Monday, April 28, 2025

ಸತ್ಯ | ನ್ಯಾಯ |ಧರ್ಮ

‘ಧರ್ಮ ಕೇಳಿ ಗುಂಡಿಟ್ಟ ವರದಿ’ ಮಾಡದ BBC ನಡೆಯ ವಿರುದ್ಧ ಕೇಂದ್ರ ಸರ್ಕಾರ ಆಕ್ಷೇಪ

ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಸುದ್ದಿ ವಾಹಿನಿ ಬಿಬಿಸಿ ಮಾಡಿದ ವರದಿಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ವರದಿಯ ಬಗ್ಗೆ ಬಿಬಿಸಿ ಸಂಸ್ಥೆಗೆ ಬರೆದ ಔಪಚಾರಿಕ ಪತ್ರದಲ್ಲಿ ಕೇಂದ್ರ ಸರ್ಕಾರ ತನ್ನ ಅಸಮಾಧಾನ ಹೊರಹಾಕಿದೆ.

ಬಿಬಿಸಿ ಸಂಸ್ಥೆ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಮಾಡಿದ ವರದಿಯಲ್ಲಿ ಉಗ್ರರು ಧರ್ಮ ಕೇಳಿ ದಾಳಿ ನಡೆಸಿದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿಲ್ಲ ಎಂದು ತನ್ನ ಆಕ್ಷೇಪ ಪತ್ರದಲ್ಲಿ ತಿಳಿಸಿದೆ. ಜೊತೆಗೆ ಭಯೋತ್ಪಾದಕ ದಾಳಿಯನ್ನು ಬಂಡುಕೋರರ ದಾಳಿ ಎಂದು ಉಲ್ಲೇಖಿಸಿದ ಕಾರಣಕ್ಕೆ ತನ್ನ ಅಸಮಾಧಾನ ಹೊರಹಾಕಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಕಾರ್ಯಾಲಯ ಬಿಬಿಸಿ ವರದಿಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಲಾಗಿದೆ. ಬಿಬಿಸಿ ಭಾರತ ವಿರೋಧಿ ವರದಿ ಮಾಡಿದೆ. ಇನ್ನು ಮುಂದೆ ಹೀಗೆ ಆಗಬಾರದು. ಭಯೋತ್ಪಾದಕ ದಾಳಿಯನ್ನು ‘ಬಂಡುಕೋರರ ದಾಳಿ’ ಎಂದು ಬಿಂಬಿಸುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಮಸಿ ಬಳಿಯುವ ಕೆಲಸ ಎಂದು ಕೇಂದ್ರ ಆಕ್ಷೇಪ ವ್ಯಕ್ತಪಡಿಸಿದೆ.

ಬಿಬಿಸಿಯ ಭಾರತದ ಮುಖ್ಯಸ್ಥ ಜಾಕಿ ಮಾರ್ಟಿನ್ ಅವರಿಗೆ ತನ್ನ ಕಳವಳವನ್ನು ತಿಳಿಸಿದ ಸರ್ಕಾರ, ಭಯೋತ್ಪಾದಕರ ಬದಲು “ಬಂಡುಕೋರ” ಎಂಬ ಪದವನ್ನು ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು, ಭಯೋತ್ಪಾದಕರಿಂದ ಗುಂಡಿಕ್ಕಿ ಕೊಲ್ಲಲ್ಪಡುವ ಮೊದಲು ಜನರು ಕೇಳಿದ ಧರ್ಮವನ್ನು ವರದಿಯು ಕಡೆಗಣಿಸಿದೆ ಎಂದು ಹೇಳಿದೆ. ಭವಿಷ್ಯದಲ್ಲಿ ಸಂವೇದನೆಗಳನ್ನು ನೋಯಿಸದಂತೆ ಸರ್ಕಾರವು ಚಾನೆಲ್ ಗೆ ಸೂಚಿಸಿದೆ. ಭವಿಷ್ಯದಲ್ಲಿ ಭಯೋತ್ಪಾದಕ ದಾಳಿಯ ಬಗ್ಗೆ ಬಿಬಿಸಿ ವರದಿಯ ಮೇಲೆ ವಿದೇಶಾಂಗ ಸಚಿವಾಲಯ ಕಣ್ಣಿಡಲಿದೆ ಎಂದು ಸರ್ಕಾರ ಬಿಬಿಸಿಗೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page