಜು ರೂ.3ಕ್ಕೇರಿಸುವ ನಿರೀಕ್ಷೆ ಇದೆ. ಪಶು ಆಹಾರ, ಮೇವು, ಕೂಲಿ ಸೇರಿ ಇತರೆ ಖರ್ಚು ಹೆಚ್ಚಾಗಿರುವುದರಿಂದ ಹಾಲಿನ ದರ ಹೆಚ್ಚಳಕ್ಕೆ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ.

Related Articles

ಇತ್ತೀಚಿನ ಸುದ್ದಿಗಳು