Saturday, August 30, 2025

ಸತ್ಯ | ನ್ಯಾಯ |ಧರ್ಮ

ಹಂಗಾಮಿ ಡಿಜಿ, ಐಜಿಪಿ ಆಗಿದ್ದ ಡಾ.ಎಂ.ಎ.ಸಲೀಂ ಅವರನ್ನ ಖಾಯಂಗೊಳಿಸಿ ಸರ್ಕಾರದ ಆದೇಶ

ಸರ್ಕಾರದಿಂದ ಹಂಗಾಮಿ ಡಿಜಿ ಮತ್ತು ಐಜಿಪಿಯಾಗಿ ಆಯ್ಕೆಯಾಗಿದ್ದ ಡಾ.ಎಂ.ಎ ಸಲೀಂ ಅವರನ್ನು ನೂತನ ಡಿಜಿ ಮತ್ತು ಐಜಿಪಿಯಾಗಿ ಖಾಯಂಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಡಾ. ಎಂ. ಎ. ಸಲೀಂ, ಐಪಿಎಸ್ (ಕೆಎನ್: 1993), ಪೊಲೀಸ್ ಮಹಾನಿರ್ದೇಶಕರು, ಅಪರಾಧ ತನಿಖಾ ಇಲಾಖೆ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರು, ಕರ್ನಾಟಕ, ಬೆಂಗಳೂರು ಇವರನ್ನು ಕರ್ನಾಟಕ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರ್ದೇಶಕರು (ಪೊಲೀಸ್ ಪಡೆಯ ಮುಖ್ಯಸ್ಥರು) ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಐಪಿಎಸ್ (ವೇತನ) ನಿಯಮಗಳು, 2016 ರ ವೇತನ ಮ್ಯಾಟ್ರಿಕ್ಸ್‌ನಲ್ಲಿ ಅಪೆಕ್ಸ್ ಸ್ಕೇಲ್, ಲೆವೆಲ್-17 ಅಂದರೆ ರೂ.2,25,000/- (ನಿಗದಿತ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಯಲ್ಲಿ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ ಎಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page